Get Updates
Get notified of breaking news, exclusive insights, and must-see stories!

Karnataka Police: ಕರ್ನಾಟಕ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳಿಗೆ ಸಿಹಿಸುದ್ದಿ

ಬೆಂಗಳೂರು, ಸೆಪ್ಟೆಂಬರ್ 26: ವಿಶೇಷ ಗುಂಪು ವಿಮಾ ಮೊತ್ತದ ವಿಚಾರದಲ್ಲಿ ಕರ್ನಾಟಕದ ಪೊಲೀಸ್ ಅಧಿಕಾರಿಗಳು/ ಸಿಬ್ಬಂದಿಗೆ ಸಿಹಿಸುದ್ದಿಯನ್ನು ನೀಡಲಾಗಿದೆ. 20 ಲಕ್ಷ ರೂ. ಇದ್ದ ಗುಂಪು ವಿಮಾ ಮೊತ್ತವನ್ನು ಏರಿಕೆ ಮಾಡಿ ಆದೇಶವನ್ನು ಹೊರಡಿಸಲಾಗಿದೆ. ಸರ್ಕಾರದ ಆದೇಶ ದಿನಾಂಕ 7/10/20223 ಮತ್ತು ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಇವರ ಪತ್ರದ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಕೆ. ಎನ್. ವನಜ ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ಪೊಲೀಸ್ ವೆಚ್ಚ) ಆದೇಶವನ್ನು ಹೊರಡಿಸಿದ್ದಾರೆ. ಆದೇಶ ಪೊಲೀಸ್ ಇಲಾಖೆಯ ಫಾಲೋಯರ್ ಹುದ್ದೆಯಿಂದ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಹುದ್ದೆಯವರೆಗಿನ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಿಶೇಷ ಗುಂಪು ವಿಮಾ ಮೊತ್ತವನ್ನು ರೂ. 20 ಲಕ್ಷಗಳಿಂದ ರೂ. 50 ಲಕ್ಷಗಳಿಗೆ ಹೆಚ್ಚಿಸುವ ಕುರಿತು ಎಂಬ ವಿಷಯ ಒಳಗೊಂಡಿದೆ.

Police Department Offers And Staff Group Insurance Hiked

ಪ್ರಸ್ತಾವನೆ ಏನಿತ್ತು?: ಫಾಲೋಯರ್ ಹುದ್ದೆಯಿಂದ ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಯವರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು 92,841 ಅಧಿಕಾರಿ/ ಸಿಬ್ಬಂದಿ (ಫಾಲೋಯರ್, ಪಿಸಿ, ಹೆಚ್‌ಸಿ, ಎಎಸ್‌ಐ, ಪಿಎಸ್‌ಐ ಮತ್ತು ಪಿಐ)ಗಳಿಗೆ ಕರ್ತವ್ಯದ ಮೇಲಿರುವಾಗ 24X7 ಆಕಸ್ಮಿಕವಾಗಿ/ ಅಪಘಾತಕ್ಕೆ ಒಳಗಾಗಿ ಮೃತಪಟ್ಟಲ್ಲಿ, ಅವರ ಕುಟುಂಬದವರಿಗೆ ರೂ. 20 ಲಕ್ಷಗಳ ವಿಮೆ ಪಾವತಿಸುವ ಸಂಬಂಧ ಯುನೈಟೆಡ್ ಇಂಡಿಯಾ ಇನ್‌ಶೂರೆನ್ಸ್ ಕಂಪನಿ, ಲಿಮಿಟೆಡ್, ಬೆಂಗಳೂರು ಅವರಿಗೆ ಪ್ರಿಮಿಯಂ ಮೊತ್ತ ರೂ. 8,21,64,285 ಗಳನ್ನು (ಜಿ.ಎಸ್.ಟಿ) ಸೇವಾ ತೆರಿಗೆ ಸೇರಿ ಪಾವತಿಸಲು ಮಂಜೂರಾತಿ ನೀಡಿ ಆದೇಶಿಸಲಾಗಿದೆ ಎಂದು ಹೇಳಿದೆ.

ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಮಾನ್ಯ ಮುಖ್ಯಮಂತ್ರಿಗಳು ದಿನಾಂಕ 21-10-2023ರಂದು ನಡೆದ ಪೊಲೀಸ್‌ ಹುತಾತ್ಮರ ದಿನಾಚರಣೆ ಸಮಾರಂಭದಲ್ಲಿ, ಕರ್ತವ್ಯದ ಮೇಲಿದ್ದಾಗ ಹುತಾತ್ಮರಾಗುವ ಪೊಲೀಸ್ ಸಿಬ್ಬಂದಿಯ ಗುಂಪು ವಿಮಾ ಮೊತ್ತವನ್ನು ರೂ. 20 ಲಕ್ಷಗಳಿಂದ ರೂ. 50 ಲಕ್ಷಗಳಿಗೆ ಏರಿಕೆ ಮಾಡಲಾಗುವುದೆಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ, ಫಾಲೋಯರ್ ಹುದ್ದೆಯಿಂದ ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಯವರೆಗೆ ಒಟ್ಟು 92,841 ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ದಿನಾಂಕ 01-02-2024 ರಿಂದ 10-10-2024ರವರೆಗಿನ ಬಾಕಿ ಅವಧಿಗೆ (ಒಟ್ಟು 253 ದಿನಗಳು) ಪ್ರಸ್ತುತ ರೂ. 20 ಲಕ್ಷಗಳ ಜೊತೆಗೆ ಹೆಚ್ಚುವರಿಯಾಗಿ ರೂ. 30 ಲಕ್ಷಗಳನ್ನು ಪಾವತಿಸಲು ವಿಮಾ ಕಂಪನಿಯವರು ತಿಳಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಉಪಾಧೀಕ್ಷಕರು (ಡಿವೈಎಸ್ಪಿ) ಹುದ್ದೆಯಿಂದ ಡಿಜಿ ಮತ್ತು ಐಜಿಪಿ ಹುದ್ದೆಯವರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಒಟ್ಟು ಸಂಖ್ಯೆ 608 ಇದ್ದು, ಸದರಿ ಅಧಿಕಾರಿಗಳಿಗೆ ವಿಶೇಷ ಗುಂಪು ವಿಮಾ ಯೋಜನೆಯನ್ನು ಜಾರಿಗೊಳಿಸಲು ವಿಮಾ ಕಂಪನಿಯವರು ಈಗಾಗಲೇ ನೀಡಿರುವ ದರದಂತೆ ವಿಶೇಷ ಗುಂಪು ವಿಮಾ ಮೊತ್ತ ರೂ. 50 ಲಕ್ಷಗಳಿಗೆ ದಿನಾಂಕ 01-02-2024 ರಿಂದ 10-10-2024ರವರೆಗಿನ (ಒಟ್ಟು 253 ದಿನಗಳು) ಅವಧಿಗೆ ಪ್ರತಿ ಅಧಿಕಾರಿಯವರಿಗೆ ವಾರ್ಷಿಕ ಪ್ರಿಮಿಯಂ ಮೊತ್ತ (ರೂ.1290.996 + 18% ಜಿ.ಎಸ್.ಟಿ ಮೊತ್ತ ರೂ. 232.379 ಸೇರಿ ಒಟ್ಟು ರೂ.1523.38) ರೂ. 9,26,212 ಗಳಾಗುತ್ತದೆಂದು ತಿಳಿಸಲಾಗಿದೆ.

ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳು ಪ್ರಾಣದ ಹಂಗು ತೊರೆದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ, ಅಪರಾಧಗಳನ್ನು ತಡೆಗಟ್ಟುವಲ್ಲಿ, ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ಸಂರಕ್ಷಿಸುವಲ್ಲಿ, ಸಂಚಾರ ಸುಧಾರಣೆ ಮಾಡುವಲ್ಲಿ, ಹಗಲಿರುಳು ಅವಿರತವಾಗಿ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವುದರಿಂದ ಹಾಗೂ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ/ ಅಧಿಕಾರಿಗಳ ಮತ್ತು ಅವರ ಕುಟುಂಬದವರ ಏಳಿಗೆಗಾಗಿ ಇಲಾಖೆಯು ಮೊದಲ ಆದ್ಯತೆಯನ್ನು ನೀಡಬೇಕಾಗಿರುವುದರಿಂದ ಸಿಬ್ಬಂದಿ/ ಅಧಿಕಾರಿಗಳ ಮತ್ತು ಅವರ ಕುಟುಂಬದವರ ಮನೋಸ್ಥೈರ್ಯವನ್ನು ಹೆಚ್ಚಿಸಿದಂತಾಗಿ, ಸಿಬ್ಬಂದಿ/ ಅಧಿಕಾರಿಗಳಿಂದ ಇಲಾಖೆಯು ಇನ್ನು ಹೆಚ್ಚಿನ ರೀತಿಯಲ್ಲಿ ಕರ್ತವ್ಯವನ್ನು ನಿರೀಕ್ಷಿಸಬಹುದಾಗಿರುತ್ತದೆಂದು ತಿಳಿಸಿರುತ್ತಾರೆ.

