ಕೊಡಗು ರೆಜಿಮೆಂಟ್ ಮರುಸ್ಥಾಪನೆಯ ಗುರಿ: ಚಂದ್ರಮೌಳಿ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಕೊಡಗು, ಏಪ್ರಿಲ್ 16: ಕೊಡಗು ಕಾವೇರಿ ನದಿಯ ಉಗಮ ಸ್ಥಾನ. ಈ ನದಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಣ ವಿವಾದದ ಮುಖ್ಯ ಕೇಂದ್ರಬಿಂದು ಕೂಡ. ಕಾವೇರಿ ನದಿಪಾತ್ರದ ಬಹುತೇಕ ಕಡೆ ಇದು ಚುನಾವಣೆಯ ವಿಷಯವೂ ಹೌದು. ಕೊಡಗಿನ ರಾಜಕೀಯ ಈ ವಿಚಾರವಾಗಿ ಸ್ಪಷ್ಟ ನಿಲುವು ಹೊಂದಿದೆ.

ವಿಧಾನಸಭೆ ಚುನಾವಣೆಯ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಭಾನುವಾರ ಬಿಡುಗಡೆಗೊಳಿಸಿದೆ. ಮಾಜಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್‌.ಎಸ್. ಚಂದ್ರಮೌಳಿ ಮಡಿಕೇರಿಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇದೇ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಗೆದ್ದಿರುವ ಬಿಜೆಪಿಯ ಅಪ್ಪಚ್ಚು ರಂಜನ್ ವಿರುದ್ಧ ಅವರು ಸ್ಪರ್ಧಿಸಲಿದ್ದಾರೆ.

ಕೊಡಗಿನಲ್ಲಿ 'ಕಮಲ' ಕತ್ತರಿಸಲು 'ಕೈ' ಹವಣಿಕೆ, ಏನಿದರ ಹಿಂದಿನ ಎಣಿಕೆ?

ತಾವು ಪರಿಹರಿಸಬೇಕಾದ ಅನೇಕ ಸಮಸ್ಯೆಗಳು ಕ್ಷೇತ್ರದಲ್ಲಿವೆ ಎನ್ನುತ್ತಾರೆ ಚಂದ್ರಮೌಳಿ. ಒನ್ ಇಂಡಿಯಾದೊಂದಿಗೆ ಮಾತನಾಡಿದ ಅವರು, ವಕೀಲಿಕೆಯಿಂದ ರಾಜಕೀಯ ನಾಯಕತ್ವದೆಡೆಗಿನ ತಮ್ಮ ಪಯಣದ ವಿವರವನ್ನು ಹಂಚಿಕೊಂಡಿದ್ದಾರೆ.

Pleader to leader, Madikeri Cong candidate Chandramouli assures return of Kodagu regiment

ಕೊಡಗು ರೆಜಿಮೆಂಟ್ಅನ್ನು ಮರಳಿ ತರುವುದು ತಮ್ಮ ಮೊದಲ ಆದ್ಯತೆಗಳಲ್ಲಿ ಒಂದು ಎಂದು ಅವರು ಒತ್ತಿ ಹೇಳುತ್ತಾರೆ.

ಮಡಿಕೇರಿಯಿಂದ ಸ್ಪರ್ಧಿಸಲು ನಿಮ್ಮನ್ನು ಉತ್ತೇಜಿಸಿದ್ದು ಯಾವುದು?
ಇದು ನನ್ನ ಜನ್ಮಸ್ಥಳ. ನನಗೆ ಇಗುತಪ್ಪ ಮತ್ತು ಕಾವೇರಿ ದೇವತೆಯ ಆಶೀರ್ವಾದವಿದೆ. ಇದು ನನ್ನ ಕ್ಷೇತ್ರವಾಗಿರುವುದರಿಂದ ನನ್ನ ಜನರಿಗಾಗಿ ಕೆಲಸ ಮಾಡಬೇಕು. ಇಲ್ಲಿಯೇ ಹುಟ್ಟಿ ಬೆಳೆದ ನನಗೆ ಇಲ್ಲಿನ ಜನರ ನೋವಿನ ಅರಿವಿದೆ. ವಕೀಲನಾಗಿ ನನ್ನ ಸುದೀರ್ಘ ಅವಧಿಯಲ್ಲಿ ವೃತ್ತಿ ಬದುಕಿನ ಬಗ್ಗೆ ತೃಪ್ತಿಯಿದೆ. ಈಗ ನಾನು ಜನರ ಕಣ್ಣೀರು ಒರೆಸಲು ನಿಂತಿದ್ದೇನೆ.

ಕ್ಷೇತ್ರ ಪರಿಚಯ: ಮಡಿಕೇರಿಯಲ್ಲಿ ಒಡೆಯುವುದೇ ಬಿಜೆಪಿ ಭದ್ರಕೋಟೆ?

ಕೊಡಗಿನ ಯಾವ ಸಮಸ್ಯೆಗಳನ್ನು ನೀವು ಮುಖ್ಯವಾಗಿ ಪರಿಹರಿಸಲು ಗಮನ ನೀಡುತ್ತೀರಿ?
ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆದಾಯ, ಅಕ್ರಮ-ಸಕ್ರಮ, ಕಾವೇರಿ ಸಮಸ್ಯೆ, ಕಾಳುಮೆಣಸಿಗೆ ಸಂಬಂಧಿಸಿದ ಸಮಸ್ಯೆ ಅವುಗಳಲ್ಲಿ ಸೇರಿವೆ. ನನ್ನ ಮನೆಯನ್ನು ಶುದ್ಧಗೊಳಿಸುವ ಸಮಯವಿದು.

