ರಾಯಚೂರು: 4 ಕಾಲು, 2 ಜನನಾಂಗದ ವಿಚಿತ್ರ ಮಗು ಜನನ

Subscribe to Oneindia Kannada

ರಾಯಚೂರು, ಜನವರಿ 23: ಎರಡು ಕೈ, ಎರಡು ಕಾಲು, ಒಂದು ಜನನಾಂಗ ಎಲ್ಲರಿಗೂ ಸಾಮಾನ್ಯ. ಆದರೆ ಇಲ್ಲೊಬ್ಬರು ಮಹಿಳೆ ನಾಲ್ಕು ಕಾಲು ಮತ್ತು 2 ಜನನಾಂಗ ಇರುವ ಮಗು ಹೆತ್ತಿದ್ದಾರೆ.

ರಾಯಚೂರಿನ ಧಾಡೆಯಸುಗುರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಲಿತಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದು ಮಗುವಿಗೆ 4 ಕಾಲು, ಎರಡು ಪುರುಷ ಜನನಾಂಗಗಳಿವೆ. ರಾಯಚೂರು ತಾಲೂಕಿನ ಸಿಂಧನೂರಿನ ಪುಲದಿನ್ನಿ ಗ್ರಾಮದ ಲಲಿತಮ್ಮ(23ವರ್ಷ) ಹಾಗೂ ಚೆನ್ನಬಸಪ್ಪ(26ವರ್ಷ) ದಂಪತಿಗೆ ಈ ಗಂಡು ಮಗು ಜನಿಸಿದೆ.

 Raichure: A miracle baby having 4 legs, 2 genitals been born

ಮಹಿಳೆಗೆ ನಾರ್ಮಲ್ ರೀತಿಯಲ್ಲಿ ಹೆರಿಗೆಯಾಗಿದೆ. ಆದರೆ ನ್ಯೂನ್ಯತೆ ಇದ್ದ ಕಾರಣ ಬಳ್ಳಾರಿಯ ವಿಜಯನಗರ ಇನ್ಸ್ ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ವಿಐಎಂಎಸ್) ಗೆ ದಾಖಲಿಸಲಾಗಿದೆ. ಆರಂಭದಲ್ಲಿ ಆಸ್ಪತ್ರೆಗೆ ಕಳುಹಿಸಲು ಕುಟುಂಬಸ್ಥರು ಒಪ್ಪಿಲ್ಲ. ಆದರೆ ಆಸ್ಪತ್ರೆ ಸಿಬ್ಬಂದಿಗಳ ಮನವೊಲಿಕೆಯ ಬಳಿಕ ಮಗುವಿನ ತಾಯಿಯ ಕುಟುಂಬಸ್ಥರ ಒಪ್ಪಿಗೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.

ಈ ಕುರಿತು ಮಾತನಾಡಿರುವ ವೈದ್ಯ ಡಾ. ವಿರೂಪಾಕ್ಷ, "ಭಾನುವಾರ ವಿಐಎಂಎಸ್ ಸರ್ಜನ್ಸ್ ಜೊತೆ ಮಾತನಾಡಿದ್ದೇನೆ. ಅವರು ಮಗುವನ್ನು ಕೂಲಂಕಷವಾಗಿ ತಪಾಸಣೆ ನಡೆಸಿ, ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆಂದು," ಎಂದು ಹೇಳಿದ್ದಾರೆ.


ಇನ್ನು ಈ ಕುರಿತು ಹೇಳಿಕೆ ನೀಡಿರುವ ವಿಐಎಂಎಸ್ ವೈದ್ಯ ಡಾ.ದಿವಾಕರ್ ಗಡ್ಡಿ, "ಮಗುವಿನ ದೇಹ ಸ್ಥಿತಿ ಬಗ್ಗೆ ತಜ್ಞ ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ. ಇದೊಂದು ತುಂಬಾ ಸವಾಲಿನ ಕೆಲಸವಾಗಿದೆ," ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A miracles baby having 4 legs and 2 genitals been born in primary health care center, Raichur.
Please Wait while comments are loading...