• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಸವರಾಜ ಬೊಮ್ಮಾಯಿ 'ಮುಖ್ಯಮಂತ್ರಿ ಪಟ್ಟ ಬಲಿ' ಪಡೆಯಲಿದೆಯಾ 'ಬಿಟ್ ಕಾಯಿನ್'?

|
Google Oneindia Kannada News

ಬೆಂಗಳೂರು, ನ. 10: ಅದ್ಯಾಕೊ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಟೈಂ ಸರಿ ಇದ್ದಂತೆ ಕಾಣುತ್ತಿಲ್ಲ. ಒಂದೊಂದೆ ಆರೋಪಗಳು-ಸಮಸ್ಯೆಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎದುರಾಗುತ್ತಿವೆ. ಸಿಎಂ ಪಟ್ಟ ಅದೃಷ್ಟದಿಂದ ಒಲಿದು ಬಂದಿದ್ದರೂ ಅದನ್ನು ಕಾಪಾಡಿಕೊಳ್ಳುವ ಸಮಸ್ಯೆಗಳು ಬೊಮ್ಮಾಯಿ ಅವರಿಗೆ ನಿರಂತರವಾಗಿ ಹೆಚ್ಚಾಗುತ್ತಿವೆ.

ಮೊದಲಿಗೆ ಖಾತೆ ಕ್ಯಾತೆಯಿಂದ ಬಳಲಿದ ಮುಖ್ಯಮಂತ್ರಿಗಳು, ಆಮೇಲೆ ಉಪ ಚುನಾವಣೆಯಲ್ಲಿ ತಾವು ಪ್ರತಿನಿಧಿಸುವ ಪಕ್ಕದ ಕ್ಷೇತ್ರದಲ್ಲಿಯೇ ಸೋಲುವ ಮೂಲಕ ಮೊದಲ ಹಿನ್ನಡೆಯುಂಟಾಗಿದೆ. ಅದರೊಂದಿಗೆ ವಿಧಾನಪರಿಷತ್ ಚುನಾವಣೆ ಮೂಲಕ ಮತ್ತೊಂದು ಅಗ್ನಿ ಪರೀಕ್ಷೆ ಮುಖ್ಯಮಂತ್ರಿಗಳಿಗೆ ಎದುರಾಗಿದೆ. ಉಪ ಚುನಾವಣೆಯಲ್ಲಿನ ಹಿನ್ನಡೆಯನ್ನು ವಿಧಾನಪರಿಷತ್ ಚುನಾವಣೆಯ ಫಲಿತಾಂಶದಲ್ಲಿ ಸರಿದೂಗಿಸಿಕೊಂಡು, ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತ ಪಡೆಯುವ ಮಹತ್ವಾಕಾಂಕ್ಷೆಯಲ್ಲಿದ್ದ ಮುಖ್ಯಮಂತ್ರಿಗಳ ಮೇಲೆ ಮತ್ತೊಂದು ಗಂಭೀರ ಆರೋಪ ಬಂದಿದೆ.

ಆರೋಪ ಮಾತ್ರವಲ್ಲ ಈ ಪ್ರಕರಣದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂಬ ಚರ್ಚೆ ಆರಂಭವಾಗಿವೆ. ಅಷ್ಟಕ್ಕೂ ಏನದು ಆರೋಪ? ಯಾಕೆ ಮತ್ತೆ ಮೂರು ಮುಖ್ಯಮಂತ್ರಿಗಳ ಮಾತು? ಮುಂದಿದೆ ಸಂಪುರ್ಣ ಮಾಹಿತಿ!

ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ ಬಿಟ್ ಕಾಯಿನ್!

ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ ಬಿಟ್ ಕಾಯಿನ್!

ಬಿಟ್ ಕಾಯಿನ್ ಪ್ರಕರಣದ ರಾಜ್ಯದಲ್ಲಿ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ-ಪ್ರತ್ಯಾರೋಪಗಳು ತೀವ್ರವಾಗುತ್ತಿವೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಢೀರ್ ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿರುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ. ಬಿಟ್ ಕಾಯಿನ್ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪುತ್ರ ಭಾಗಿಯಾಗಿದ್ದಾರೆ ಎಂಬ ಆರೋಪಗಳ ಬೆನ್ನಲ್ಲಿಯೇ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಮತ್ತೊಂದು ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿರುವ ಅವರು ಈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಬೊಮ್ಮಾಯಿ ಬಲಿ ಪಡೆಯಲಿದೆಯಾ 'ಬಿಟ್ ಕಾಯಿನ್'?

ಬೊಮ್ಮಾಯಿ ಬಲಿ ಪಡೆಯಲಿದೆಯಾ 'ಬಿಟ್ ಕಾಯಿನ್'?

