Breaking; ಓಲಾ, ಊಬರ್ ಆಟೋ; ದರ ನಿಗದಿ ಮಾಡದ ಹೈಕೋರ್ಟ್

ಬೆಂಗಳೂರು, ನವೆಂಬರ್ 6; ಓಲಾ ಮತ್ತು ಊಬರ್ ಆಟೋಗಳ ದರ ನಿಗದಿ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನವೆಂಬರ್ 16ಕ್ಕೆ ಮುಂದೂಡಿದೆ. ಕರ್ನಾಟಕ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಕೆ ಮಾಡಲು ಸೂಚನೆ ನೀಡಲಾಗಿದೆ.

ಸೋಮವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಓಲಾ, ಊಬರ್ ದರ ಹೆಚ್ಚಿಗೆ ಮಾಡಲು ಅನುಮತಿ ನೀಡುವಂತೆ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ ನಡೆಯಿತು. ಸರ್ಕಾರದ ಪರ ವಕೀಲರು 4 ವಾರದ ಕಾಲಾವಕಾಶವನ್ನು ಕೇಳಿದರು.

ಸಂಬಂಧಪಟ್ಟವರ ಜೊತೆ ಚರ್ಚಿಸಿ ದರ ನಿಗದಿ ಮಾಡುತ್ತೇವೆ. ಇದಕ್ಕಾಗಿ ನಾಲ್ಕು ವಾರದ ಕಾಲವಕಾಶವನ್ನು ನೀಡಿ ಎಂದು ಸರ್ಕಾರದ ಪರ ವಕೀಲರು ಮನವಿ ಮಾಡಿದರು. ದರ ಏರಿಕೆ ವಿಚಾರದಲ್ಲಿ ಆಕ್ಷೇಪಣೆಗಳು ಇದ್ದರೆ
5 ದಿನದಲ್ಲಿ ಸಲ್ಲಿಕೆ ಮಾಡುವಂತೆ ಕೋರ್ಟ್‌ ಸರ್ಕಾರಕ್ಕೆ ಸೂಚಿಸಿತು.

Ola Uber Auto Fare Issue High Court Adjourn Petition To November 16th

ಆಕ್ಷೇಪಣೆ ಸಲ್ಲಿಕೆಗೆ ಕೋರ್ಟ್‌ ಸೂಚನೆ ನೀಡಿದ ಬಳಿಕ ಅರ್ಜಿಯ ಮುಂದಿನ ವಿಚಾರಣೆಯನ್ನು ನವೆಂಬರ್ 16ಕ್ಕೆ ಮುಂದೂಡಿಕೆ ಮಾಡಲಾಯಿತು. ಆದ್ದರಿಂದ ಓಲಾ, ಊಬರ್ ದರದ ವಿಚಾರದಲ್ಲಿ ಇಂದು ಸಹ ಯಾವುದೇ ಆದೇಶವಾಗಿಲ್ಲ.

ಆಟೋಗಳ ದರ ನಿಗದಿ ವಿಚಾರದಲ್ಲಿ ಓಲಾ, ಊಬರ್ ಮತ್ತು ಸರ್ಕಾರದ ನಡುವೆ ಜಟಾಪಟಿ ನಡೆಯುತ್ತಿದೆ. ಈ ಹಿಂದೆ ಕರ್ನಾಟಕ ಹೈಕೋರ್ಟ್ 15 ದಿನದಲ್ಲಿ ದರ ನಿಗದಿ ಮಾಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಸಾರಿಗೆ ಇಲಾಖೆ ಕಾಟಾಚಾರಕ್ಕೆ ಸಭೆ ನಡೆಸಿದ್ದು, ಬಿಟ್ಟರೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿರಲಿಲ್ಲ. ಹೈಕೋರ್ಟ್‌ ಮಧ್ಯ ಪ್ರವೇಶ ಮಾಡಿ ಸೋಮವಾರ ದರ ನಿಗದಿ ಮಾಡಲಿದೆ ಎಂದು ಅಂದಾಜಿಸಲಾಗಿತ್ತು.

ಸರ್ಕಾರದ ನಿಯಮ ಉಲ್ಲಂಘಿಸಿ ಓಲಾ, ಊಬರ್ ಆಟೋಗಳು ಹೆಚ್ಚಿನ ಪ್ರಯಾಣ ದರವನ್ನು ವಿಧಿಸುತ್ತಿದ್ದವು. ಸರ್ಕಾರ ಆಟೋ ಸೇವೆ ಬಂದ್ ಮಾಡಲು ತೀರ್ಮಾನಿಸಿತ್ತು. ಓಲಾ, ಊಬರ್ ದರ ಏರಿಕೆ ಮಾಡಲು ಅವಕಾಶ ನೀಡಬೇಕು ಎಂದು ಕೋರ್ಟ್‌ ಮೊರೆ ಹೋಗಿವೆ.

ಆಪ್ಲಿಕೇಶನ್ ಆಧಾರಿತ ಆಟೋ ಸೇವೆ ಮೇಲೆ ಹೆಚ್ಚಿನ ಜನರು ಅವಲಂಬಿತರಾಗಿದ್ದಾರೆ. ಆದ್ದರಿಂದ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿ ಎಂದು ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆಗಿನ ಸಭೆಯ ವೇಳೆ ಕಂಪನಿಗಳು 2 ಕಿ. ಮೀ.ಗೆ ಕನಿಷ್ಠ 100 ರೂ. ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದ್ದವು. ಆದರೆ ಸಾರಿಗೆ ಇಲಾಖೆ ಈ ಪ್ರಸ್ತಾವನೆಗೆ ಒಪ್ಪಿರಲಿಲ್ಲ. ಆದ್ದರಿಂದ ಯಾವುದೇ ತೀರ್ಮಾನ ಕೈಗೊಳ್ಳದೇ ಸಭೆ ವಿಫಲವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+