Get Updates
Get notified of breaking news, exclusive insights, and must-see stories!

Bakrid 2023: ಗೋರಕ್ಷಣೆ ಹೆಸರಲ್ಲಿ ಹಿಂಸಾಚಾರ ಮಾಡಿದರೇ ಸಂವಿಧಾನದ ಶಕ್ತಿ ತೋರಿಸುತ್ತೇವೆ- ಪ್ರಿಯಾಂಕ್ ಖರ್ಗೆ ಕಿಡಿ

ಬೆಂಗಳೂರು, ಜೂನ್. 27: ಮುಸ್ಲಿಂ ಸಮುದಾಯದವರ ಪ್ರಮುಖ ಹಬ್ಬ ಬಕ್ರೀದ್ ಬರುತ್ತಿದ್ದು, ಈ ವೇಳೆ ಗೋರಕ್ಷಣೆ ಹೆಸರಲ್ಲಿ ಕಾನೂನು ಉಲ್ಲಂಘಿಸಿದರೇ ಅವರಿಗೆ ಸಂವಿಧಾನದ ಶಕ್ತಿಯನ್ನು ತೋರಿಸಬೇಕಾಗುತ್ತದೆ ಎಂದು ಕರ್ನಾಟಕದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಈ ಮೂಲಕ ಗೋರಕ್ಷಕರಿಗೆ ನೇರ ಎಚ್ಚರಿಕೆ ರವಾನಿಸಿದ್ದಾರೆ.

ಬಕ್ರೀದ್ ಸಂದರ್ಭದಲ್ಲಿ ಗೋರಕ್ಷಕತ್ವವನ್ನು ಪ್ರಯತ್ನಿಸಲು ಧೈರ್ಯ ಮಾಡಿದರೇ, ಅವರ ಸರ್ಕಾರದ 'ಸಂವಿಧಾನದ ಶಕ್ತಿಯನ್ನು' ಬಳಸಿಕೊಳ್ಳುವ ಉದ್ದೇಶವನ್ನು ಬಿಜೆಪಿಗೆ ನೆನಪಿಸಿದ್ದಾರೆ. ರಾಜ್ಯದಲ್ಲಿ ಅಕ್ರಮ ಗೋಹತ್ಯೆಯನ್ನು ಉತ್ತೇಜಿಸುವ ಮೂಲಕ ಸಚಿವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಮತ್ತು ಆ ಮೂಲಕ ಸಂವಿಧಾನವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

Priyank Kharge Dares BJP to Try Cow Vigilantism

ಕೆಲವು ದಿನಗಳ ಹಿಂದೆ ರಾಜ್ಯ ಪೊಲೀಸ್ ಅಧಿಕಾರಿಗಳನ್ನು ಉದ್ದೇಶಿಸಿ ಖರ್ಗೆ ಅವರ ಭಾಷಣದ ಕಿರು ವಿಡಿಯೋವನ್ನು ಬಿಜೆಪಿ ಹಂಚಿಕೊಂಡಿತ್ತು. "ಭಾರತೀಯ ಸಂವಿಧಾನದ 48 ನೇ ವಿಧಿಯು ಪ್ರಾಣಿಗಳನ್ನು, ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ವಧೆ ಮಾಡುವುದನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ. ಆದರೆ, ಪ್ರಿಯಾಂಕ್ ಖರ್ಗೆ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದರ ಮೂಲಕ ಅಕ್ರಮ ಗೋಹತ್ಯೆಯನ್ನು ಉತ್ತೇಜಿಸುವುದು ಮಾತ್ರವಲ್ಲದೆ ಅದನ್ನು ವಿರೋಧಿಸುವವರನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ" ಎಂದಿತ್ತು.

ಜೊತೆಗೆ "ಸ್ವಯಂ ಘೋಷಿತ ಸಂವಿಧಾನ ತಜ್ಞ ಸಿದ್ದರಾಮಯ್ಯ ಅವರು, ಇದು ಬಾಬಾ ಸಾಹೇಬರ ಭಾರತೀಯ ಸಂವಿಧಾನವನ್ನು ಉಲ್ಲಂಘಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ವಿವರಿಸಬೇಕು.ಇಲ್ಲದಿದ್ದರೆ, ಇಬ್ಬರೂ ಭಾರತೀಯ ಸಂವಿಧಾನದ ಬಗ್ಗೆ ಶಿಕ್ಷಣ ಪಡೆಯಬೇಕು" ಎಂದು ಪ್ರಿಯಾಂಕಾ ಖರ್ಗೆ ಅವರ ವಿಡಿಯೋ ಜೊತೆಗೆ ಟಿಪ್ಪಣಿ ಬರೆದು ಟ್ವೀಟ್ ಮಾಡಿತ್ತು.

