ಬಿಗ್ ಆಪರೇಷನ್; ಪದ್ಮನಾಭ ನಗರದ 20ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್ ಸೇರ್ಪಡೆ! ಯಾರ್ಯಾರು ಇಲ್ಲಿದ್ದಾರೆ ನೋಡಿ?
ಬೆಂಗಳೂರು, ಸೆಪ್ಟೆಂಬರ್ 15: 2024 ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಬಿಗ್ ಆಪರೇಷನ್ ನಡೆಸಿದ್ದು, ಮಾಜಿ ಸಚಿವ ಆರ್ ಅಶೋಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರು ಹಲವು ನಾಯಕರಿಗೆ ಗಾಳ ಹಾಕಿದ್ದು, 20 ಕ್ಕೂ ಹೆಚ್ಚು ನಾಯಕರು ಶುಕ್ರವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಹೌದು, ಲೋಕಸಮರಕ್ಕೆ ಭರ್ಜರಿ ತಯಾರಿ ನಡೆಸಿದ್ದು, ಸದ್ದಿಲ್ಲದೇ ಬೆಂಗಳೂರು ಭಾಗದ ಬಿಜೆಪಿ ನಾಯಕರಿಗೆ ಗಾಳ ಹಾಕಿದ್ದಾರೆ. ಮಾಜಿ ಸಚಿವ, ರಾಜ್ಯ ಬಿಜೆಪಿ ಹಿರಿಯ ನಾಯಕ ಆರ್ ಅಶೋಕ್ ಅವರ ಕ್ಷೇತ್ರದ ಹಲವು ನಾಯಕರಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗಾಳಹಾಕಿದ್ದು, ಮಾಜಿ ಸಚಿವ ಆರ್. ಅಶೋಕ್ ಅವರ 20 ಕ್ಕೂ ಹೆಚ್ಚು ಬೆಂಬಲಿಗರು ಕಾಂಗ್ರೆಸ್ ಪಕ್ಷ ಸೇರ್ಪಡೆ ಮಾಡಿಕೊಂಡಿದ್ದಾರೆ.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರು, ಮಾಜಿ ಉಪಮೇಯರ್, ಮಾಜಿ ಕಾರ್ಪೊರೇಟರ್‌ಗಳು ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್, ಸಚಿವ ರಾಮಲಿಂಗಾರೆಡ್ಡಿ, ಮಾಜಿ ಶಾಸಕಿ ಸೌಮ್ಯರೆಡ್ಡಿ ಸೇರಿದಂತೆ ಕಾಂಗ್ರೆಸ್‌ನ ಇತರ ಮುಖಂಡರೊಂದಿಗೆ 20ಕ್ಕೂ ಅನೇಕ ಮುಖಂಡರು ಬಿಜೆಪಿ ಮತ್ತು ಜೆಡಿಎಸ್ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾದರು.
ಇನ್ನೂ ಕಾಂಗ್ರೆಸ್ ಸೇರ್ಪಡೆಯ ಬಳಿಕ ಕಬ್ಬಡಿ ಬಾಬು ಮಾತನಾಡಿ, ನಾನು ಎಂಎಲ್ಸಿ ಮಾಡ್ತೀನಿ ಅಂದ್ರು ನನ್ನ ಹಣೆಬರಹ ಆಗ ಬರಕ್ಕೆ ಆಗಲಿಲ್ಲ. ಡಿ ಕೆ ಶಿವಕುಮಾರ್ ಮನೆಗೆ ಹೋದಾಗ ಏನೋ ಮಾತಾಡಕ್ಕೆ ಹೋಗಿ ಏನೋ ಆಯ್ತು. ರಾಜಕಾರಣದಲ್ಲಿ ಸಾಕಷ್ಟು ಅನುಭವ ಇದೆ, ನಮ್ಮನೆಲ್ಲ ಗುರುತಿಸಿ ಕರೆತಂದಿದ್ದಾರೆ. ನನ್ನ ಮಗ ಪವನ್ ಸಹಾ ಸೇರಿಕೊಂಡಿದ್ದಾನೆ, ಇನ್ನು ಮುಂದಕ್ಕೆ ಬಹಳಷ್ಟು ಇದೆ. ಇನ್ನೂ ತುಂಬಾ ಜನ ಸೇರ್ಪಡೆಗೊಳ್ಳುತ್ತಿದ್ದೆ ಎಂದರು.
