ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು, ಕನ್ನಡ ಪತ್ರಿಕೆಗಳು ಕಂಡಂತೆ

Posted By: Gururaj
Subscribe to Oneindia Kannada

ಬೆಂಗಳೂರು, ಆಗಸ್ಟ್. 25 : ಖಾಸಗಿತದ ಹಕ್ಕು ಸಂವಿಧಾನ ನೀಡಿರುವ ಮೂಲಭೂತ ಹಕ್ಕಿನ ಭಾಗವೇ ಆಗಿದೆ ಎಂದು ಸುಪ್ರೀಂಕೋರ್ಟ್ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಸರ್ವಾನುಮತದ ತೀರ್ಪು ನೀಡಿದೆ.

ಗುರುವಾರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿ.ಎಸ್.ಖೇಹರ್ ನೇತೃತ್ವದ ಸಂವಿಧಾನಿಕ ಪೀಠ, ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ಅಡಿಯಲ್ಲಿನ ಸೌಲಭ್ಯಗಳನ್ನು ಪಡೆಯುವುದಕ್ಕೆ ಆಧಾರ್‌ ನೋಂದಣಿಯನ್ನು ಕಡ್ಡಾಯಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿ ಪೀರ್ಪು ನೀಡಿದೆ.

'ಖಾಸಗಿತನ ಮೂಲಭೂತ ಹಕ್ಕು' ಸಾಂವಿಧಾನಿಕ ಪೀಠದಿಂದ ಮಹತ್ವದ ತೀರ್ಪು

ಸಂವಿಧಾನಿಕ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌, ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್‌, ಎಸ್‌.ಎ. ಬೊಬ್ಡೆ, ಆರ್‌.ಕೆ. ಅಗರ್‌ವಾಲ್‌, ಆರ್‌.ಎಫ್‌. ನಾರಿಮನ್‌, ಎ.ಎಂ. ಸಪ್ರೆ, ಡಿ.ವೈ. ಚಂದ್ರಚೂಡ್‌, ಎಸ್‌. ಕೆ. ಕೌಲ್‌, ಎಸ್‌. ಅಬ್ದುಲ್‌ ನಜೀರ್‌ ಇದ್ದರು.

ಏನಿದು ಖಾಸಗಿತನದ ಹಕ್ಕು?: ತಿಳಿಯಬೇಕಾದ 6 ಸಂಗತಿ

ಕನ್ನಡ ದಿನ ಪತ್ರಿಕೆಗಳು ಐತಿಹಾಸಿಕ ತೀರ್ಪಿನ ಬಗ್ಗೆ ವಿವರವಾದ ವರದಿಯನ್ನು ಪ್ರಕಟಿಸಿವೆ. ಖಾಸಗಿ ತನಕ್ಕೆ ಇನ್ನು ಮುಂದೆ ಧಕ್ಕೆ ಇಲ್ಲ ಎಂದು ಹೇಳಿವೆ. ಯಾವ ಪತ್ರಿಕೆ ಶೀರ್ಪಿಕೆ ಏನಿದೆ? ನೋಡಿ...

ಖಾಸಗಿತನಕ್ಕೆ ಇನ್ನಿಲ್ಲ ವಿಘ್ನ

ಖಾಸಗಿತನಕ್ಕೆ ಇನ್ನಿಲ್ಲ ವಿಘ್ನ

ವಿಜಯವಾಣಿ 'ಖಾಸಗಿತನಕ್ಕೆ ಇನ್ನಿಲ್ಲ ವಿಘ್ನ' ಎಂಬ ಶೀರ್ಷಿಕೆಯಡಿ ಸಂವಿಧಾನಿಕ ಪೀಠದ ಆದೇಶವನ್ನು ಪ್ರಕಟಿಸಿದೆ.

