NSAP ಯೋಜನೆಗೆ ಕೇಂದ್ರದಿಂದ ಅನುಮೋದನೆ, ₹53,428 ಕೋಟಿ ಅನುದಾನ; ರಾಜ್ಯದಲ್ಲಿ ಪಿಂಚಣಿ ವಿಳಂಬಕ್ಕೆ ಕಿಡಿ
ಬೆಂಗಳೂರು: ಭಾರತೀಯ ಹಿರಿಯ ನಾಗರಿಕರಿಗೆ ಮತ್ತು ವಿಧವೆಯರು ಹಾಗೂ ದಿವ್ಯಾಂಗರಿಗೆ ಕೇಂದ್ರ ಸರ್ಕಾರ 'ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (NSAP)' ಮೂಲಕ ಗುಡ್‌ನ್ಯೂಸ್ ನೀಡಿದೆ. ಆದರೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಹಾಲಿ ಯೋಜನೆಯಡಿ ನೀಡುವ ಪಿಂಚಣಿಯನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಇದರಿಂದ ನಾಗರಿಕರಿಗೆ ಒಂದು ಕಡೆ (ಭಾರತದಲ್ಲಿ) ಭದ್ರತೆ, ಇನ್ನೊಂದು ಕಡೆ (ಕರ್ನಾಟಕ) ನಿರ್ಲಕ್ಷ್ಯ ಕಾಡುತ್ತಿದೆ ಎಂದು ವಿಪಕ್ಷ ಆರೋಪಿಸಿದೆ.
ಕೇಂದ್ರವು ಜಾರಿಗೊಳಿಸಿದ 'ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (NSAP)' ಕಾರ್ಯಕ್ರಮ ಹಾಗೂ ರಾಜ್ಯದ ಪಿಂಚಣಿ ಸ್ಥಗಿತ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಅವರು ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಫಲಾನುಭವಿಗಳಿಗೆ ಆರ್ಥಿಕ ಅಭದ್ರತೆ!
'ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ₹53,428 ಕೋಟಿ ವೆಚ್ಚದಲ್ಲಿ ಮುಂದಿನ ಐದು ವರ್ಷಗಳ ಕಾಲ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮವನ್ನು ಮುಂದುವರಿಸಿದೆ. 3.20 ಕೋಟಿ ಫಲಾನುಭವಿಗಳಿಗೆ ಸಾಮಾಜಿಕ ಭದ್ರತೆ ಒದಗಿಸಲು ಮುಂದಾಗಿದೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ವೃದ್ಧರು, ವಿಧವೆಯರು ಹಾಗೂ ದಿವ್ಯಾಂಗರಿಗೆ ಆಸರೆಯಾಗಬೇಕಾದ ಸಾಮಾಜಿಕ ಭದ್ರತಾ ಪಿಂಚಣಿಗಳೇ ಹಲವು ತಿಂಗಳಿನಿಂದ ದೊರೆಯುತ್ತಿಲ್ಲ. ರಾಜ್ಯದಲ್ಲಿ 18 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಪಿಂಚಣಿ ವಿಳಂಬದ ಸಂಕಷ್ಟ ಎದುರಿಸುತ್ತಿದ್ದಾರೆ. ಕಚೇರಿಗಳಿಗೆ ಅಲೆದಾಡಿ ಅಲೆದಾಡಿ ಸಸ್ತಾಗಿದ್ದಾರೆ ಎಂದು ಹೇಳಿದರು.
