Prajwal Revanna Case: ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ದೇವರಾಜೇಗೌಡ; ಬಿಚ್ಚಿಟ್ಟ ಸತ್ಯವೇನು?
ಹಾಸನ, ಮೇ 03: ಹಾಸನದಲ್ಲಿ ಭಾರೀ ಸದ್ದು ಮಾಡಿರುವ ಲೈಂಗಿಕ ದೌರ್ಜನ್ಯಗಳ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಸದ್ಯ ಜರ್ಮನಿಯಲ್ಲಿದ್ದು, ಎಸ್ ಐಟಿ ತನಿಖೆ ಶುರು ಮಾಡಿದೆ. ವಿಡಿಯೋ ಲೀಕ್ ಆಗಿರುವುದೇಗೆ ಎನ್ನುವುದನ್ನು ಹೊಳೆ ನರಸೀಪುರ ವಿಧಾನಸಭೆ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ, ವಕೀಲ ದೇವರಾಜೇಗೌಡ ಬಹಿರಂಗಪಡಿಸಿದ್ದು, ಎಸ್ ಐಟಿ ನೋಟಿಸ್ ನೀಡಿತ್ತು.
ಸಂಸದ ಪ್ರಜ್ವಲ್‌ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆ ನರಸೀಪುರ ವಿಧಾನಸಭೆ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ, ವಕೀಲ ದೇವರಾಜೇಗೌಡ ಅವರು ಗುರುವಾರ ಎಸ್ ಐಟಿ ಅಧಿಕಾರಗಳ ಮುಂದೆ ಹಾಜರಾಗಿದ್ದರು. ಹೊಳೆ ನರಸೀಪುರ ವಿಧಾನಸಭೆ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ದೇವರಾಜೇಗೌಡರಿಗೆ ಮಾತ್ರ ಪೆನ್‌ಡ್ರೈವ್ ಕೊಟ್ಟಿದ್ದೆ ಎಂದು ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೆ ವಿಚಾರಣೆಗೆ ಹಾಜರಾಗುವಂತೆ ದೇವರಾಜೇಗೌಡ ಅವರಿಗೆ ಎಸ್ ಐಟಿ ಅಧಿಕಾರಿಗಳಿಗೆ ನೋಟೀಸ್ ನೀಡಿದ್ದರು.

ಗುರುವಾರ ಎಸ್‌ಐಟಿ ಮುಂದೆ ಹಾಜರಾಗಿದ್ದ ಹೊಳೆ ನರಸೀಪುರ ವಿಧಾನಸಭೆ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ, ವಕೀಲ ದೇವರಾಜೇಗೌಡ ಅವರು ಎಸ್ ಐಟಿ ಅಧಿಕಾರಗಳ ಮುಂದೆ ಹೇಳಿಕೆ ನೀಡಿರುವುದನ್ನು ಸ್ಟೇಟಸ್ ಹಾಕಿಕೊಂಡಿದ್ದು, ನಾನು ಎಸ್‌ಐಟಿ ತಂಡದ ಮುಂದೆ ಹಾಜರಾಗಿ ಈ ಪ್ರಕರಣಕ್ಕೆ ಪೂರಕವಾದ ಸಾಕ್ಷಿ, ಹೇಳಿಕೆಯನ್ನು ನೀಡಿದ್ದೇನೆ. ಈ ಪ್ರಕರಣದ ಪ್ರಮುಖ ಆರೋಪಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಬೇಕು ಹಾಗೆಯೇ ಪೆನ್‌ಡ್ರೈವ್‌ನಲ್ಲಿರುವ ಅಶ್ಲೀಲ ವಿಡಿಯೋಗಳನ್ನು ರಾಜ್ಯಾದ್ಯಂತ ಹಂಚಿರುವ ಕಡುನೀಚರ ಬಗ್ಗೆ ಹಲವು ಸುಳಿವುಗಳನ್ನು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಸದರಿ ಕಿರಾತಕರನ್ನು ಬಂಧಿಸಲು ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದೇನೆ. ಈ ಪ್ರಕರಣದಲ್ಲಿ ರಾಜ್ಯದ ಹೆಣ್ಣುಮಕ್ಕಳ ಘಟನೆ ಹಾಗೂ ಅವರ ಶೀಲದ ವಿಷಯದಲ್ಲಿ ಚೆಲ್ಲಾಟವಾಡಿರುವ ರಾಜಕಾರಣಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದೇನೆ ಎಂದು ಎಸ್‌ಐಟಿ ಮುಂದೆ ಹೇಳಿಕೆ ನೀಡಿ ನಂತರ ಸ್ಟೇಟಸ್‌ನಲ್ಲಿ ದೇವರಾಜೇಗೌಡ ಅವರು ಬರೆದುಕೊಂಡಿದ್ದಾರೆ.
ದೇವರಾಜೇಗೌಡ ಸ್ಟೇಟಸ್‌ನಲ್ಲಿ ಬರೆದುಕೊಂಡಿರುವುದೇನು?
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇವರ ಪೆನ್ ಡ್ರೈವ್ ಅಶ್ಲೀಲ ವಿಡಿಯೋ ಬಿಡುಗಡೆಯಾಗಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಈ ದಿನ (ಗುರುವಾರ) ನನಗೆ ಎಸ್. ಐ. ಟಿ ತನಖಾ ತಂಡವು ನೋಟಿಸ್ ನೀಡಿದ ಹಿನ್ನೆಲೆ ನಾನು ಈ ದಿನ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಎಸ್.ಐ.ಟಿ ತಂಡದ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಈ ಪ್ರಕರಣಕ್ಕೆ ಪೂರಕವಾದ ಸಾಕ್ಷಿಯ ಹೇಳಿಕೆಯನ್ನು ನೀಡಿ ಈ ಪ್ರಕರಣದ ಪ್ರಮುಖ ಆರೋಪಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈ ತೆಗೆದುಕೊಳ್ಳಲು ಹಾಗೂ ಪೆನ್ ಡ್ರೈವ್ ನಲ್ಲಿ ಇರುವ ಅಶ್ಲೀಲ ವಿಡಿಯೋಗಳನ್ನು ರಾಜ್ಯಾದ್ಯಂತ ಹಂಚಿರುವ ಕಡು ನೀಚರ ಬಗ್ಗೆ ಹಲವು ಸುಳಿವುಗಳನ್ನು ನೀಡಿದ್ದು ಸದರಿ ಕಿರಾತಕರನ್ನು ಬಂದಿಸಲು ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲು ನಾನು ಸಹಕರಿಸುವುದಾಗಿ ಹೇಳಿರುತ್ತೇನೆ ಹಾಗೂ ಈ ಪ್ರಕರಣದಲ್ಲಿ ರಾಜ್ಯದ ಹೆಣ್ಣು ಮಕ್ಕಳ ಘನತೆ ಹಾಗೂ ಅವರ ಶೀಲದಲ್ಲಿ ಚೆಲ್ಲಾಟವಾಡಿರುವ ರಾಜಕಾರಣಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದೇನೆ.












Click it and Unblock the Notifications