ಪೊಲೀಸರ ಸಾಮೂಹಿಕ ವರ್ಗ: ಶಾಸಕರು ಕಿಡಿಕಿಡಿಕಿಡಿ

ಬೆಂಗಳೂರು, ಸೆ.26: ರಾಜ್ಯ ಸರ್ಕಾರವು ಗೌಪ್ಯವಾಗಿ ಭಾರಿ ಪ್ರಮಾಣದಲ್ಲಿ ಪೊಲೀಸ್ ವ್ಯವಸ್ಥೆಗೆ ಸರ್ಜರಿ ಮಾಡಿರುವುದು ಕಾಂಗ್ರೆಸ್ ಶಾಸಕರಲ್ಲೇ ಭಾರಿ ಅಸಮಾಧಾನ ತಂದಿದೆ.
ಕಳೆದೊಂದು ವಾರದಿಂದ ಸ್ವತಃ ಮುಖ್ಯಮಂತ್ರಿಗಳೇ ಪೊಲೀಸ್ ಅಧಿಕಾರಿಗಳ ಸಾಮೂಹಿಕ ವರ್ಗಾವಣೆ ಯಜ್ಞದಲ್ಲಿ ತೊಡಗಿದ್ದರು.

ಅಂತಿಮವಾಗಿ ನಿನ್ನೆ ರಾತ್ರಿ ಔಪಚಾರಿಕವಾಗಿ ಗೃಹ ಸಚಿವ ಜಾರ್ಜ್ ಅವರ ಗಮನಕ್ಕೆ ತಂದು ಸಿಎಂ ಸಿದ್ದರಾಮಯ್ಯನವರು ದಾಖಲೆಯ ಪ್ರಮಾಣದಲ್ಲಿ 600ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

135 ಡಿವೈಎಸ್‌ಪಿ/ಎಸಿಪಿಗಳು ಮತ್ತು 495 ಇನ್ಸ್‌ ಪೆಕ್ಟರುಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಎತ್ತಂಗಡಿ ಮಾಡಲಾಗಿದೆ. ಬಹುತೇಕ ನಗರ ಪ್ರದೇಶಗಳಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್ಸ್‌ ಪೆಕ್ಟರುಗಳನ್ನು ಹೊರವಲಯ ಅಥವಾ ಸಂಚಾರಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಂತೂ ಒಟ್ಟಾರೆ ಶೇ. 75ರಷ್ಟು ಇನ್ಸ್‌ ಪೆಕ್ಟರುಗಳು ವರ್ಗಾವಣೆಗೊಂಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಒಂದು ವಾರದಿಂದ ವರ್ಗಾವಣೆ ಪಟ್ಟಿ ಸಿದ್ದಪಡಿಸುವ ಕಾರ್ಯ ನಡೆದು ಕೊನೆಗೂ ಕಳೆದ ರಾತ್ರಿ ಅಂತಿಮ ಮುದ್ರೆ ಒತ್ತಲಾಗಿದೆ. ಈ ಭಾರಿ ವರ್ಗಾವಣೆಯಿಂದ ಪೊಲೀಸ್ ಇಲಾಖೆಯಲ್ಲೇ ಅಸಮಾಧಾನ ವ್ಯಕ್ತವಾಗಿದೆ. ಹೈದರಾಬಾದ್-ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಕೆಲವು ಪೊಲೀಸ್ ಠಾಣೆಗಳ ಇನ್ಸ್‌ ಪೆಕ್ಟರುಗಳು ಬೆಂಗಳೂರು ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

police-officers-enmass-transferred-by-karnataka-cm-siddaramaiah

ನಿವೃತ್ತ ಪೊಲೀಸ್ ಅಧಿಕಾರಿಯಿಂದ ವರ್ಗಾವಣೆ: ಪೊಲೀಸ್ ಅಧಿಕಾರಿಗಳ ಭಾರಿ ವರ್ಗಾವಣೆ ನಂತರ ಕಾಂಗ್ರೆಸ್ ಶಾಸಕರಲ್ಲಿ ಆಕ್ರೋಶ ಸ್ಫೋಟಗೊಂಡಿದೆ. ಕೆಲವು ಶಾಸಕರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿ ಮಾಡಿ ಅಸಮಾಧಾನ ತೋಡಿಕೊಂಡಿದ್ದರೆ, ಇನ್ನು ಕೆಲವರು ದೂರವಾಣಿ ಮೂಲಕ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ಕೆಪಿಸಿಸಿ ಅಧ್ಯಕ್ಷರಿಗೂ ದೂರು ಕೊಟ್ಟು ಅಳಲು ತೋಡಿಕೊಂಡಿದ್ದಾರೆ. ಶಾಸಕರಲ್ಲಿ ಯಾವ ಪರಿ ಆಕ್ರೋಶ ಮಡುಗಟ್ಟಿದೆ ಎಂದರೆ, ಸಿದ್ದರಾಮಯ್ಯ ರಾಜ್ಯದ ಆಡಳಿತ ಮಾಡುತ್ತಿದ್ದಾರೋ, ಮನೆಯ ಆಡಳಿತ ನಡೆಸುತ್ತಿದ್ದಾರೋ? ಹೀಗಾದರೆ ನಾವು ಶಾಸಕರಾಗಿ ಏಕಿರಬೇಕು? ಎಂದು ಗುಡುಗಿದ್ದಾರೆ.

