• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿಯಲ್ಲಿ ಆರಕ್ಕೇರಿದ್ದ ಸಾಮ್ರಾಟ್ ಅಶೋಕ್ ಮೂರಕ್ಕೆ ಇಳಿಯುತ್ತಿದ್ದಾರಾ?

|
   ಆರ್ ಅಶೋಕ್, ಅತ್ಯಂತ ಶಕ್ತಿಶಾಲಿ ನಾಯಕ ಬೆಂಗಳೂರಿನಲ್ಲಿ ತಮ್ಮ ಪವರ್ ಕಳೆದುಕೊಳ್ಳಲಿದ್ದಾರಾ?

   ಅತಿಹೆಚ್ಚು ಸ್ಥಾನವನ್ನು ಅಸೆಂಬ್ಲಿ ಮತ್ತು ಬಿಬಿಎಂಪಿಯಲ್ಲಿ ಹೊಂದಿದ್ದರೂ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೇರಲು ಆಗದೇ ಇದ್ದದ್ದು ಎಲ್ಲರಿಗೂ ಗೊತ್ತೇ ಇದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎನ್ನುವ ಕಾಂಗ್ರೆಸ್ ಲೆಕ್ಕಾಚಾರ, ಕರ್ನಾಟಕದಲ್ಲಿ ಸದ್ಯದ ಮಟ್ಟಿಗೆ ವರ್ಕೌಟ್ ಆಗಿದೆ.

   ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

   ತಮ್ಮ ಅತ್ಯುತ್ತಮ ಸಂಘಟನಾ ಶಕ್ತಿಯಿಂದ ಬಿಜೆಪಿಯಲ್ಲಿ ಅಲ್ಪ ಅವಧಿಯಲ್ಲಿ 'ಸಾಮ್ರಾಟ್' ಎಂದೇ ಕರೆಯಲ್ಪಡುವ ಅಶೋಕ್, ಉಪಮುಖ್ಯಮಂತ್ರಿ ಸ್ಥಾನದವರೆಗೂ ಏರುವಲ್ಲಿ ಯಶಸ್ವಿಯಾದವರು. ಬೆಂಗಳೂರು ನಗರದ ರಾಜಕೀಯದಲ್ಲಿ ಅತ್ಯಂತ ಪ್ರಮುಖ ನಾಯಕನಾಗಿ ಹೊರಹೊಮ್ಮಿದ್ದ ಅಶೋಕ್, ತಮ್ಮ ಹಿಂದಿನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದ್ದಾರಾ?

   ಕಳೆದ ಬಿಬಿಎಂಪಿ ಚುನಾವಣೆಯ ರಾಜಕೀಯದತ್ತ ಹೋಗುವುದಾದರೆ, ಅತಿಹೆಚ್ಚು ಸ್ಥಾನವನ್ನು ಗೆದಿದ್ದ ಬಿಜೆಪಿ ಮುಖಂಡರು ಅಧಿಕಾರ ನಮ್ಮದೇ ಎಂದು ಬೀಗುತ್ತಿದ್ದರು. ಎಲ್ಲೋ ಇದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬೆಂಗಳೂರಿಗೆ ಬಂದು ವಿಜಯದ ಸಂಕೇತವನ್ನು ತೋರಿಸಿಬಿಟ್ಟು ಹೋದರು. ಪ್ರಧಾನಿಗಳೂ ಬೆಂಗಳೂರಿನ ಜನತೆಗೆ ಧನ್ಯವಾದ ಹೇಳಿದ್ದರು.

   ಒಕ್ಕಲಿಗ ಸಮುದಾಯದ ಪ್ರಬಲ ವ್ಯಕ್ತಿ ನಾನೇ ಎನ್ನುವ ಓವರ್ ಕಾನ್ಫಿಡೆನ್ಸ್ ನಲ್ಲಿ ಇದ್ದಂತ್ತಿದ್ದ ಅಶೋಕ್ ಗೆ, ಪದ್ಮನಾಭ ನಗರದ ರಾಜಕೀಯ ಅರಿವಾಗುವಷ್ಟರಲ್ಲಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು, ಕಮಲಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬಂದಿರಲಿಲ್ಲ.

   ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

   ಕಾಂಗ್ರೆಸ್ ಗೂಂಡಾಗಿರಿ ಮೂಲಕ ಮೇಯರ್ ಸ್ಥಾನ ಹಿಡಿದಿದೆ: ಆರ್.ಅಶೋಕ್

   ಬಿಜೆಪಿ ವರಿಷ್ಠರಿಗೆ ಅಶೋಕ್ ಮೇಲೆ ಭ್ರಮನಿರಸನವಾಗಲು ಆರಂಭವಾದ ರಾಜಕೀಯ ವಿದ್ಯಮಾನವೇ ಇದು. ಇದಾದ ನಂತರ, ಪರಿವರ್ತನಾ ರ‍್ಯಾಲಿಯ ಉದ್ಘಾಟನಾ ಸಮಾವೇಶ ಯಾವಾಗ ಫ್ಲಾಪ್ ಶೋ ಆಯಿತೋ, ಬಿಜೆಪಿ ವರಿಷ್ಠರ ಜೊತೆ ಯಡಿಯೂರಪ್ಪನವರ ಬೇಸರಕ್ಕೂ ಇದು ಕಾರಣವಾಯಿತು. ಸಾಮ್ರಾಟ್ ಅಶೋಕ್ ಮೂರಕ್ಕೆ ಇಳಿಯುತ್ತಿದ್ದಾರಾ?, ಮುಂದೆ ಓದಿ

   ಮೋದಿ, ಶಾ ಅವರಿಂದ ಶಹಬ್ಬಾಸ್ ಅನಿಸಿಕೊಂಡಿದ್ದ, ಇದೇ ಅಶೋಕ್

   ಮೋದಿ, ಶಾ ಅವರಿಂದ ಶಹಬ್ಬಾಸ್ ಅನಿಸಿಕೊಂಡಿದ್ದ, ಇದೇ ಅಶೋಕ್

   ಬೆಂಗಳೂರಿನಲ್ಲಿ ಲೆಕ್ಕವಿಲ್ಲದಷ್ಟು ನಡೆದ ರ‍್ಯಾಲಿಯ ಜವಾಬ್ದಾರಿಯನ್ನು ತೆಗೆದುಕೊಂಡು, ಲಕ್ಷ ಲಕ್ಷ ಜನ ಸೇರಿಸುವಲ್ಲಿ ಯಶಸ್ವಿಯಾಗಿ, ಮೋದಿ, ಶಾ ಅವರಿಂದ ಶಹಬ್ಬಾಸ್ ಗಿರಿ ಪಡೆದುಕೊಂಡಿದ್ದ, ಇದೇ ಅಶೋಕ್ ಈಗ ಪಕ್ಷದಲ್ಲಿ ತಮ್ಮ ಹಿಂದಿನ ಶಕ್ತಿಯನ್ನು ಪ್ರದರ್ಶಿಸಿ, ಬ್ಯಾಕ್ ಟು ಓಲ್ಡನ್ ಡೇಸ್ ಬರಲು ಹರಸಾಹಸ ಪಡುತ್ತಿದ್ದಾರೆ ಎನ್ನುವ ಮಾತು, ಬಿಜೆಪಿ ಪಡಶಾಲೆಯಲ್ಲಿ ಕೇಳಿಬರುತ್ತಿದೆ.

   ಆರ್‌.ಅಶೋಕ್‌ಗೆ ಮತ್ತೆ ನಿರಾಳ: ಹೈಕೋರ್ಟ್‌ನಿಂದ ತಡೆಯಾಜ್ಞೆ

   ರಾಜಕೀಯ ಹಿಡಿತ ಸಾಧಿಸಲು ಅತ್ಯಂತ ಆಯಕಟ್ಟಿನ ಜಾಗ

   ರಾಜಕೀಯ ಹಿಡಿತ ಸಾಧಿಸಲು ಅತ್ಯಂತ ಆಯಕಟ್ಟಿನ ಜಾಗ

   ರಾಜ್ಯದ ಮೂರೂ ಪಕ್ಷಗಳಿಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ತಮ್ಮ ರಾಜಕೀಯ ಹಿಡಿತ ಸಾಧಿಸಲು ಅತ್ಯಂತ ಆಯಕಟ್ಟಿನ ಜಾಗ. ಒಂದು ರಾಜಧಾನಿ ವ್ಯಾಪ್ತಿಯಲ್ಲಿ ಬರುವ 28 ವಿಧಾನಸಭಾ ಕ್ಷೇತ್ರಗಳು ಮತ್ತು ನಾಲ್ಕು ಲೋಕಸಭಾ ಸ್ಥಾನಗಳು. ಜೊತೆಗೆ, ರಾಜಕೀಯ ವಿದ್ಯಮಾನಗಳ ಕೇಂದ್ರ ಬಿಂದು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆ ಮಾಡಿದಷ್ಟು ಸ್ಥಾನವನ್ನು ಗೆಲ್ಲುವಲ್ಲಿ ವಿಫಲವಾಗಿದ್ದಕ್ಕೆ, ಬಿಜೆಪಿ ಪ್ರಮುಖರು ಕೈತೋರುತ್ತಿರುವುದು ಅಶೋಕ್ ಕಡೆಗೆ.