ಈ ಟ್ವೀಟ್ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, "ಆತ್ಮೀಯ ಕರ್ನಾಟಕ ಬಿಜೆಪಿ ಪಕ್ಷದ ಟ್ವಿಟರ್ ಹ್ಯಾಂಡಲ್ ಅನ್ನು ನಿರ್ವಹಿಸುತ್ತಿರುವ ನಿಮ್ಮ ಏಜೆನ್ಸಿಯನ್ನು ವಜಾ ಮಾಡುವ ಸಮಯವಿದು. ಅವರಿಗೆ ಕನ್ನಡ ಅರ್ಥವಾಗುವುದಿಲ್ಲ, ಸಂವಿಧಾನವನ್ನು ಅರ್ಥಮಾಡಿಕೊಳ್ಳುವುದನ್ನು ಮರೆತುಬಿಟ್ಟಿದ್ದಾರೆ. ಬಿಜೆಪಿಯವರು ಗೋರಕ್ಷಣೆ ಕಾನೂನುಬದ್ಧವಾಗಿದೆ ಮತ್ತು ಗೋರಕ್ಷಕರಿಗೆ ಯಾವುದೇ ರೀತಿಯ ಕಾನೂನನ್ನು ಮುರಿಯಲು ಪ್ರೋತ್ಸಾಹಿಸಬೇಕು ಎಂಬುದನ್ನು ಹೇಳುತ್ತಿದೆಯೇ?. ಹಾಗಾದರೆ, ಅದನ್ನು ಪ್ರಯತ್ನಿಸಿ ಸ್ನೇಹಿತರೇ, ಕರ್ನಾಟಕ ಸರ್ಕಾರ ನಿಮಗೆ ಸಂವಿಧಾನದ ಶಕ್ತಿಯನ್ನು ತೋರಿಸುತ್ತದೆ" ಎಂದು ಸವಾಲು ಹಾಕಿದ್ದರು.

Priyank Kharge Dares BJP to Try Cow Vigilantism

ಇನ್ನು, ಪ್ರಿಯಾಂಕ್ ಖರ್ಗೆ ಅವರ ಭಾಷಣದ ಸುದೀರ್ಘ ವಿಡಿಯೋವನ್ನು ಇಂಗ್ಲಿಷ್‌ನಲ್ಲಿ ಉಪಶೀರ್ಷಿಕೆಗಳೊಂದಿಗೆ ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಟ್ವೀಟ್ ಮಾಡಿದ್ದಾರೆ. ಅದರ ಪ್ರಮುಖ ಅಂಶಗಳು ಹೀಗಿವೆ. "ಬಕ್ರೀದ್ ಬರುತ್ತಿದೆ, ಕಾನೂನಿನ ಪ್ರಕಾರ, ಎಲ್ಲಾ ಪಿಎಸ್‌ಐಗಳು ಮತ್ತು ಡಿಎಸ್‌ಪಿಗಳು ದಯವಿಟ್ಟು ಆಲಿಸಿ, ನಾವು ಈ ದಳ, ಆ ದಳ ಎಂದು ಹೇಳಿಕೊಂಡ ಗೋರಕ್ಷಕರಿಗೆ, ರೈತರು ಎಷ್ಟು ಕಷ್ಟಪಡುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲ. ಯಾರಾದರೂ ಶಾಲು ಹೊದ್ದುಕೊಂಡು ನಾವು ಈ ಸಂಘಟನೆಯಿಂದ ಬಂದವರು ಎಂದು ಹೇಳಿದರೆ ಅವರು ಕಾನೂನನ್ನು ಕೈಗೆ ತೆಗೆದುಕೊಂಡರೆ ಅವರನ್ನು ಒದ್ದು ಕಂಬಿಗಳ ಹಿಂದೆ ಹಾಕಿ" ಎಂದಿದ್ದಾರೆ.

"ಕಾನೂನು ಬಹಳ ಸ್ಪಷ್ಟವಾಗಿದೆ, ಜಾನುವಾರುಗಳ ಎಲ್ಲಾ ಸಾಗಣೆಯು ಅದು ನಗರ ವ್ಯಾಪ್ತಿಯಲ್ಲಿರಲಿ ಅಥವಾ ಗ್ರಾಮೀಣ ಪ್ರದೇಶಗಳಲ್ಲಿರಲಿ, ಅವರು ಅನುಮತಿ ಮತ್ತು ದಾಖಲೆಗಳನ್ನು ಹೊಂದಿದ್ದರೆ, ಕಿರುಕುಳವನ್ನು ನಿಲ್ಲಿಸಿ. ಅವರಿಗೆ ಕೆಲಸ ಕೊಟ್ಟು ನೀವು ಪೊಲೀಸ್ ಠಾಣೆಯಲ್ಲಿ ಕೂರುತ್ತೀರಾ? ಹಿಂದಿನ ಸರ್ಕಾರದ ಅವಧಿಯಲ್ಲಿ ಈ ಕಿರುಕುಳ ಆರಂಭವಾಗಿತ್ತು" ಎಂದು ಪೊಲೀಸ್ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+