ಸಂಸದರಾದ ಡಿ ಕೆ ಸುರೇಶ್ ಅವರು ಬಂದು ಪಕ್ಷಕ್ಕೆ ಆಹ್ವಾನಿಸಿದ್ರು, ಕಾಂಗ್ರೆಸ್ ಪಕ್ಷವನ್ನು ನಾವು ಬಲಪಡಿಸುತ್ತಿದ್ದೇನೆ. ಇದು ನನ್ನ ಕೊನೆಯ ಜೀವನ ಡಿಕೆ ಶಿವಕುಮಾರ್ ಅವರ ಜೊತೆ ಇರ್ತೇನೆ. ನಾನು ಅಂತರಾಷ್ಟ್ರೀಯ ಮಟ್ಟದಲ್ಲಿ ಗೋಲ್ಡ್ ಮೆಡಲ್ ತಂದಿದ್ದೇನೆ. ಕಾಂಗ್ರೆಸ್ ನೋಡಿ ದೇಶದಲ್ಲಿ ಗ್ಯಾರಂಟಿ ಯೋಜನೆ ತಂದಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ದೊಡ್ಡಮಟ್ಟದಲ್ಲಿ ಸೇರ್ಪಡೆ ಮಾಡುತ್ತೇವೆ
ರಾಜಕೀಯ ಬೇಡ ಎಂದುಕೊಂಡಿದ್ದೆ ಆದರೆ ಮತ್ತೆ ನಮಗೆ ರಾಜಕೀಯ ಜೀವನ ಕಲ್ಪಿಸಿಕೊಟ್ಟಿದ್ದಾರೆ, ಲೋಕಸಭಾ ಬಹುಮತದಿಂದ ಡಿಕೆ ಸುರೇಶ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದರು.
ಪಕ್ಷ ಸೇರ್ಪಡೆ ಆದವರು ಯಾರ್ಯಾರು..?
ಎಲ್. ಶ್ರೀನಿವಾಸ್, ಮಾಜಿ ಉಪ ಮಹಾಪೌರರು, ಪದ್ಮನಾಭನಗರ
ಪ್ರಸಾದ್ ಬಾಬು, ಜೆಡಿಎಸ್ ಮುಖಂಡ
ಆರಪ್ಪ, ಮಾಜಿ ತಾ.ಪಂ.ಸದಸ್ಯ
ಶೋಭಾ ಆಂಜಿನಪ್ಪ, ಮಾಜಿ ಕಾರ್ಪೊರೇಟರ್
ಹೆಚ್.ನಾರಾಯಣ್, ಮಾಜಿ ಕಾರ್ಪೊರೇಟರ್
ಹೆಚ್. ಸುರೇಶ್, ಮಾಜಿ ಕಾರ್ಪೊರೇಟರ್, ಹಿಂದುಳಿದ ವರ್ಗಗಳ ನಾಯಕ
ವೆಂಕಟಸ್ವಾಮಿ ನಾಯ್ಡು, ಮಾಜಿ ಕಾರ್ಪೊರೇಟರ್
ಸಿ. ಎಲ್.ಗೋವಿಂದ ರಾಜು, ಮಾಜಿ ಕಾರ್ಪೊರೇಟರ್
ರಂಗರಾಮೇಗೌಡ್ರು, ಮಾಜಿ ಅಧ್ಯಕ್ಷರು, ಪದ್ಮನಾಭನಗರ ಮಂಡಲ
ಲಕ್ಷ್ಮಿ ಸುರೇಶ್, ಮಾಜಿ ಜಿ.ಪಂ. ಸದಸ್ಯರು
ಪವನ್, ಬಿಜೆಪಿ ಮುಖಂಡರು
ಸುಪ್ರಿಯಾ ಶೇಖರ್, ಮಾಜಿ ಕಾರ್ಪೊರೇಟರ್
ಬಾಲಕೃಷ್ಣ, ಮಾಜಿ ಕಾರ್ಪೊರೇಟರ್
ಸುಗುಣ ಬಾಲಕೃಷ್ಣ, ಮಾಜಿ ಕಾರ್ಪೊರೇಟರ್
ಯು.ಕೃಷ್ಣಮೂರ್ತಿ, ಮಾಜಿ ಕಾರ್ಪೊರೇಟರ್
ನರಸಿಂಹ ನಾಯಕ್, ಮಾಜಿ ಕಾರ್ಪೊರೇಟರ್.
ಅಕ್ಬರ್ ಖಾನ್, ಜೆಡಿಎಸ್ ಮುಖಂಡ
ರವಿಕಿರಣ್, ಸೀರಿಯಲ್ ನಟ












Click it and Unblock the Notifications