ಪ್ರಧಾನಿ ಮೋದಿ ಅವರಿಂದ ಕಾವೇರಿ ವಿವಾದ ಅಂತ್ಯ ಸಾಧ್ಯ : ದೇವೇಗೌಡ

Posted By:
Subscribe to Oneindia Kannada

ಬೆಂಗಳೂರು, ಸೆ. 20: ಪ್ರಧಾನಿ ನರೇಂದ್ರ ಮೋದಿ ಅವರು ಮನಸ್ಸು ಮಾಡಿದರೆ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಐತಿಹಾಸಿಕ ಕಾವೇರಿ ವಿವಾದವನ್ನು ಅಂತ್ಯಗೊಳಿಸಬಹುದು. ಆದರೆ, ಇಚ್ಛಾಶಕ್ತಿ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.

ಕಾವೇರಿ ವಿವಾದ ಪ್ರಕರಣ ಸುಪ್ರೀಂಕೋರ್ಟಿನಲ್ಲಿದೆ ಹೀಗಾಗಿ ಪ್ರಧಾನಿ ಮಧ್ಯ ಪ್ರವೇಶ ಸಾಧ್ಯವಿಲ್ಲ ಎಂಬ ಬಿಜೆಪಿ ಅವರ ವಾದ ಒಪ್ಪಲು ಸಾಧ್ಯವಿಲ್ಲ. ನಾನು ಪ್ರಧಾನಿಯಾಗಿದ್ದಾಗ ಮೂನಾಲ್ಕು ನದಿ ಯೋಜನೆಯ ವಿವಾದಕ್ಕೆ ಮಾತುಕತೆ ಮೂಲಕ ತಾರ್ಕಿಕ ಅಂತ್ಯ ಹುಡುಕಿದ್ದೆ. ಇದೇ ಕೆಲಸವನ್ನು ಮೋದಿ ಅವರು ಮಾಡಬಹುದು ಎಂದು ದೇವೇಗೌಡರು ಎಕಾನಾಮಿಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಸುಪ್ರೀಂಕೋರ್ಟಿನ ಪ್ರಾಧಿಕಾರ ತೀರ್ಪನ್ನು ಪ್ರಶ್ನಿಸಿ ವಿಶೇಷ ರಜೆ ದಿನದ ಅರ್ಜಿಯನ್ನು ಕರ್ನಾಟಕ ಸರ್ಕಾರ ಹಾಕಿದೆ. ಇದಕ್ಕೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿಲ್ಲ ಎಂದರು.

PM Narendra Modi can solve Cauvery Dispute says HD Deve Gowda

1996ರಲ್ಲಿ ನಾನು ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಸಭೆ ಕರೆದಿದ್ದೆ. ನರ್ಮದಾ ನದಿ ಅಣೆಕಟ್ಟಿನ ಎತ್ತರ ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರ ಪ್ರತಿಭಟನೆ ಆರಂಭವಾಗಿತ್ತು. ಈ ಸಂದರ್ಭದಲ್ಲಿ ನಾನು ಪರಿಸರ ವಾದಿ ಸುಂದರ್ ಲಾಲ್ ಬಹುಗಣ ಸೇರಿದಂತೆ ಅನೇಕ ಪರಿಸರವಾದಿಗಳನ್ನು ಖುದ್ದು ಭೇಟಿಯಾಗಿ ಮಾತುಕತೆ ನಡೆಸಿದೆ.

ಉತ್ತರಾಖಂಡ್ ನ ತೆಹ್ರಿ ಅಣೆಕಟ್ಟಿನ ಪ್ರದೇಶದಲ್ಲಿರುವ ಗ್ರಾಮಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿದೆ. ಅಣೆಕಟ್ಟು ನಿರ್ಮಾಣದಿಂದ ಉಂಟಾಗುವ ಹಾನಿಯನ್ನು ಗುರುತಿಸಿ ಭೂಕುಸಿತವನ್ನು ತಡೆಗಟ್ಟಲು ಬೇಕಾದ ಕ್ರಮವನ್ನು ಕೈಗೊಂಡೆ. ನರ್ಮದಾ ವಿವಾದ ಆ ಸಂದರ್ಭಕ್ಕೆ ಮಾತುಕತೆ ಮೂಲಕ ಬಗೆಹರಿದಿತ್ತು. ಮೋದಿ ಅವರು ಈ ರೀತಿ ಕಾವೇರಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಏಕೆ ಮುಂದಾಗುತ್ತಿಲ್ಲ ಎಂದು ದೇವೇಗೌಡ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರ ಪತ್ರಕ್ಕೆ ಪಿಎಂ ಮೋದಿಯಾಗಲಿ, ತಮಿಳುನಾಡು ಸಿಎಂ ಜಯಲಲಿತಾ ಆಗಲಿ ಏಕೆ ಸ್ಪಂದಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ಜಯಲಲಿತಾ ಅವರ ನಿಲುವು, ಧೋರಣೆ ಎಂದಿಗೂ ಬದಲಾಗುವುದಿಲ್ಲ. ತಮಿಳುನಾಡಿನ ಹೆಚ್ಚಿನ ರಾಜಕೀಯ ಶಕ್ತಿ ಇರುವುದರಿಂದ ಸಹಜವಾಗಿ ಕೇಂದ್ರ್ ಸರ್ಕಾರ ರಾಜಕೀಯ ತಂತ್ರ ಬಳಸುತ್ತದೆ. ಸಂಸದರು ಈ ಬಗ್ಗೆ ಮಾತುಕತೆಗೆ ಮುಂದಾಗಬೇಕು ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The union government has got notices to respond to the special leave petition that Karnataka has filed against the tribunal award in the Supreme Court. Of course, they have a role.PM Narendra Modi can solve Cauvery Dispute says HD Deve Gowda in an interview with ET.
Please Wait while comments are loading...