ಇಂಥ ನೂರು ಸಿದ್ದರಾಮಯ್ಯನವರು ಬಂದರೂ ರಾಮಭಕ್ತರು ಹೆದರುವುದಿಲ್ಲ: ಆರ್‌ ಅಶೋಕ್‌ ಹೀಗೆ ಹೇಳಿದ್ಯಾಕೆ?

ಬೆಂಗಳೂರು, ಜನವರಿ 03: ಶ್ರೀರಾಮ ಈ ದೇಶದ ಆದರ್ಶ ಪುರುಷ. ರಾಮ ಮಂದಿರಕ್ಕಾಗಿ 500- 600 ವರ್ಷಗಳಿಂದ ನಡೆದಿದೆ. ದಾಳಿಕೋರರು ರಾಮಮಂದಿರ ಧ್ವಂಸ ಮಾಡಿದ್ದರು. ವಿಜಯನಗರ ಹಂಪಿ ದೇವಾಲಯ, ಸೋಮನಾಥ ದೇವಾಲಯಗಳ ಮೇಲೆ ದಾಳಿ ನಡೆದಿತ್ತು. ಇಂಥ ನೂರು ಸಿದ್ದರಾಮಯ್ಯನವರು ಬಂದರೂ ರಾಮಭಕ್ತರು ಹೆದರುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಹೇಳಿದರು.

ಈ ಕುರಿತ ಮಾಧ್ಯಮಗಳ ಜೊತೆಗೆ ಆರ್‌ ಅಶೋಕ್‌ ಮಾತನಾಡಿ, ರಾಮಮಂದಿರ ಸಂಬಂಧ ಜಾಗೃತಿಯಿಂದ ಕಾಂಗ್ರೆಸ್‍ನವರಿಗೆ ಭಯ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿ ಉಂಟಾಗಿದೆ. ರಾಮಭಕ್ತರಿಗೆ ಭಯ ಮೂಡಿಸಲು ಈ ಕುತಂತ್ರ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

Rama Devotees Are Not Afraid Says R Ashok

ಬಿಜೆಪಿ ಮುಂದೆ ಸಿದ್ದರಾಮಯ್ಯನವರ ಸರಕಾರವು ಭೂತದಂತೆ ನಿಂತಿದೆ. ಹುಬ್ಬಳ್ಳಿಯಲ್ಲಿ 30 ವರ್ಷಗಳ ಹಿಂದಿನ ಕೇಸನ್ನು ಇದೀಗ ತೆರೆದು ನೋಟಿಸ್ ಕೊಡದೆ ಬಂಧಿಸುವ ಕಾರ್ಯ ನಡೆದಿದೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಮತ ರಾಜಕೀಯಕ್ಕಾಗಿ ಹಿಂದೂ- ಮುಸಲ್ಮಾನರನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಹೇಳಿದರು

ಅಕ್ಷತೆ ಕೊಡುವುದಕ್ಕೂ ಅಡ್ಡಿ ಉಂಟು ಮಾಡುತ್ತಿದ್ದಾರೆ. ಇದು ಟಿಪ್ಪು ಸರಕಾರವೇ ಎಂದು ಪ್ರಶ್ನಿಸಿದರು. ರಾವಣನೂ ಅಧಿಕಾರ ಕಳಕೊಂಡ. ನೀವು ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ರಾಮರಾಜ್ಯವೂ ಮುಂದೆ ಮೋದಿಜೀ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಭರವಸೆಯಿಂದ ನುಡಿದರು. ಇಂದು ಇಡೀ ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

Rama Devotees Are Not Afraid Says R Ashok

ನೋಟಿಸ್ ಕೊಡದೆ ಬಂಧಿಸಿದ್ದೇಕೆ? 30 ವರ್ಷ ಅದೇ ರಸ್ತೆಯಲ್ಲಿ ಓಡಾಡುತ್ತಿದ್ದವರನ್ನು ಬಂಧಿಸಿಲ್ಲವೇಕೆ? ಕಾಂಗ್ರೆಸ್ ಸರಕಾರ ತುಘಲಕ್ ಸರಕಾರದಂತೆ ವರ್ತಿಸುತ್ತಿದೆ. ರೈತರ ಆತ್ಮಹತ್ಯೆ, ರೈತರಿಗೆ ಬರ ಪರಿಹಾರ ಕೊಡದ ಸರಕಾರ ಮುಸಲ್ಮಾನರಿಗೆ 11 ಸಾವಿರ ಕೋಟಿ ನೀಡಲು ಮುಂದಾಗಿದೆ ಎಂದು ಟೀಕಿಸಿದರು. ಸಿದ್ದರಾಮಯ್ಯರದು ಒಡೆದಾಳುವ ನೀತಿ. ಸಿದ್ದರಾಮಯ್ಯರು ಒಡೆದು ಆಳುವ ಬ್ರ್ಯಾಂಡ್ ಅಂಬಾಸಿಡರ್ ಎಂದರು.

2024 ರ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಗೆಲ್ಲುವಂಥ ಪರಿಸ್ಥಿತಿ ಇದೆ. ಕಾರ್ಯಕರ್ತರು, ಮುಖಂಡರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡೋಣ. ಕಾಂಗ್ರೆಸ್‍ನವರಿಗೆ ಸೋನಿಯಾ ಗಾಂಧಿ ಮೊದಲು. ನಮಗೆ ಪಕ್ಷ ಮೊದಲು ಎಂದು ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಹೇಳಿದರು.

ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ. ಸದಾನಂದ ಗೌಡ, ಮಾಜಿ ಸಚಿವರಾದ ಡಾ. ಸಿ.ಎನ್.ಅಶ್ವಥ್‍ನಾರಾಯಣ್, ಕೆ. ಗೋಪಾಲಯ್ಯ, ಬೈರತಿ ಬಸವರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ. ನಾರಾಯಣಗೌಡ, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ಮಾಜಿ ವಿಧಾನಪರಿಷತ್ ಸದಸ್ಯರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+