ಸಿಡಿ ಪ್ರಕರಣ; ಸಂತ್ರಸ್ತ ಯುವತಿ 2ನೇ ವಿಡಿಯೋ ಮೂಲಕ ಮತ್ತೆ ಪ್ರತ್ಯಕ್ಷ

ಬೆಂಗಳೂರು, ಮಾರ್ಚ್ 25; ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಮತ್ತೊಮ್ಮೆ ಪ್ರತ್ಯಕ್ಷವಾಗಿದ್ದಾಳೆ. ಎಸ್‌ಐಟಿ ಸಿಡಿ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.

Recommended Video

      ಮತ್ತೊಂದು ವಿಡಿಯೋ ರಿಲೀಸ್ ಮಾಡಿದ ಸಿಡಿ ಲೇಡಿ! ಎಸ್‌ಐಟಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಯುವತಿ | Oneindia Kannada

      ಗುರುವಾರ ಸಂತ್ರಸ್ತ ಯುವತಿ ಮತ್ತೆ ಪ್ರತ್ಯಕ್ಷವಾಗಿದ್ದಾಳೆ. 2ನೇ ವಿಡಿಯೋವನ್ನು ಬಿಡುಗಡೆ ಮಾಡಿದ್ದಾಳೆ. "ಎಸ್‌ಐಟಿ ಮುಂದೆ ಹಾಜರಾಗುತ್ತೇನೆ ಎಂದು ಹೇಳಿಕೆ ನೀಡಿದ್ದು, ಮೊದಲು ನನಗೆ ತಂದೆ-ತಾಯಿಯ ರಕ್ಷಣೆ ಮುಖ್ಯ" ಎಂದು ಹೇಳಿದ್ದಾಳೆ.

      Ramesh Jarkiholi CD Case Young Woman Release 2nd Video

      2ನೇ ವಿಡಿಯೋದಲ್ಲಿ ಎಸ್‌ಐಟಿ ವಿರುದ್ಧ ಯುವತಿ ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ನನ್ನ ತಂದೆ ತಾಯಿಗೆ ರಕ್ಷಣೆ ಕೊಡಬೇಕು ಎಂದು ವಿಪಕ್ಷ ನಾಯಕರು, ಮಹಿಳಾ ಆಯೋಗಕ್ಕೆ ಮನವಿ ಮಾಡಿದ್ದಾಳೆ. ತಂದೆ ತಾಯಿಗೆ ರಕ್ಷಣೆ ಕೊಟ್ಟರೆ ಎಸ್‌ಐಟಿ ಮುಂದೆ ಬಂದು ಹೇಳಿಕೆ ನೀಡುತ್ತೇನೆ ಎಂದು ತಿಳಿಸಿದ್ದಾಳೆ.

      "ಎಸ್‌ಐಟಿ ಯಾವ ಪರವಾಗಿ ಕೆಲಸ ಮಾಡುತ್ತಿದೆ?" ಎಂದು ಪ್ರಶ್ನೆ ಮಾಡಿದ್ದಾಳೆ. ಮಾರ್ಚ್ 12ರಂದು ನಾನು ವಿಡಿಯೋ ಕಳಿಸಿದ್ದೇನೆ. ಎಸ್‌ಐಟಿ ಪೊಲೀಸರು ಒಂದು ದಿನ ಕಾದು ರಮೇಶ್ ಜಾರಕಿಹೊಳಿ ದೂರು ನೀಡಿದ ಬಳಿಕ ಅದನ್ನು ಬಿಡುಗೆ ಮಾಡಿದ್ದಾರೆ ಎಂದು ದೂರಿದ್ದಾಳೆ.

      "ಎಸ್‌ಐಟಿ ಯಾರ ಪರವಾಗಿದ್ದಾರೆಂದು ಅರ್ಥವಾಗುತ್ತಿಲ್ಲ. ನಮ್ಮ ತಂದೆ, ತಾಯಿ ಸ್ವ ಇಚ್ಛೆಯಿಂದ ಅಪಹರಣದ ದೂರು ನೀಡಿಲ್ಲ. ನಾನು ತಪ್ಪೇ ಮಾಡಿಲ್ಲ ಎಂದು ನಮ್ಮ ಪೋಷಕರಿಗೂ ಗೊತ್ತು" ಎಂದು ಯುವತಿ ವಿಡಿಯೋದಲ್ಲಿ ಹೇಳಿದ್ದಾಳೆ.

      "ಅವರು ದೂರು ನೀಡಿರುವುದಕ್ಕೆ ಸಾಧ್ಯವಿಲ್ಲ. ನನಗೆ ಯಾವತ್ತಿದ್ರು ನ್ಯಾಯ ಸಿಗುತ್ತೆ ಎಂಬ ವಿಶ್ವಾಸವಿದೆ" ಎಂದು ಹೇಳಿದ್ದಾಳೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+