ನಮ್ಮ ಮಾತನ್ನು ಕೇಳದೆ ಮೂರನೆಯವರ ಶಿಫಾರಸು ಮಾತು ಕೇಳಿ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದೇ ಆದರೆ ನಾವು ಶಾಸಕರಾಗಿದ್ದು ಏನು ಪ್ರಯೋಜನ, ಏನು ಮಾಡಬೇಕು ಎಂದು ತಮ್ಮನ್ನು ತಾವೇ ಶಪಿಸಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ಅತ್ಯಾಪ್ತರಾಗಿರುವ, ನಿವೃತ್ತ ಪೊಲೀಸ್ ಅಧಿಕಾರಿ (ಕೆಲ ಮೂಲಗಳ ಪ್ರಕಾರ ಮಾಜಿ ಐಪಿಎಸ್ ಕೆಂಪಯ್ಯ) ಅವರಿಂದ ವರ್ಗಾವಣೆ ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ.

ನಮ್ಮ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ಬಹಳ ಹಿಂದಿನಿಂದಲೂ ಶಾಸಕರ ಸಲಹೆ, ಅಭಿಪ್ರಾಯ ಪಡೆದು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನಮ್ಮ ಶಿಫಾರಸುಗಳನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ ಎಂದು ಹಲವು ಶಾಸಕರು ಆಕ್ರೋಶಗೊಂಡಿದ್ದಾರೆ.

ಈ ವಿಚಾರದಲ್ಲಿ ರಾಜ್ಯದ ಉಸ್ತುವಾರಿ ಹೊಣೆ ಹೊತ್ತಿರುವ ದಿಗ್ವಿಜಯಸಿಂಗ್ ಅವರಿಗೂ ದೂರು ಕೊಡಲು ಕಾಂಗ್ರೆಸ್ ಶಾಸಕರು ಮುಂದಾಗಿದ್ದಾರೆ. ಸಿದ್ದರಾಮಯ್ಯ ತಮ್ಮ ಬೆಂಬಲಿಗ ಶಾಸಕರು, ಮಂತ್ರಿಗಳಿಗೆ ಮಣೆ ಹಾಕಿ ಅವರಿಗೆ ಮಾತ್ರ ಬೇಕಾದಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಟ್ಟು ನಮ್ಮನ್ನು ಕೈ ಬಿಟ್ಟಿದ್ದಾರೆ. ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಎಂದು ಗೊಣಗಾಡುತ್ತಿರುವುದು ಸರ್ವೆಸಾಮಾನ್ಯವಾಗಿದೆ.

