Prakash Raj: ಜನರಿಗೆ ಗಣತಿ ನಮೂನೆ ಸಿಕ್ಕಿಲ್ಲ! ಭರ್ತಿ ಮಾಡಿದ್ಯಾರು, ಸ್ವೀಕರಿಸಿದವರಾರು? ಪ್ರಕಾಶ್ ರಾಜ್ ಪ್ರಶ್ನೆ
ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIRಗ) ಗೆ ಸಂಬಂಧಿಸಿದಂತೆ ಅಭಿಯಾನ ಕೈಗೊಂಡಿರುವ ನಟ ಪ್ರಕಾಶ್ ರಾಜ್ ಅವರು ಇಂದು ತುಮಕೂರಿನ ಎನ್.ಆರ್. ಕಾಲೋನಿಗೆ ಭೇಟಿ ನೀಡಿದರು. ಗಣತಿ ನಮೂನೆ ನಾಗರಿಕರ ಕೈ ಸೇರಿಲ್ಲ. ಆದರೆ ರಾಜ್ಯ ಚುನಾವಣಾ ಆಯುಕ್ತರು ಈ ಬಗ್ಗೆ ನೀಡಿದ ಹೇಳಿಕೆಗಳು ಸುಳ್ಳೆಂದು ತಿಳಿಯುತ್ತದೆ. ಇದಕ್ಕೆಲ್ಲ ಯಾರು ಜವಾಬ್ದಾರರು, ಬೂತ್ ಮಟ್ಟದ ಅಧಿಕಾರಿಗಳು ಎಲ್ಲಿ ಎಂದು ರಾಜ್ಯ ಹಾಗೂ ಕೇಂದ್ರ ಚುನಾವಣೆ ಆಯೋಗ ನಡೆಸುತ್ತಿರುವ SIR ಕುರಿತು ತೀವ್ರವಾಗಿ ಪ್ರಶ್ನಿಸಿದರು.
SIRಗೆ ಸಂಬಂಧಿಸಿದ ಲೋಪಗಳು, ನಾಗರಿಕರ ಸಮಸ್ಯೆ, ಅಗತ್ಯ ಮಾಹಿತಿ ಆಲಿಸಲು ನಾಗರಿಕರ ಸಂಘಟನೆಗಳ ಜೊತೆ ಕೈ ಜೋಡಿಸಿರುವ ನಟ ಪ್ರಕಾಶ್ ರಾಜ್ ಅವರು ಸೆಪ್ಟೆಂಬರ್ 20ರಿಂದ ಹತ್ತು ದಿನಗಳ ಅಭಿಯಾನ ನಡೆಸುತ್ತಿದ್ದಾರೆ. ಅದರ ಭಾಗವಾಗಿ ಇಂದು ಶನಿವಾರ ಅವರು ಅವರು ಎನ್.ಆರ್. ಕಾಲೋನಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿದ್ದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು. ಎಸ್‌ಆರ್ ಐ ಎಂಬುದು ಇದೊಂದು ಪಿತೂರಿಯಾಗಿದ್ದು, ಮತಗಟ್ಟೆ ಮಟ್ಟದಲ್ಲಿ ಸಾರ್ವಜನಿಕರು ಅಸಹಾಯಕರಾಗಿದ್ದಾರೆ ಎಂದು ಅವರು ದೂರಿದರು.
ಭೇಟಿ ವೇಳೆ ಸ್ಥಳೀಯ ಮಹಿಳೆಯರನ್ನು ಪ್ರಶ್ನಿಸಿದ್ದಾರೆ. 'ಇಲ್ಲಿ ಎಷ್ಟು ಜನ ವಾಸಿಸುತ್ತಿದ್ದೀರಿ, ಕುಟುಂಬದಲ್ಲಿ ಎಷ್ಟು ಜನ ಇದ್ದೀರಿ. ಮತದಾರರ ಪಟ್ಟಿಯಲ್ಲಿ ಹೆಸರು ಸರಿಯಾಗಿದೆಯಾ? ಎಂದು ಪ್ರಶ್ನಿಸುತ್ತಾರೆ. ಆಗ ಸ್ಥಳೀಯ ಮಹಿಳೆಯರ ಗುಂಪು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕೈಬಿಡಲಾಗಿದೆ ಎಂದು ಉತ್ತರಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ರಾಜ್ಯ ಚುನಾವಣಾಧಿಕಾರಿ ಸುಳ್ಳು ಹೇಳಿದರಾ?
ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು, SIR ಪ್ರಕ್ರಿಯೆ ಸಂಬಂಧ 5 ಕೊಟಿ ಮತದಾರರಿದ್ದು, 5 ಕೊಟಿ ಗೂ ಅಧಿಕ ಗಣತಿ ನಮೂನೆ ಪ್ರಿಂಟ್ ಮಾಡಲಾಗಿದೆ. ಅವೆಲ್ಲವನ್ನು ಈಗಾಗಲೇ ನಾಗರಿಕರಿಗೆ ವಿತರಿಸಲಾಗಿದೆ ಎಂದಿದ್ದಾರೆ. ಭರ್ತಿಯಾದ ಗಣತಿ ನಮೂನೆ ಸ್ವೀಕರಿಸಿದ್ದೇವೆ ಎಂದು ಹೇಳಿದ್ದಾರೆ. ಆದರೆ ಗಣತಿ ನಮೂನೆ ನಾಗರಿಕರಿಗೆ ತಲುಪಿಯೇ ಇಲ್ಲ ಎಂದು ಪ್ರಕಾಶ್ ರಾಜ್ ದೂರಿದರು.