   ಎಚ್ಡಿಕೆ ದಂಗೆ ಮಾತು ನಕ್ಸಲರ ಹೇಳಿಕೆಯಂತಿದೆ: ಅಶೋಕ್ ವಾಗ್ದಾಳಿ

   ಬಿಜೆಪಿಯ ಕೆಲವು ಮುಖಂಡರ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್

   ಬಿಜೆಪಿಯ ಕೆಲವು ಮುಖಂಡರ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್

   ಬಿಜೆಪಿಯ ಕೆಲವು ಮುಖಂಡರ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ನಿಂದಾಗಿ ಬೆಂಗಳೂರಿನಲ್ಲಿ ಪಕ್ಷಕ್ಕೆ ಹಿನ್ನಡೆಯಾಗುತ್ತಿರುವುದನ್ನು ಕಾರ್ಯಕರ್ತರೇ ಬಹಿರಂಗವಾಗಿ ಹೇಳಿದ್ದಾರೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ, ಬ್ಯಾಟರಾಯನಪುರ, ಹೆಬ್ಬಾಳ, ದಾಸರಹಳ್ಳಿ, ವಿಜಯನಗರ ಕ್ಷೇತ್ರಗಳನ್ನು ಸರಿಯಾಗಿ ನಿಭಾಯಿಸಿದ್ದರೆ ನಿರಾಯಾಸವಾಗಿ ಗೆಲ್ಲಬಹುದಾಗಿತ್ತು ಎನ್ನುವ ಆಪಾದನೆಯೂ, ಅಶೋಕ್ ಹಿನ್ನಡೆಗೆ ಕಾರಣವಾಯಿತು.

   ದಿವಂಗತ ಬಿ ಎನ್ ವಿಜಯ್ ಕುಮಾರ್

   ದಿವಂಗತ ಬಿ ಎನ್ ವಿಜಯ್ ಕುಮಾರ್

   ಬೆಂಗಳೂರು ನಗರದ ಬಿಜೆಪಿ ಭದ್ರಕೋಟೆಯಲ್ಲಿ ಒಂದು ಎಂದೇ ಬಿಂಬಿತವಾಗಿದ್ದ ಜಯನಗರ ಕ್ಷೇತ್ರದಲ್ಲಿನ ಸೋಲು, ಅಶೋಕ್ ರಾಜಕೀಯ ಜೀವನದಲ್ಲಾದ ದೊಡ್ಡ ಹಿನ್ನಡೆ. ಯಾಕೆಂದರೆ, ಕ್ಷೇತ್ರದ ಉಸ್ತುವಾರಿ ಅವರ ಮೇಲಿತ್ತು. ದಿ. ವಿಜಯ್ ಕುಮಾರ್ ಅವರ ಸಹೋದರನಿಗಿಂತ ನಾವೇ ಸೂಕ್ತ ಅಭ್ಯರ್ಥಿಗಳು ಎಂದು ಕಾರ್ಪೋರೇಟರುಗಳು ಟಿಕೆಟ್ ಲಾಬಿ ನಡೆಸಿದ್ದರು. ಆದರೆ, ವಿಜಯ್ ಕುಮಾರ್ ಸಹೋದರನಿಗೆ ಟಿಕೆಟ್ ಘೋಷಣೆಯಾದಾಗ, ಬಹಿರಂಗವಾಗಿಯೇ ಬಿಜೆಪಿ ಕಾರ್ಪೋರೇಟರ್ (ಭೈರಸಂದ್ರ) ಕಾಂಗ್ರೆಸ್ ಪರ ಕೆಲಸ ಮಾಡಿದ್ದರು.