ಕೆಲವರು ಮುಖ್ಯಮಂತ್ರಿ ಕುಟುಂಬದವರ ಕಡೆಯಿಂದ ಒತ್ತಡ ಹಾಕಿಸಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹೀಗಾಗಿ ನಮ್ಮ ಮಾತಿಗೆ ಬೆಲೆ ಸಿಕ್ಕಿಲ್ಲ. ಸಿದ್ದರಾಮಯ್ಯ ಯಾವ ರೀತಿಯ ಆಡಳಿತ ಮಾಡುತ್ತಿದ್ದಾರೆ. ಮನೆಯವರ ಮಾತು ಕೇಳಿ ಆಡಳಿತ ಮಾಡುವುದೇ ಆದರೆ, ಅಧಿಕಾರಿಗಳನ್ನು ವರ್ಗಾವಣೆ ಮಾಡುವುದೇ ಆದರೆ ನಮಗೆ ಇಲ್ಲಿ ಕೆಲಸವೇ ಇಲ್ಲ. ಶಾಸಕರಾಗಿ ಇದ್ದರೂ ಏನು ಪ್ರಯೋಜನ ಎಂದು ಪೇಚಾಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ವರ್ಗಾವಣೆಗೊಂಡಿರುವ ಇನ್ಸ್‌ಪೆಕ್ಟರ್‌ಗಳ ಪಟ್ಟಿ ಹೀಗಿದೆ. ಲಕ್ಷ್ಮೀನಾರಾಯಣ ಎ.ವಿ.- ಆಡುಗೋಡಿ ಸಂಚಾರಿ ಠಾಣೆ, ಗೋಪಾಲಕೃಷ್ಣಗೌಡ- ಏರ್‌ಪೋರ್ಟ್ ಠಾಣೆ, ರಾಜ ಇಮಾಮ್ ಖಾಸಿಂ- ಏರ್‌ಪೋರ್ಟ್ ಸಂಚಾರಿ ಠಾಣೆ, ಮೊಹಮ್ಮದ್ ಬಾಬು- ಅಮೃತಹಳ್ಳಿ ಪೊಲೀಸ್ ಠಾಣೆ, ರಂಗಪ್ಪ ಟಿ- ಅಶೋಕ್‌ನಗರ ಪೊಲೀಸ್ ಠಾಣೆ, ಆಂಥೋಣಿ ಜಾನ್- ಅಶೋಕನಗರ ಸಂಚಾರಿ ಪೊಲೀಸ್ ಠಾಣೆ, ಜಯರಾಂ- ಬಾಗಲೂರು ಪೊಲೀಸ್ ಠಾಣೆ, ಜಗದೀಶ್- ಬನಶಂಕರಿ ಪೊಲೀಸ್ ಠಾಣೆ, ಕುಮಾರಸ್ವಾಮಿ- ಮಹಾಲಕ್ಷ್ಮಿಪುರಂ ಪೊಲೀಸ್ ಠಾಣೆ, ನಾಗರಾಜ ಎಂಎನ್- ಮಲ್ಲೇಶ್ವರಂ ಪೊಲೀಸ್ ಠಾಣೆ, ಸತ್ಯವತಿ- ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣೆ, ಗವಿಸಿದ್ದಪ್ಪ- ಮೈಕೋ ಲೇಔಟ್ ಸಂಚಾರಿ ಪೊಲೀಸ್ ಠಾಣೆ, ಶ್ರೀಧರ್ ಕೆವಿ- ನಂದಿನಿ ಲೇಔಟ್ ಪೊಲೀಸ್ ಠಾಣೆ, ಧರಣೇಶ್- ಡಿಸಿಪಿ ಪೂರ್ವ ವಿಭಾಗ, ಅಮರನಾರಾಯಣ- ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ, ಯತಿರಾಜ್- ಪೀಣ್ಯ ಪೊಲೀಸ್ ಠಾಣೆ, ಯೋಗೀಂದ್ರನಾಥ್- ಪೀಣ್ಯ ಸಂಚಾರಿ ಪೊಲೀಸ್ ಠಾಣೆ, ವಿಶ್ವನಾಥ್ ಕೆ.ಆರ್- ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ, ರಘುಪತಿ- ಆರ್ ಟಿ ನಗರ ಪೊಲೀಸ್ ಠಾಣೆ, ಜಯಂತಿ- ಆರ್ ಟಿ ನಗರ ಸಂಚಾರಿ ಪೊಲೀಸ್ ಠಾಣೆ, ಗಣಪತಿ- ರಾಜ್‌ಗೋಪಾಲನಗರ ಪೊಲೀಸ್ ಠಾಣೆ, ರಮೇಶ್ ಎನ್ - ರಾಜಾಜಿನಗರ ಪೊಲೀಸ್ ಠಾಣೆ, ವಿಕ್ಟರ್ ಸೈಮನ್- ರಾಜಾಜಿನಗರ ಸಂಚಾರಿ ಠಾಣೆ, ತಲ್ವಾರ್ ಮಂಜುನಾಥ್- ರಾಜರಾಜೇಶ್ವರಿ ನಗರ ಠಾಣೆ, ರಮೇಶ್ ಪಿ.ಎಲ್ -ರಾಮಮೂರ್ತಿನಗರ ಠಾಣೆ, ಸೋಮಶೇಖರ್- ಎಸ್ ಜೆ ಪಾರ್ಕ್ ಠಾಣೆ, ಮಲ್ಲೇಶಯ್ಯ- ಸದಾಶಿವನಗರ ಠಾಣೆ, ರಮೇಶ್ ಕೆ.ಎಂ- ಸದಾಶಿವನಗರ ಸಂಚಾರಿ ಠಾಣೆ, ಮಂಜುನಾಥ್ ಎಂ.ಎನ್- ಸಂಪಂಗಿರಾಮನಗರ ಠಾಣೆ, ಕೇಶವಮೂರ್ತಿ- ಸಂಪಂಗಿಹಳ್ಳಿ ಠಾಣೆ, ಪರಮೇಶ್ವರ್ ಹೆಗಡೆ- ಸಂಜಯನಗರ ಠಾಣೆ, ರವಿಪ್ರಸಾದ್- ಶೇಷಾದ್ರಿಪುರಂ ಠಾಣೆ, ಮಂಜುನಾಥ ಶೆಟ್ಟಿ- ಇಂದಿರಾನಗರ, ಚಂದ್ರದಾರ- ಇಂದಿರಾನಗರ ಸಂಚಾರಿ, ಪಾಂಡುರಂಗ- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರಮೇಶ್‌ ಕುಮಾರ್- ಜೆ.ಸಿ.ನಗರ, ಮನೋಜ್‌ ಕುಮಾರ್- ಜೆ.ಪಿ.ನಗರ, ವೆಂಕಟೇಶ್ ಟಿ.ಸಿ- ಜಾಲಹಳ್ಳಿ, ಲೋಕೇಶ್ ಎಂ.ಪಿ- ಜಯನಗರ, ಶೋಭಾ ಎಸ್. ಕಾತಾವ್ಕರ್- ಜಯನಗರ ಸಂಚಾರ, ಶಿವಶಂಕರರೆಡ್ಡಿ- ಜೀವನ್‌ ಬೀಮಾನಗರ, ರವೀಶ- ಜ್ಞಾನಭಾರತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+