ಖಾಸಗಿತನ ಮೂಲಭೂತ ಹಕ್ಕು

ಖಾಸಗಿತನ ಮೂಲಭೂತ ಹಕ್ಕು

ವಿಜಯ ಕರ್ನಾಟಕ ದಿನಪತ್ರಿಕೆ 'ಖಾಸಗಿತನ ಮೂಲ ಹಕ್ಕು' ಎಂಬ ಶೀರ್ಷಿಕೆಯಡಿ ಸುಪ್ರೀಂಕೋರ್ಟ್ ತೀರ್ಪಿನ ವರದಿಯನ್ನು ವಿವರವಾಗಿ ಪ್ರಕಟಿಸಿದೆ.

ಆಧಾರ್ ಕಡ್ಡಾಯ ನಿರ್ಧಾರಕ್ಕೆ ಹಿನ್ನಡೆ

ಆಧಾರ್ ಕಡ್ಡಾಯ ನಿರ್ಧಾರಕ್ಕೆ ಹಿನ್ನಡೆ

ವಿಶ್ವವಾಣಿ ಪತ್ರಿಕೆ 'ಆಧಾರ್ ಕಡ್ಡಾಯ ನಿರ್ಧಾರಕ್ಕೆ ಹಿನ್ನಡೆ' ಎಂಬ ಶೀರ್ಷಿಕೆಯಡಿ ನ್ಯಾಯಾಲಯದ ತೀರ್ಪಿನ ಸುದ್ದಿಯನ್ನು ಪ್ರಕಟಿಸಿದೆ.

ಖಾಸಗಿತನ ಮೂಲಭೂತ ಹಕ್ಕು

ಖಾಸಗಿತನ ಮೂಲಭೂತ ಹಕ್ಕು

'ಖಾಸಗಿತನ ಮೂಲಭೂತ ಹಕ್ಕು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು' ಎಂಬ ಶೀರ್ಷಿಕೆಯಡಿ ವಾರ್ತಾಭಾರತಿ ಕೋರ್ಟ್ ತೀರ್ಪಿನ ವರದಿಯನ್ನು ಪ್ರಕಟಿಸಿದೆ.

ಪ್ರಜಾವಾಣಿ ಶೀರ್ಷಿಕೆ ಹೇಗಿದೆ?

ಪ್ರಜಾವಾಣಿ ಶೀರ್ಷಿಕೆ ಹೇಗಿದೆ?

'ಖಾಸಗಿತನ ಮೂಲಭೂತ ಹಕ್ಕು' ಎಂಬ ಶೀರ್ಷಿಕೆಯಡಿ ಪ್ರಜಾವಾಣಿ ಸುಪ್ರೀಂಕೋರ್ಟ್ ತೀರ್ಪಿನ ವರದಿಗಳನ್ನು ಪ್ರಕಟಿಸಿದೆ.

ಸಂಯುಕ್ತ ಕರ್ನಾಟಕ ಹೆಡ್ ಲೈನ್

ಸಂಯುಕ್ತ ಕರ್ನಾಟಕ ಹೆಡ್ ಲೈನ್

ಸಂಯುಕ್ತ ಕರ್ನಾಟಕ 'ಆಧಾರ್ ಗೆ ಗುನ್ನ' ಎಂಬ ಶೀರ್ಷಿಕೆಯಡಿ ಐತಿಹಾಸಿಕ ತೀರ್ಪಿನ ವರದಿಗಳನ್ನು ಪ್ರಕಟಿಸಿದೆ.

ನನ್ನ ಖಾಸಗಿತನ ನನ್ನ ಹಕ್ಕು

ನನ್ನ ಖಾಸಗಿತನ ನನ್ನ ಹಕ್ಕು

'ನನ್ನ ಖಾಸಗಿತನ ನನ್ನ ಹಕ್ಕು' ಎಂಬ ಶೀರ್ಷಿಕೆಯಡಿ ಉದಯವಾಣಿ ಸುಪ್ರೀಂಕೋರ್ಟ್ ತೀರ್ಪಿನ ವರದಿಗಳನ್ನು ಪ್ರಕಟಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme Court pronounced that individual privacy is a fundamental right protected by the Constitution. The ruling was delivered by a rare nine-member benchand is based on an array of petitions that challenge the mandatory use of Aadhaar cards.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