   ಅಶೋಕ್ ವೃತ್ತಿ ಜೀವನದಲ್ಲಾದ ಬಹುದೊಡ್ಡ ಹಿನ್ನಡೆ

   ಅಶೋಕ್ ವೃತ್ತಿ ಜೀವನದಲ್ಲಾದ ಬಹುದೊಡ್ಡ ಹಿನ್ನಡೆ

   ಕೋಪಗೊಂಡಿದ್ದ ಜಯನಗರ ಅಸೆಂಬ್ಲಿ ವ್ಯಾಪ್ತಿಯ ಕಾರ್ಪೋರೇಟರುಗಳನ್ನು ಸಮಾಧಾನ ಪಡಿಸುವ ಕೆಲಸಕ್ಕೆ ಆರ್ ಅಶೋಕ್ ಮುಂದಾಗಲಿಲ್ಲ ಎನ್ನುವ ಮಾತು ಕೇಳಿಬರುತ್ತಿತ್ತು. ಕಮ್ಮಿ ಮತಗಳ (2,889) ಅಂತರದಿಂದ ಬಿಜೆಪಿ ಅಭ್ಯರ್ಥಿ ಇಲ್ಲಿ ಸೋಲನ್ನು ಅನುಭವಿಸಿದರು. ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರು ಈ ವೇಳೆಯೇ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಬಗ್ಗೆ ಬೇಸರದಿಂದ ಮಾತನಾಡಿದ್ದು. ಈ ಸೋಲು, ಆರ್ ಅಶೋಕ್ ರಾಜಕೀಯ ವೃತ್ತಿ ಜೀವನದಲ್ಲಾದ ಬಹುದೊಡ್ಡ ಹಿನ್ನಡೆ.

   ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನು ಸಂಪರ್ಕಿಸುತ್ತಿದ್ದಾರೆ ಎನ್ನುವ ಮಾಹಿತಿ

   ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನು ಸಂಪರ್ಕಿಸುತ್ತಿದ್ದಾರೆ ಎನ್ನುವ ಮಾಹಿತಿ

   ಆಪರೇಶನ್ ಕಮಲದ ವಿಚಾರದಲ್ಲಿ ಬಿಜೆಪಿಯ ಯಾವಯಾವ ಮುಖಂಡರು, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನು ಸಂಪರ್ಕಿಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಕರಾರುವಕ್ಕಾಗಿ ಹೇಳಿದಾಗಲೇ, ಈ ಸುದ್ದಿಯನ್ನು ಲೀಕ್ ಮಾಡಿದವರು ಯಾರು ಎನ್ನುವ ಪ್ರಶ್ನೆ ಬಂದಾಗ, ಮತ್ತೆ ಬಿಜೆಪಿ ವರಿಷ್ಠರಿಗೆ ಕಣ್ಣು ಹೋಗಿದ್ದೇ ಅಶೋಕ್ ಅಂಗಣಕ್ಕೆ.

   ತಮ್ಮ ಹಿಂದಿನ ವರ್ಚಸ್ಸು ತೋರಿಸಲು ಶತಪ್ರಯತ್ನ ಮಾಡುತ್ತಿದ್ದಾರೆ

   ತಮ್ಮ ಹಿಂದಿನ ವರ್ಚಸ್ಸು ತೋರಿಸಲು ಶತಪ್ರಯತ್ನ ಮಾಡುತ್ತಿದ್ದಾರೆ

   ಇದಾದ ನಂತರ, ಶುಕ್ರವಾರ (ಸೆ 28) ನಡೆದ ಬೆಂಗಳೂರು ಮೇಯರ್ ಚುನಾವಣೆಯಲ್ಲೂ ಪಕ್ಷವನ್ನು ದಡ ಸೇರಿಸಲು ವಿಫಲರಾದರೋ, ಬಿಜೆಪಿಯಲ್ಲಿ ಆರಕ್ಕೇರಿದ್ದ ಸಾಮ್ರಾಟ್ ಅಶೋಕ್ ಮೂರಕ್ಕೆ ಇಳಿಯುತ್ತಿದ್ದಾರಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಅತ್ಯುತ್ತಮ ಸಂಘಟನಾಕಾರರಾಗಿರುವ ಅಶೋಕ್, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮತ್ತೆ ತಮ್ಮ ಹಿಂದಿನ ವರ್ಚಸ್ಸು ತೋರಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ಆಲ್ ದಿ ಬೆಸ್ಟ್.

   English summary
   The powerful leader of BJP and former DCM of BJP R Ashok loosing his control in Bengaluru politics? As per source, BJP top brass not happy with the working style of Ashok.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X