ಮಡಿಕೇರಿಯಲ್ಲಿ ಅತಿ ಪ್ರಬಲವಾಗಿರುವ ಬಿಜೆಪಿ ಎದುರು ನಿಂತಿದ್ದೀರಿ. ನಿಮಗೆ ಇರುವ ಅವಕಾಶಗಳೇನು?
ಜಿಲ್ಲೆಯಲ್ಲಿನ ಶಾಸಕರ ವಿರೋಧಿ ಅಭಿಪ್ರಾಯದ ಲಾಭವನ್ನು ಪಡೆದುಕೊಳ್ಳಲಿದ್ದೇನೆ. ಜನರು ಅವರ ಅಭ್ಯರ್ಥಿಗಳನ್ನು ಗಮನಿಸುತ್ತಿದ್ದಾರೆ. ಅವರು ವಿದ್ಯಾವಂತನಾಗಿರುವ ಹೊಸ ಮುಖ ಬಯಸಿದ್ದಾರೆ.

ಕೊಡಗಿಗೆ ನಿಮ್ಮ ಮೊದಲ ಆದ್ಯತೆ ಏನು?
ಸೇನೆಯಲ್ಲಿ ಕೊಡಗು ರೆಜಿಮೆಂಟ್‌ಅನ್ನು ಮತ್ತೆ ಸ್ಥಾಪಿಸಲು ನಾನು ಬಯಸುತ್ತೇನೆ. ರಾಷ್ಟ್ರೀಯ ಸಮಗ್ರತೆ ಮತ್ತು ಸ್ಥಳೀಯ ಸಮಸ್ಯೆಗಳು ನನ್ನ ಪ್ರಚಾರದ ಮುಖ್ಯ ಅಂಶಗಳು. ಸೇನೆ, ಪೊಲೀಸ್ ಮತ್ತು ಹಾಕಿ- ಈ ಮೂರು ಕ್ಷೇತ್ರಗಳಲ್ಲಿ ಕೊಡಗಿನ ಜನರನ್ನು ಪ್ರೇರೇಪಿಸಲು ನಾನು ಲಕ್ಷ್ಯ ವಹಿಸುತ್ತೇನೆ.

ಟಿಪ್ಪು ಸುಲ್ತಾನ್ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮೇಲೆ ಕೋಪವಿದೆ. ಅದನ್ನು ಹೇಗೆ ನಿಭಾಯಿಸುವಿರಿ?
ಟಿಪ್ಪು ವಿವಾದ ಬರುತ್ತದೆ ಹೋಗುತ್ತದೆ. ಅದಕ್ಕಿಂತಲೂ ನಾವು ಗಮನ ಹರಿಸಬೇಕಾದ ಇನ್ನೂ ದೊಡ್ಡ ಸಮಸ್ಯೆಗಳಿವೆ. ನಾನು ಮೊದಲೇ ಹೇಳಿದಂತೆ ನನ್ನ ಗುರಿ ರಾಷ್ಟ್ರೀಯ ಸಮಗ್ರತೆ ಮತ್ತು ಸ್ಥಳೀಯ ಸಮಸ್ಯೆಗಳ ಮೇಲೆ ಇರುತ್ತದೆ.

ಲಿಂಗಾಯತ ಧರ್ಮದ ವಿವಾದದ ಕೊಡಗಿನಲ್ಲಿ ಯಾವ ರೀತಿ ಪ್ರಭಾವ ಬೀರಲಿದೆ?
ಕೊಡಗಿನಲ್ಲಿ ಜಾತಿ ಪ್ರಾಮುಖ್ಯ ಪಡೆದಿಲ್ಲ. ನಾನೂ ಒಬ್ಬ ಲಿಂಗಾಯತ. ಈ ವಿವಾದ ಕೊಡಗಿನಲ್ಲಿ ಯಾವ ಪರಿಣಾಮವನ್ನೂ ಬೀರುವುದಿಲ್ಲ.

ರೈಲ್ವೆ ಮಾರ್ಗ ಕೊಡಗಿನಲ್ಲಿ ಮತ್ತೊಂದು ಸಮಸ್ಯೆಯಾಗಿದೆ. ಹೇಗೆ ಎದುರಿಸುವಿರಿ?
ರೈಲು ಮಾರ್ಗದ ಅವಶ್ಯಕತೆ ನಮಗಿದೆ. ಆದರೆ, ಅದರಿಂದ ಜಿಲ್ಲೆಯ ಹಸಿರ ಸಿರಿಗೆ ಯಾವುದೇ ಹಾನಿಯಾಗಬಾರದು. ಕುಶಾಲನಗರಕ್ಕೆ ರೈಲು ಸಂಪರ್ಕದ ಅಗತ್ಯವಿದೆ. ಆದರೆ, ಅದು ಅರಣ್ಯ ಪ್ರದೇಶಕ್ಕೆ ಹಾನಿಯುಂಟುಮಾಡಲಿದೆ ಎಂಬ ಕಾರಣಕ್ಕೆ ಅದನ್ನು ನಿಲ್ಲಿಸಬೇಕಾಗಿದೆ. ಆಲೂರು-ಕೋಡ್ಲಿಪೇಟೆ-ಕುಶಾಲನಗರ ಮಾರ್ಗ ನಿರ್ಮಿಸುವುದು ಸೂಕ್ತ ಎನ್ನುವುದು ನನ್ನ ಅಭಿಪ್ರಾಯ. ಇದರಿಂದ ಅರಣ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಮತ್ತು ಮಂಗಳೂರಿಗೂ ಸಂಪರ್ಕ ಸಾಧಿಸುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
H S Chandramouli, the former state public prosecutor of Karnataka will contest on a Madikeri ticket from congress. One of my top priorities would be to bring back the Kodagu regiment he said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