ಶೀಘ್ರವೇ ರಸ್ತೆಗಳ ಅವೈಜ್ಞಾನಿಕ ಹಂಪ್ ತೆರವು

ಬೆಂಗಳೂರು, ಜುಲೈ 10 : 'ಅನಧಿಕೃತ ರಸ್ತೆ ಉಬ್ಬುಗಳನ್ನು ತೆರವುಗೊಳಿಸಲಾಗಿದ್ದರೂ ಸಹ ಸ್ಥಳೀಯರು ಪದೇ ಪದೇ ರಸ್ತೆ ಉಬ್ಬುಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಇವುಗಳನ್ನು ತೆರವುಗೊಳಿಸಲು ಸಹ ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.

ವಿಧಾನಪರಿಷತ್ತಿನಲ್ಲಿ ಮಂಗಳವಾರ ಬಿಜೆಪಿಯ ತಾರಾ ಅನೂರಾಧ ಅವರ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದರು. ರಾಜ್ಯ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಹಾಕಲಾಗಿದ್ದ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವುಗೊಳಿಸಿ, ಅವಶ್ಯಕತೆ ಇರುವೆಡೆಗೆ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ವೈಜ್ಞಾನಿಕವಾಗಿ ಪರಿವರ್ತಿಸಲಾಗಿರುತ್ತದೆ ಎಂದರು.

ರಾಜ್ಯದಲ್ಲಿಯ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಇಲಾಖೆಗೆ ಹಂಚಿಕೆಯಾಗಿರುವ ವಾರ್ಷಿಕ ನಿರ್ವಹಣೆ ಅಡಿಯ ಅನುದಾನದಲ್ಲಿ ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿರುತ್ತದೆ.

PWD will remove unscientific road humps says HD Revanna

ಇತ್ತೀಚಿಗೆ ನಡೆದ ಸಭೆಯಲ್ಲಿ ರಾಜ್ಯದ ರಸ್ತೆಗಳಲ್ಲಿ ಉಂಟಾಗಿರುವ ರಸ್ತೆಯ ಗುಂಡಿಗಳನ್ನು ಮುಚ್ಚುವ ಕೆಲಸಗಳನ್ನು ಒಳಗೊಂಡಂತೆ ರಸ್ತೆಯ ವಾರ್ಷಿಕ ನಿರ್ವಹಣೆಗಾಗಿ ಕ್ರಿಯಾ ಯೋಜನೆಯನ್ನು ತಯಾರಿಸಲು ಸೂಚಿಸಲಾಗಿದೆ.

ಅನುದಾನದ ಲಭ್ಯತೆಯನುಸಾರ ಆದ್ಯತೆಯ ಮೇಲೆ ಗುಂಡಿ ಮುಚ್ಚುವ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಈ ಸಂಬಂಧ ಒಂದು ಸಮಗ್ರ ಯೋಜನೆಯನ್ನು ಸಹ ರೂಪಿಸಲಾಗಿರುತ್ತದೆ ಎಂದರು.

ಲೋಕೋಪಯೋಗಿ ಇಲಾಖೆಯ ರಸ್ತೆಗಳಲ್ಲಿಯ ಬಿರುಕುಬಿಟ್ಟು ದುರಸ್ಥಿಯಲ್ಲಿರುವ ಸೇತುವೆಗಳನ್ನು ಗುರುತಿಸಲಾಗಿದ್ದು, ದಕ್ಷಿಣ ವಲಯದಲ್ಲಿ ಮುಖ್ಯವಾಗಿ ಹಾಳಗಿರುವ 15 ಸೇತುವೆಗಳನ್ನು ರೂ. 782.64 ಲಕ್ಷಗಳ ಅಂದಾಜು ಮೊತ್ತದಲ್ಲಿ ದುರಸ್ಥಿಗಾಗಿ ಪ್ರಸ್ತಾವನೆ ತಯಾರಿಸಲಾಗಿರುತ್ತದೆ ಎಂದು ಸದನಕ್ಕೆ ವಿವರಣೆ ನೀಡಿದರು.

ಉತ್ತರ ವಲಯಕ್ಕೆ ಸಂಬಂಧಿಸಿದಂತೆ 896 ಸೇತುವೆಗಳು ಹಾನಿಗೊಳಗಾಗಿದ್ದು, ಇವುಗಳಲ್ಲಿ ರೂ. 272.73 ಲಕ್ಷಗಳಲ್ಲಿ ತುರ್ತು ದುರಸ್ಥಿ ಹಾಗೂ ರೂ. 1427.30 ಲಕ್ಷಗಳ ಅಂದಾಜು ಮೊತ್ತದಲ್ಲಿ ಪುನರ್ ನಿರ್ಮಾಣ ಮಾಡುವ ಅವಶ್ಯಕತೆಯಿರುತ್ತದೆ ಎಂದು ಹೇಳಿದರು.

ಈಶಾನ್ಯ ವಲಯದಲ್ಲಿ ಮಳೆಯಿಂದ ಹಾಳಾಗಿರುವ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಮೇಲಿನ ಸೇತುವೆಗಳನ್ನು ಸಹ ಗುರುತಿಸಲಾಗುತ್ತಿದೆ ಹಾಗೂ ದುರಸ್ಥಿಪಡಿಸಬೇಕಾದ ಲೋಕೋಪಯೋಗಿ ಇಲಾಖೆಯ ರಸ್ತೆಗಳಲ್ಲಿಲಯ ಸೇತುವೆಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿರುವ ಅನುದಾನದಲ್ಲಿ ಶೀಘ್ರವೆ ದುರಸ್ಥಿ/ಮರುನಿರ್ಮಾಣ ಮಾಡಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+