ಬಾಲ್ಯ ವಿವಾಹ ತಡೆಗಟ್ಟಲು ಖಡಕ್ ಕ್ರಮ: ಅಧಿಕಾರಿಗಳಿಗೆ ಡಿಸಿ ಸೂಚನೆ!
ರಾಮನಗರ: ಬಾಲ್ಯ ವಿವಾಹ ತಡೆಗಟ್ಟಲು ಮಕ್ಕಳ ರಕ್ಷಣಾ ಘಟಕದ ನಿರೂಪಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೇರಿದಂತೆ ಐಸಿಡಿಎಸ್ ಮೇಲ್ವಿಚಾರಕಿಯರ ಒಳಗೊಂಡ ಸಮಿತಿ ಸದಾ ಎಚ್ಚರಿಕೆ ವಹಿಸಬೇಕು. ಬಾಲ್ಯ ವಿವಾಹದ ಬಗ್ಗೆ ಮಾಹಿತಿ ತಿಳಿದ ಕೂಡಲೇ ತಡೆಗೆ ಕ್ರಮವಹಿಸಬೇಕು. ಇಲ್ಲವಾದಲ್ಲಿ ಸಮಿತಿ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುತ್ತೇವೆ ಅಂತ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯರಾದ ಎಸ್. ಮಂಜು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಲಸೆ ಬಂದಿರುವ ಕಾರ್ಮಿಕರಿಗಾಗಿ & ಸಾರ್ವಜನಿಕರಿಗೆ & ಬಾಲನ್ಯಾಯ ಕಾಯ್ದೆ - 2015, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿಯ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದರು.

ಅರಿವು ಮೂಡಿಸಲು ಕಾರ್ಯಕ್ರಮ
ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಪೋಕ್ಸೋ ಕಾಯ್ದೆ-2012, ದತ್ತು ಪ್ರಕ್ರಿಯೆ ಮತ್ತೆ ಮಾಸಾಚರಣೆ, ಮಕ್ಕಳ ಸಹಾಯವಾಣಿ-1098/112 ಕುರಿತ ತರಬೇತಿ & ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ 2017 ರಿಂದ ಈವರೆಗೂ ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳಲ್ಲಿ ಆತ್ಮಹತ್ಯೆ ಪ್ರಕರಣ, ಬಾಲ್ಯ ವಿವಾಹ, ಮಾದಕ ವ್ಯಸನಿಗಳಾದ ಬಗ್ಗೆ ಎಸ್.ಮಂಜು ಆತಂಕ ವ್ಯಕ್ತಪಡಿಸಿದರು. ಜಿಲ್ಲೆಯ ಶಾಲೆಗಳಲ್ಲಿ ಮಕ್ಕಳಿಗೆ ಮಾದಕ ವಸ್ತು, ಬಾಲಾಪರಾಧ & ಕಾನೂನು ಕುರಿತು ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು.
1000 ರೂಪಾಯಿ ಅನುದಾನ
ವಿಕಲಚೇತನರ ಕಲ್ಯಾಣಾಧಿಕಾರಿ ನಾಗವೇಣಿ ಅವರು ಮಾತನಾಡಿ, ಜಿಲ್ಲೆಯಲ್ಲಿ HIV ಸೋಂಕಿತ ಮತ್ತು ಬಾದಿತ ಮಕ್ಕಳ ಪೋಷಕರು ಸೋಂಕಿತರಾಗಿದ್ದಾರೆ. ಇನ್ನ ಜಿಲ್ಲ ಎಆರ್‌ಟಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತಹವರ ಮಕ್ಕಳಿಗೆ ಅನುದಾನವನ್ನ ಪಡೆಯಲು ಒಪ್ಪಿಗೆ ಪಡೆದು ತಿಂಗಳಿಗೆ 1000 ರೂಪಾಯಿ ರೀತಿ ಸಂದಾಯ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ರು.
ಫಲಾನುಭವಿಗಳಿಗೆ ಅನುದಾನ ಜಮೆ
ಕೇಂದ್ರ ಕಚೇರಿಯ ಆದೇಶದಂತೆ ಅವರುಗಳ ವೈಯಕ್ತಿಕ ಖಾತೆಗೆ ಪ್ರಸ್ತುತ ಡಿ.ಬಿ.ಟಿ ಪೋರ್ಟಲ್ ಮೂಲಕ ಅನುದಾನ ವರ್ಗಾವಣೆ ಮಾಡುವ ಯೋಜನೆಯಾಗಿರುತ್ತದೆ. ಅದರಂತೆ 2022-23ನೇ ಸಾಲಿನ 1ನೇ & 2ನೇ ಕಂತಿನ ತ್ರೈಮಾಸಿಕ ಫಲಾನುಭವಿಗಳಿಗೆ ಅನುದಾನ ಜಮೆ ಮಾಡಲಾಗಿದೆ. 3ನೇ ತ್ರೈಮಾಸಿಕ ಕಂತಿಗೆ 7,52,000 ರೂಪಾಯಿ ಅನುದಾನ ಬೇಡಿಕೆಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ ಎಂದರು. ಈ ಬಗ್ಗೆ ವಿಕಲಚೇತನರ ಕಲ್ಯಾಣಾಧಿಕಾರಿ ನಾಗವೇಣಿ ಅವರು ಸಭೆಗೆ ಮಾಹಿತಿ ನೀಡಿದರು.
ಪೋಷಕರನ್ನು ಕಳೆದುಕೊಂಡ ಮಕ್ಕಳ ಮಾಹಿತಿ
ಜಿಲ್ಲೆಯಲ್ಲಿ ಒಟ್ಟು 8 ಮಕ್ಕಳು ಪಿಎಂ ಕೇರ್ಸ್ ಯೋಜನೆಗೆ ಒಳಪಟ್ಟಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ & ಪ್ರಸ್ತುತ 8 ಮಕ್ಕಳಲ್ಲಿ ಒಂದು ಮಗುವಿಗೆ ಮೇ-2022ರ ಮಾಹೆ & ಮತ್ತೊಂದು ಮಗು ಜೂನ್ -2023 ರಲ್ಲಿ 18 ವರ್ಷ ಪೂರ್ಣಗೊಂಡಿರುತ್ತದೆ. ಉಳಿದ 6 ಮಕ್ಕಳು ಯೋಜನಾ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಉಪ ಪೊಲೀಸ್ ವರಿಷ್ಠಾಧಿಕಾರಿ ದಿನಕರ್ ಶೆಟ್ಟಿ, ಉಪವಿಭಾಗಾಧಿಕಾರಿ ಬಿನೋಯ್, ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಸೇರಿ ಇತರರು ಹಾಜರಿದ್ದರು.












Click it and Unblock the Notifications