ಆದ್ದರಿಂದ, ಪೊಲೀಸ್ ಇಲಾಖೆಯ ಒಟ್ಟು 93,449 ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯದ ಮೇಲಿರುವಾಗ ಆಕಸ್ಮಿಕ/ ಅಪಘಾತಕ್ಕೆ ಒಳಗಾಗಿ ಮೃತಪಟ್ಟಲ್ಲಿ, ಇವರುಗಳ ಕುಟುಂಬದವರಿಗೆ ವಿಶೇಷ ಗುಂಪು ವಿಮಾ ಮೊತ್ತ ರೂ. 50 ಲಕ್ಷಗಳನ್ನು ಪಾವತಿಸುವ ಸಲುವಾಗಿ ದಿನಾಂಕ 01-02-2024 ರಿಂದ 10-10-2024ರ ಅವಧಿಗೆ ವಿಶೇಷ ಗುಂಪು ವಿಮಾ ಯೋಜನೆಯನ್ನು ಒದಗಿಸಲು, ಅಂದಾಜು ಮೊತ್ತ (ರೂ. 8,52,00,371 + 9,26,212) ರೂ. 8,61,26,583ಗಳಿಗೆ ಸರ್ಕಾರದ ಆದೇಶವನ್ನು ಹೊರಡಿಸುವಂತೆ ಹಾಗೂ ಲೆಕ್ಕ ಶೀರ್ಷಿಕೆ ಸಾಮಾನ್ಯ ವೆಚ್ಚಗಳಡಿಯಲ್ಲಿ ಅನುದಾನವನ್ನು ಭರಿಸಲು ಅನುದಾನವನ್ನು ಸಹ ಬಿಡುಗಡೆಗೊಳಿಸುವಂತೆ ಕೋರಿರುತ್ತಾರೆ.

ಸರ್ಕಾರದ ಆದೇಶ: ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆಯ ಫಾಲೋಯರ್ ಹುದ್ದೆಯಿಂದ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಹುದ್ದೆಯವರೆಗೆ ಒಟ್ಟು ಸಂಖ್ಯಾ ಬಲ 93,449 ಅಧಿಕಾರಿ/ ಸಿಬ್ಬಂದಿಗಳಿಗೆ ವಿಶೇಷ ಗುಂಪು ವಿಮಾ ಮೊತ್ತವನ್ನು ರೂ.20 ಲಕ್ಷಗಳಿಂದ ರೂ. 50 ಲಕ್ಷಗಳಿಗೆ ಪ್ರಸಕ್ತ ಚಾಲ್ತಿಯಲ್ಲಿರುವ ವಿಮಾ ಅವಧಿ ಮುಕ್ತಾಯದ ನಂತರದ ದಿನಾಂಕದಿಂದ ಜಾರಿಗೆ ಬರುವಂತೆ ಹೆಚ್ಚಿಸಿ ಆದೇಶಿಸಿದೆ.

ಈ ಯೋಜನೆಯನ್ನು ವಿಮಾ ಕಂಪನಿಗೆ ವಹಿಸದೇ ಆಕಸ್ಮಿಕ/ ಅಪಘಾತದಲ್ಲಿ ಮೃತಪಟ್ಟ ಕರ್ತವ್ಯನಿರತ ಪೊಲೀಸ್ ಇಲಾಖೆಯ ಉದ್ಯೋಗಿಗಳ ಕುಟುಂಬಗಳಿಗೆ ನೀಡುವ ವಿಶೇಷ ಗುಂಪು ವಿಮಾ ಮೊತ್ತವನ್ನು ನೇರವಾಗಿ ಇಲಾಖೆಯ ಸಂಬಂಧಪಟ್ಟ ಲೆಕ್ಕ ಶೀರ್ಷಿಕೆಯಡಿ ಪಾವತಿ ಮಾಡಲು ಸೂಚಿಸಿದೆ ಎಂದು ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+