ಉತ್ತರ ಕರ್ನಾಟಕ ಬಂದ್ ಕರೆ ವಾಪಸ್, ಸಾಂಕೇತಿಕ ಪ್ರತಿಭಟನೆ

ಬೆಂಗಳೂರು, ಆಗಸ್ಟ್ 02 : ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ಒತ್ತಾಯಿಸಿ ಗುರುವಾರ ಕರೆ ನೀಡಿದ್ದ ಬಂದ್ ವಾಪಸ್ ಪಡೆಯಲಾಗಿದೆ. ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಜನಜೀವನ ಎಂದಿನಂತೆ ಇದೆ. ವಿವಿಧ ಸಂಘಟನೆಗಳು ಇಂದು ಸಾಂಕೇತಿಕ ಪ್ರತಿಭಟನೆ ನಡೆಸಲಿವೆ.

ಉತ್ತರ ಕರ್ನಾಟಕ ರಾಜ್ಯಕ್ಕಾಗಿ ಆಗ್ರಹಿಸಿ ಕರೆ ನೀಡಿದ್ದ ಉತ್ತರ ಕರ್ನಾಟಕ ಬಂದ್ ವಿಚಾರದಲ್ಲಿ ವಿವಿಧ ಸಂಘಟನೆಗಳಲ್ಲೇ ಒಡಕು ಕಾಣಿಸಿಕೊಂಡಿದೆ. ಆದ್ದರಿಂದ, ಗುರುವಾರ ನಡೆಯಬೇಕಿದ್ದ ಬಂದ್ ವಾಪಸ್ ಪಡೆಯಲಾಗಿದೆ.

Protest for North Karnataka separate state highlights

ಬುಧವಾರ ಸಂಜೆ ಹಾವೇರಿಯಲ್ಲಿ ಮಾತನಾಡಿದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೋತಂಬರಿ ಅವರು, 'ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ, ಬಂದ್ ಕೈಬಿಡಲಾಗಿದೆ' ಎಂದು ಹೇಳಿದರು.

Aug 02, 2018, 11:24 am IST

'ಉತ್ತರ ಕರ್ನಾಟಕದ ಜನರು ಪ್ರತ್ಯೇಕ ರಾಜ್ಯದ ಬೇಡಿಕೆ ಇಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ. ಅವರ ನೀತಿಗಳಿಂದಾಗಿಯೇ ಪ್ರತ್ಯೇಕ ರಾಜ್ಯದ ಕೂಗು ಎದ್ದಿದೆ' ಎಂದು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಆರೋಪಿಸಿದರು.
Aug 02, 2018, 10:48 am IST

ಪ್ರತ್ಯೇಕ ಲಿಂಗಾಯತ ಧರ್ಮದ ನೆನಪು ಇಲ್ಲವೇ?
Aug 02, 2018, 10:05 am IST

ಬಾಗಲಕೋಟೆಯಲ್ಲಿ ಜನಜೀವನ ಎಂದಿನಂತೆ ಇದೆ
Aug 02, 2018, 9:06 am IST

ಕೊಪ್ಪಳ, ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿಲ್ಲ.
Aug 02, 2018, 8:46 am IST

ಪ್ರತ್ಯೇಕ ರಾಜ್ಯದ ಬೇಡಿಕೆ ಇಡಬೇಡಿ
Aug 02, 2018, 8:35 am IST

'ರಾಜ್ಯವನ್ನು ಒಡೆಯಲು ಮುಂದಾಗಿರುವ ರಾಜಕಾರಣಿಗಳಿಗೆ, ರಾಜ್ಯ ಕಟ್ಟಿದವರ ನೋವು, ಸಂಕಟ ಗೊತ್ತಿಲ್ಲ. ಹಾಗಾಗಿ ಅಖಂಡ ಕರ್ನಾಟಕವೇ ನಮ್ಮೆಲ್ಲರ ಗುರಿಯಾಗಬೇಕು' ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಹೇಳಿದ್ದಾರೆ.
Aug 02, 2018, 8:24 am IST

ಕರ್ನಾಟಕ ಒಂದೇ
Aug 02, 2018, 8:23 am IST

ಧಾರವಾಡ, ಬೀದರ್‌ನಲ್ಲಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ಇಲ್ಲ. ಎಂದಿನಂತೆ ಜನಜೀವನ, ವಾಹನ ಸಂಚಾರ
Aug 02, 2018, 8:17 am IST

ಉತ್ತರ ಕರ್ನಾಟಕ ರೈತ ಸಂಘದ ಧಾರವಾಡ ಜಿಲ್ಲಾಧ್ಯಕ್ಷ ವಿರೂಪಾಕ್ಷ ಕಳ್ಳಿಮನಿ ಅವರು ಮಾಧ್ಯಮಗಳ ಜೊತೆ ಮಾತನಾಡಿ, 'ನಮ್ಮ ಹೋರಾಟ ಈಗ ಆರಂಭವಾಗಿದೆ. ನಮ್ಮ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಮುಖ್ಯಮಂತ್ರಿಗಳು 15 ದಿನ ಸಮಯ ಕೇಳಿದ್ದಾರೆ. ಅವರು ಏನೂ ಮಾಡದಿದ್ದರೆ ಉಗ್ರ ಹೋರಾಟ ಮುಂದುವರೆಸುತ್ತೇವೆ' ಎಂದರು.
Aug 02, 2018, 8:14 am IST

'ಪ್ರತ್ಯೇಕ ರಾಜ್ಯ ರಚನೆ ವಿಚಾರದಲ್ಲಿ ನಮ್ಮ ನಿರ್ಧಾರ ಅಚಲ. ನಾವು ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತೇವೆ. ಮುಖ್ಯಮಂತ್ರಿಗಳ ಜೊತೆ ಮಾತುಕತೆಗೆ ತೆರಳಿದ್ದ ಸೋಮಶೇಖರ ಕೋತಂಬರಿ ಅವರು ಕ್ಷಮೆ ಕೇಳಬೇಕು' ಎಂದು ಉತ್ತರ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ ಒತ್ತಾಯಿಸಿದರು.
Aug 02, 2018, 8:10 am IST

ಉತ್ತರ ಕರ್ನಾಟಕ ಬಂದ್ ವಾಪಸ್ ಪಡೆದ ಹಿನ್ನಲೆಯಲ್ಲಿ ಬಾಗಲಕೋಟೆ ಉತ್ತರ ಕರ್ನಾಟಕ ಜಿಲ್ಲಾ ಹೋರಾಟ ಸಮಿತಿಯೂ ಪ್ರತಿಭಟನೆಯನ್ನು ವಾಪಸ್ ಪಡೆದಿದೆ. ಜಿಲ್ಲೆಯಲ್ಲಿ ಜನಜೀವನ ಎಂದಿನಂತೆ ಇದೆ.
Aug 02, 2018, 8:09 am IST

ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಬೆಳಗಾವಿಯಲ್ಲಿ ಮುಂಜಾನೆಯೇ ರಸ್ತೆಗೆ ಇಳಿದಿದ್ದಾರೆ. ಬಸ್, ಆಟೋ ಚಾಲಕರು, ವ್ಯಾಪಾರಸ್ಥರಿಗೆ ಗುಲಾಬಿ ಹೂ ನೀಡಿ, ಪ್ರತ್ಯೇಕ ರಾಜ್ಯದ ಬೇಡಿಕೆಗೆ ಬೆಂಬಲ ನೀಡಬಾರದು ಎಂದು ಮನವಿ ಮಾಡುತ್ತಿದ್ದಾರೆ.
Aug 02, 2018, 8:09 am IST

ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಉತ್ತರ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+