ಗಣತಿ ನಮೂನೆ ಭರ್ತಿ ಮಾಡಿದ್ದು, ಸ್ವೀಕರಿಸಿದ್ದು ಯಾರು?
ವಾಸ್ತವದಲ್ಲಿ ನಾಗರಿಕರು ಈವರೆಗೂ ಅಂತಹ ಗಣತಿ ನಮೂನೆ ಸ್ವೀರಿಸಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಮತದಾರರ ಪಟ್ಟಿಯಲ್ಲಿ ರಾಜ್ಯದ ನಿವಾಸಿಗಳ ಹೆಸರು ಕಾಣೆಯಾಗಿವೆ. ಅದಕ್ಕೆ ತುಮಕೂರು ಎನ್ ಆರ್ ಕಾಲೋನಿ ನಿವಾಸಿಗಳು ಸಾಕ್ಷ್ಯ. ಹಾಗಾದರೆ ಗಣತಿ ನಮೂನೆ ಭರ್ತಿ ಮಾಡಿದ್ದು ಯಾರು?, ಅವುಗಳನ್ನು ಸ್ವೀಕರಿಸಿದ್ದು ಯಾರು? ಬೂತ್ ಲೆವೆಲ್ ಅಧಿಕಾರಿಗಳು ಎಲ್ಲಿದ್ದಾರೆ, ಈ ಲೋಪಗಳಿಗೆಲ್ಲ ಯಾರು ಹೊಣೆ? ಎಂದು ಖಾರವಾಗಿ ಪ್ರಶ್ನಿಸಿದರು.
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ನಿಮ್ಮ ಐಡಿಯಾ ಏನು? ಯಾವ ಆಧಾರದಲ್ಲಿ ಪಟ್ಟಿ ಪರಿಷ್ಕರಣೆ ಮಾಡುತ್ತೀದ್ದೀರಿ? ಎಂದು ಪ್ರಕಾಶ್ ಅವರು ಕೇಂದ್ರ ಹಾಗೂ ರಾಜ್ಯ ಚುಣಾವಣಾಧಿಕಾರಿಗಳ ವಿರುದ್ಧವು ಕಿಡಿ ಕಾರಿದರು.
ಅಭಿಯಾನದ ಮಾಹಿತಿ ದೆಹಲಿಯಲ್ಲಿ ಸಾರ್ವಜನಿಕವಾಗಿ ಪ್ರಕಟ
ಈ ಹಿಂದೆ ಕಲಬುರಗಿಗೂ ಭೇಟಿ ನೀಡಿದ್ದ ಪ್ರಕಾಶ್ ರಾಜ್ಯ ಅವರು ಈ ಅಭಿಯಾನವನ್ನು ಸೆ.30ರವರೆಗೆ ಮುಂದುವರಿಸಲಿದ್ದಾರೆ. ಒಟ್ಟು SIR ನಡೆಯುತ್ತಿರುವ 100 ಮತಗಟ್ಟೆಗಳ ಮ್ಯಾಪಿಂಗ್ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಭಿಯಾನದಲ್ಲಿ ಸಂಗ್ರಹವಾಗುವ ಮಾಹಿತಿ, ಲೋಪಗಳು, SIR ಬಾಧಿತ ಮತದಾರರ ಅಭಿಪ್ರಾಯ ಸಂಗ್ರಹಿಸಿ, ಜನರು ಈ ಪ್ರಕ್ರಿಯೆಯಲ್ಲಿ ಅನುಭವಿಸಿದ ಸಮಸ್ಯೆಗಳ ವರದಿ ತಯಾರಿಸಲಿದ್ದಾರೆ. ಬಳಿಕ ಸಂಗ್ರಹವಾದ ದತ್ತಾಂಶ, ಮಾಹಿತಿಯನ್ನು ಅಕ್ಟೋಬರ್ 1 ಮತ್ತು 2 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಸಾರ್ವಜನಿಕವಾಗಿ ಪ್ರಕಟಿಸಲಿದ್ದಾರೆ. SIR ಹಗರಣ, ಪಿತೂರಿ ವಿರುದ್ಧ ಆರೋಪಿಸಿರುವ ಸಂಘಟನೆಗಳು ಅ.15ರೊಳಗೆ ನ್ಯಾಯಾಲಯ ಮೆಟ್ಟಿಲೇರಲು ಪ್ಲ್ಯಾನ್ ಮಾಡಿಕೊಂಡಿವೆ.


Click it and Unblock the Notifications
