ಮಳೆ ಅಬ್ಬರ ಜೋರು.. ಭಾರಿ ಮಳೆ ಮುನ್ನೆಚ್ಚರಿಕೆ: ಯಾವ ಯಾವ ಜಿಲ್ಲೆಗೆ ಕಂಟಕ?
ಮಳೆ ನಿಂತು ಹೋಯ್ತು... ಇನ್ನೇನು ನಿರಾಳ ಅಂತಾ ಅಂದುಕೊಂಡ್ರಾ? ಇಲ್ಲ ಇಲ್ಲ ನಿಮ್ಮ ಊಹೆ ತಪ್ಪು ಬಿಡಿ. ಯಾಕಂದ್ರೆ ಮಳೆ ಆರ್ಭಟ ಇನ್ನೂ ನಿಂತಿಲ್ಲ ಇಷ್ಟು ದಿನ ನೀವು ನೋಡಿದ್ದು ಜಸ್ಟ್ ಟ್ರೇಲರ್. ಈಗ ನೋಡಿ ಅಸಲಿ ಸಿನಿಮಾ ಶುರು ಆಗ್ತಾ ಇದೆ. ಹೇಗೆ ಅಂದ್ರೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ಬಲು ಜೋರಾಗ್ತಿದ್ದು, ಹೀಗೆ ಆರಂಭ ಆಗಿರುವ ಮಳೆ ಕೆಲವು ದಿನಗಳಲ್ಲಿ ಜಲಪ್ರಳಯ ಸೃಷ್ಟಿ ಮಾಡುವ ಮುನ್ಸೂಚನೆ ನೀಡಿದೆ!
ಕರ್ನಾಟಕದ ಪಾಲಿಗೆ 2024ರ ಮುಂಗಾರು ಮಳೆ ಅದೃಷ್ಟ ತರುವ ಎಲ್ಲಾ ಲಕ್ಷಣ ಕಾಣಿಸುತ್ತಿತ್ತು. ಆದರೆ ಆಗಿದ್ದೇ ಬೇರೆ, ಅಂದುಕೊಂಡ ರೀತಿಯೇ ಈ ವರ್ಷ ಮುಂಗಾರು ಮಳೆ ಕರ್ನಾಟಕದಲ್ಲಿ ಆರಂಭ ಆಗಿತ್ತು. ಹೀಗಿದ್ದಾಗ ಮಳೆ ಆರ್ಭಟವು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಕೊನೆಗೆ ಏನು ಆಗಬಾರದೋ ಅದೇ ಆಗಿ ಹೋಗಿದೆ. ಕರ್ನಾಟಕದ ಮಲೆನಾಡು, ಕರಾವಳಿ ಜಿಲ್ಲೆಗಳೂ ಸೇರಿ ಉತ್ತರ ಕರ್ನಾಟಕ & ದಕ್ಷಿಣ ಕರ್ನಾಟಕ ಭಾಗದಲ್ಲೂ ಭರ್ಜರಿಯಾಗಿ ಮಳೆ ಬಿದ್ದ ಕಾರಣ ರೈತರು ಖುಷಿಯಾಗಿದ್ದರು. ಆದರೆ ಈಗ ನೋಡಿದರೆ ಅತಿಯಾದ ಮಳೆ ಕಾರಣಕ್ಕೆ ಕನ್ನಡಿಗರು ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಯಾವ ಯಾವ ಜಿಲ್ಲೆಗಳಿಗೆ ಮಳೆ?
ಉತ್ತರ ಕರ್ನಾಟಕ & ಕರಾವಳಿ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯು ಸೇರಿ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಕಡೆ ಮಳೆ ಅಬ್ಬರಿಸಲಿದೆ. ಅದ್ರಲ್ಲೂ ಕಳೆದ ಕೆಲ ದಿನಗಳಿಂದ ನಿರಂತರ ಮುಂಗಾರು ಮಳೆ ಬೀಳುತ್ತಿರುವ ಕಾರಣ, ಈಗ ಜನ ಜೀವನವು ಅಸ್ತವ್ಯಸ್ಥ ಪರಿಸ್ಥಿತಿಗೆ ತಲುಪಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋದ ಸಮಯದಲ್ಲಿ ಮುಂದಿನ 24 ಗಂಟೆಗಳ ಕಾಲ ಮತ್ತೆ ಕರಾವಳಿ ಪ್ರದೇಶದಲ್ಲಿ ಘೋರ ಮಳೆ ಸುರಿಯುವ ಮುನ್ನೆಚ್ಚರಿಕೆಯ ನೀಡಲಾಗಿದೆ. ಹೀಗೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೂ ಜಲ ಪ್ರಳಯದ ಆತಂಕವು ಕಾಡುತ್ತಿದೆ. ಹಾಗಾದ್ರೆ ರಾಜಧಾನಿ ಬೆಂಗಳೂರಿನ ಪರಿಸ್ಥಿತಿ ಏನು? ಮುಂದೆ ಓದಿ.
ಬೆಂಗಳೂರಿಗೂ ಕಾದಿದೆ ಮಳೆ ಕಂಟಕ!
ವಾಯುಭಾರ ಕುಸಿತದ ಪರಿಣಾಮ ಇದೀಗ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯು ಅಬ್ಬರಿಸುತ್ತಿದೆ. ಅದೇ ರೀತಿ ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಪರಿಸ್ಥಿತಿ ಇದೀಗ ಕೈಮೀರಿ ಹೋಗುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ. ಯಾಕಂದ್ರೆ ಇಂದು ಸಂಜೆ ನಂತರವೇ ಬೆಂಗಳೂರಿನಲ್ಲಿ ಭರ್ಜರಿ ಮಳೆ ಆರಂಭ ಆಗಲಿದ್ದು, ನಾಳೆ & ನಾಡಿದ್ದು ಕೂಡ ಇದೇ ರೀತಿ ಮಳೆ ಸುರಿಯುವ ಮುನ್ಸೂಚನೆ ಸಿಗುತ್ತಿದೆ. ಹೀಗಾಗಿ ವೀಕೆಂಡ್ ಮಸ್ತಿಯಲ್ಲಿ ನೀವು ಹೊರಗೆ ಹೋಗಲು ಪ್ಲಾನ್ ಮಾಡಿದ್ದರೆ ಒಂದು ಬಾರಿ ಯೋಚಿಸಿ. ಅಕಸ್ಮಾತ್ ಹೊರಗೆ ಹೋದರೂ, ಮಳೆ ಬೀಳುವ ಬಗ್ಗೆ ಅಲರ್ಟ್ ಆಗಿರಿ. ಇಲ್ಲವಾದರೆ ಹೊರಗೆ ಹೋದಾಗ ಭರ್ಜರಿ ಮಳೆಯು ಶುರುವಾದರೆ ಸಂಕಷ್ಟ ಗ್ಯಾರಂಟಿ!












Click it and Unblock the Notifications