ಕೊಡಗಿನಲ್ಲಿ ಮಳೆಯ ಹೊಡೆತಕ್ಕೆ 114 ಮನೆಗಳು ಜಖಂ

Posted By:
Subscribe to Oneindia Kannada

ಮಡಿಕೇರಿ, ಜುಲೈ 07 : ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರೆದಿದ್ದು, ಇದುವರೆಗೆ ಮಳೆಗಾಳಿಗೆ ಸುಮಾರು 114 ಮನೆಗಳು ಜಖಂಗೊಂಡಿದ್ದು, 36.81 ಲಕ್ಷ ರು. ನಷ್ಟವುಂಟಾಗಿದೆ.

ಮಡಿಕೇರಿ ತಾಲೂಕೊಂದರಲ್ಲಿಯೇ 96 ಮನೆಗಳಿಗೆ ಹಾನಿಯಾಗಿದ್ದು, ಸುಮಾರು 33.48 ಲಕ್ಷ ರು. ನಷ್ಟವಾಗಿದೆ. 93 ಮನೆಗಳ ಕುಟುಂಬಗಳಿಗೆ ಒಟ್ಟು 10.86 ಲಕ್ಷ ರು. ಪರಿಹಾರ ನೀಡಲಾಗಿದೆ. 3 ಮನೆಗಳಿಗೆ ಪರಿಹಾರ ವಿತರಿಸಲು ಬಾಕಿಯಿದೆ.[ಮಡಿಕೇರಿಯ ಕಾಫಿ ತೋಟಗಳಲ್ಲಿ ಕಾಡಾನೆಗಳ ರಂಪಾಟ]

Rain havoc in Madikeri, many houses damaged

ಸೋಮವಾರಪೇಟೆ ತಾಲೂಕಿನಲ್ಲಿ ಭಾರೀ ಮಳೆಗೆ ಮಣ್ಣು ಕುಸಿತ ಉಂಟಾಗಿ 13 ಮನೆಗಳಿಗೆ ಹಾನಿಯಾಗಿದ್ದು, 1.33 ಲಕ್ಷ ರು. ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು, 13 ಮನೆಗಳ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ.[ಕಾವೇರಿ ಪ್ರವಾಹದ ನೀರಲ್ಲಿ ಮೀನು ಹಿಡಿದೋನೇ ಜಾಣ]

ವಿರಾಜಪೇಟೆ ತಾಲೂಕಿನ 5 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 2 ಲಕ್ಷ ರು. ನಷ್ಟವಾಗಿರಬಹುದೆಂದು ಹೇಳಲಾಗಿದೆ. ಈ ಕುಟುಂಬಗಳಿಗೆ ಒಟ್ಟು 1.02 ಲಕ್ಷ ರು. ಪರಿಹಾರ ನೀಡಲಾಗಿದೆ. ಒಟ್ಟಾರೆ ಮನೆ ಹಾನಿ ಸಂಬಂಧ 111 ಕುಟುಂಬಗಳಿಗೆ ಸುಮಾರು 13.21 ಲಕ್ಷ ರು. ಪರಿಹಾರ ವಿತರಿಸಲಾಗಿದೆ. ಸಿಡಿಲಿಗೆ ತುತ್ತಾಗಿ ಒಬ್ಬರ ಪ್ರಾಣ ಹಾನಿಯಾಗಿದ್ದು, ಅವರ ಕುಟುಂಬದವರಿಗೆ ಪರಿಹಾರ ನೀಡಲಾಗಿದೆ.[ತುಂಬಿ ಹರಿವ ಲಕ್ಷ್ಮಣತೀರ್ಥವನ್ನು ನೋಡುವುದೇ ಆನಂದ]

Rain havoc in Madikeri, many houses damaged

ಇನ್ನು ಮುಂಗಾರು ಮಳೆ ಅಬ್ಬರಕ್ಕೆ ಮೂರು ತಾಲೂಕಿನಲ್ಲಿ ತಲಾ 1 ಜಾನುವಾರು ಮೃತಪಟ್ಟಿದ್ದು, ಸುಮಾರು 82 ಸಾವಿರ ರು. ನಷ್ಟ ಉಂಟಾಗಿದೆ. ಎರಡು ಕುಟುಂಬಗಳಿಗೆ 52 ಸಾವಿರ ರು. ಪರಿಹಾರ ವಿತರಿಸಲಾಗಿದೆ. ಒಂದು ಜಾನುವಾರು ಕುಟುಂಬಕ್ಕೆ ಪರಿಹಾರ ಇನ್ನಷ್ಟೇ ವಿತರಿಸಬೇಕಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rain has wrecked havoc in Madikeri district damaging many houses. One person and many cattles also killed due to heavy rain. Monsoon has picked up in entire district of Coorg. District admin has distributed compensation to the affected families.
Please Wait while comments are loading...