ಬಿಟ್ ಕಾಯಿನ್ ಪ್ರಕರಣ ಮುಖ್ಯಮಂತ್ರಿ ಬೊಮ್ಮಾಯಿ‌ ಅವರನ್ನು ಬಲಿ ಪಡೆಯುತ್ತದೆ ಎಂಬ ಗಂಭೀರ ಹೇಳಿಕೆಯನ್ನು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕೊಟ್ಟಿದ್ದಾರೆ. ಹೀಗಾಗಿ ಈ ಬಾರಿಯ ಕೂಡ ಬಿಜೆಪಿಯಲ್ಲಿ ಮೂರು ಜನ ಮುಖ್ಯಮಂತ್ರಿಗಳಾಗುತ್ತಾರೆ. ಬಿಜೆಪಿಯ ಪ್ರಮುಖರು ಬಿಟ್ ಕಾಯಿನ್ ದಂಧೆಯಲ್ಲಿ ಶಾಮೀಲಾಗಿದ್ದಾರೆ. ಅದು ಸರ್ಕಾರಕ್ಕೆ ಕಂಟಕವಾಗಲಿದೆ. ಆದರಿಂದಲೇ ಬರಿ ಬಾಯಿ ಮಾತಲ್ಲಿ ಮಾತ್ರ ತನಿಖೆಗೆ ಆದೇಶ ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ಯಾವುದೇ ತನಿಖೆಗೆ ಆದೇಶ ಮಾಡಿಲ್ಲ. ಆದೇಶ ಮಾಡಿದಲ್ಲಿ ಕಂಟಕ ಕಾಯ್ದಿದೆ ಎಂದು ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಬಿಟ್ ಕಾಯಿನ್ ತನಿಖೆ ಬಗ್ಗೆ ಬಾಯಿ ಬಿಡುತ್ತಿಲ್ಲ ಸಿಎಂ ಬೊಮ್ಮಾಯಿ?

ಬಿಟ್ ಕಾಯಿನ್ ತನಿಖೆ ಬಗ್ಗೆ ಬಾಯಿ ಬಿಡುತ್ತಿಲ್ಲ ಸಿಎಂ ಬೊಮ್ಮಾಯಿ?

ಬಿಟ್ ಕಾಯಿನ್ ಪ್ರಕರಣವನ್ನು ಸ್ವತಂತ್ರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿರುವ ಕಾಂಗ್ರೆಸ್, ರಾಜ್ಯ ಸರ್ಕಾರ ಈವರೆಗೂ ಯಾವುದೇ ತನಿಖೆಗೆ ಆದೇಶ ಮಾಡಿಲ್ಲ ಎಂದಿದೆ. "ಬಿಟ್ ಕಾಯಿನ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಮಧ್ಯೆ ತಾಳಮೇಳ ಕಾಣುತ್ತಿಲ್ಲ. ಒಬ್ಬರು ತನಿಖೆಯನ್ನು ಇಡಿಗೆ ವಹಿಸಲಾಗಿದೆ ಎಂದರೆ, ಮತ್ತೊಬ್ಬರು ಮತ್ತೊಂದು ಸಂಸ್ಥೆಗೆ ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. ರಾಜ್ಯ ಸರ್ಕಾರ ಬಿಟ್ ಕಾಯಿನ್ ಹಗರಣವನ್ನು ಯಾವ ತನಿಖಾ ಸಂಸ್ಥೆಗೆ ವಹಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ" ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಗಂಭೀರ ಪ್ರಶ್ನೆಯನ್ನು ಎತ್ತಿದ್ದಾರೆ.

  ಕರ್ನಾಟಕದ Manjamma ಪದ್ಮಶ್ರೀ ಸ್ವೀಕರಿಸುವಾಗ ಮಾಡಿದ್ದೇನು | Oneindia Kannada
  ಬಿಟ್ ಕಾಯಿನ್ ಜೊತೆಗೆ ಸಿಎಂಗೆ ಮತ್ತೊಂದು ಸವಾಲು!

  ಬಿಟ್ ಕಾಯಿನ್ ಜೊತೆಗೆ ಸಿಎಂಗೆ ಮತ್ತೊಂದು ಸವಾಲು!

  ಒಂದೆಡೆ ಉಪ ಚುನಾವನೆ ಫಲಿತಾಂಶ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಿನ್ನಡೆಯನ್ನುಂಟು ಮಾಡಿದೆ. ಸತತ 10 ದಿನಗಳ ಪ್ರಚಾರದ ಬಳಿಕವೂ ತಾವು ಪ್ರತಿನಿಧಿಸುವ ಕ್ಷೇತ್ರದ ಪಕ್ಕದ ಹಾನಗಲ್ ಉಪ ಚುನಾವಣೆಯಲ್ಲಿ ಗೆಲ್ಲುವುದು ಸಾಧ್ಯವಾಗಿಲ್ಲ. ಇದೇ ವೇಳೆ ವಿಧಾನ ಪರಿಷತ್‌ ಚುನಾವಣೆ ಎದುರಾಗಿದೆ. ವಿಧಾನ ಪರಿಷತ್‌ನಲ್ಲಿ ಬಹುಮತ ಪಡೆಯಲು 25 ಸ್ಥಾನಗಳಲ್ಲಿ ಕನಿಷ್ಠ 12 ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ಬಿಟ್ ಕಾಯಿನ್ ಪ್ರಕರಣ ಧುತ್ತೆಂದು ಮತ್ತೊಂದು ಸಂಕಷ್ಟ ತಂದಿಟ್ಟಿದೆ. ಈ ಎಲ್ಲ ಆರೋಪಗಳನ್ನು ಹೇಗೆ ಎದುರಿಸಿ ಹೊರಗೆ ಬರುತ್ತಾರೆ ಎಂಬುದರ ಮೇಲೆ ಸಿಎಂ ಬೊಮ್ಮಾಯಿ ಅವರ ಸರ್ಕಾರದ ಭವಿಷ್ಯ ನಿಂತಿದೆ ಎಂಬುದು ಕೂಡ ನಿಜ!

  English summary
  Congress MLA Priyank Kharge has made a serious statement that Bommai will lose power in the bitcoin case. Know more.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  Desktop Bottom Promotion