ಒಂದೆಡೆ ದುರ್ಬಲ ವರ್ಗದವರ ಬದುಕಿಗೆ ಭದ್ರತೆ ಒದಗಿಸುವ ಪ್ರಯತ್ನ ಕೇಂದ್ರ ಸರ್ಕಾರದಿಂದ ಆಗುತ್ತಿದೆ. ಮತ್ತೊಂದೆಡೆ ತಮ್ಮ ಜೀವನೋಪಾಯಕ್ಕೆ ಪಿಂಚಣಿಯನ್ನೇ ಅವಲಂಬಿಸಿರುವ ಅಸಹಾಯಕರು ಹಣಕ್ಕಾಗಿ ಕಾಯುವ ಪರಿಸ್ಥಿತಿ ಇಲ್ಲಿದೆ ಎಂದು ರಾಜ್ಯದ ಆಡಳಿತ ಕುರಿತು ಕಿಡಿ ಕಾರಿದ್ದಾರೆಲ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಪಿಂಚಣಿ ಎಂಬುದು ಸರ್ಕಾರದ ದಯೆಯಲ್ಲ. ಅರ್ಹ ಫಲಾನುಭವಿಗಳ ಬದುಕಿನ ಆಸರೆ. ವೃದ್ಧರು, ವಿಧವೆಯರು ಮತ್ತು ದಿವ್ಯಾಂಗರಿಗೆ ಸಕಾಲದಲ್ಲಿ ಪಿಂಚಣಿ ತಲುಪಿಸುವುದು ಸರ್ಕಾರದ ಜವಾಬ್ದಾರಿ. ರಾಜ್ಯ ಕಾಂಗ್ರೆಸ್ ಸರ್ಕಾರ ತಕ್ಷಣವೇ ಬಾಕಿ ಪಿಂಚಣಿಯನ್ನು ಬಿಡುಗಡೆ ಮಾಡಿ, ಅರ್ಹ ಫಲಾನುಭವಿಗಳಿಗೆ ಸೂಕ್ತ ನೆರವು ತಲುಪಿಸಬೇಕು' ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಧಾನಮಂತ್ರಿ ಸಾಮಾಜಿಕ ಸಹಾಯ ಯೋಜನೆ: ಮರುನಾಮಕರಣ
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (NSAP)ಕ್ಕೆ 'ಪ್ರಧಾನಮಂತ್ರಿ ಸಾಮಾಜಿಕ ಸಹಾಯ ಯೋಜನೆ' ಮರುನಾಮಕರಣ ಮಾಡಿ 2026-27ರಿಂದ 2030-31ರವರೆಗೆ ಐದು ವರ್ಷಗಳ ಅವಧಿಗೆ ಒಟ್ಟು ₹53,428 ಕೋಟಿ ವೆಚ್ಚದಲ್ಲಿ ಮುಂದುವರಿಸುವ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಈ ಮೂಲಕ ಯೋಜನೆ ಮತ್ತು ಉಪಯೋಜನೆಗಳ ಮರು ನಾಮಕರಣ, ದಿವ್ಯಾಂಗರ ಪಿಂಚಣಿಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು, ಫಲಾನುಭವಿಗಳ ವ್ಯಾಪ್ತಿ ಹಾಗೂ ಆರ್ಥಿಕ ನೆರವಿನ ಮೊತ್ತದಲ್ಲಿ ಪರಿಷ್ಕರಣೆ, ವೃದ್ಧರು ಹಾಗೂ ವಿಧವೆಯರ ಪಿಂಚಣಿ ಯೋಜನೆಗಳು ಮತ್ತು ಕುಟುಂಬ ನೆರವು ಯೋಜನೆಯನ್ನು ಈಗಿರುವ ಸ್ವರೂಪದಲ್ಲೇ ಮುಂದುವರಿಸುವುದು ಅಂಶಗಳ ಸಮೇತ ಯೋಜನೆಗೆ ಒಪ್ಪಿಗೆ ನೀಡಿದೆ.
ಒಂದೆಡೆ ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರ ₹53,428 ಕೋಟಿ ವೆಚ್ಚದಲ್ಲಿ ಮುಂದಿನ ಐದು ವರ್ಷಗಳ ಕಾಲ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮವನ್ನು ಮುಂದುವರಿಸಿ, 3.20 ಕೋಟಿ ಫಲಾನುಭವಿಗಳಿಗೆ ಸಾಮಾಜಿಕ ಭದ್ರತೆ ಒದಗಿಸಲು ಮುಂದಾಗಿದೆ.ಮತ್ತೊಂದೆಡೆ, ಕರ್ನಾಟಕದ @INCKarnataka ಸರ್ಕಾರದ ಆಡಳಿತದಲ್ಲಿ ವೃದ್ಧರು, ವಿಧವೆಯರು ಹಾಗೂ ದಿವ್ಯಾಂಗರಿಗೆ ಆಸರೆಯಾಗಬೇಕಾದ ಸಾಮಾಜಿಕ ಭದ್ರತಾ ಪಿಂಚಣಿಗಳೇ ಹಲವು ತಿಂಗಳಿನಿಂದ ದೊರೆಯುತ್ತಿಲ್ಲ, ರಾಜ್ಯದಲ್ಲಿ 18 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಪಿಂಚಣಿ ವಿಳಂಬದ ಸಂಕಷ್ಟ ಎದುರಿಸುತ್ತಿದ್ದಾರೆ.ಒಂದೆಡೆ ದುರ್ಬಲ ವರ್ಗದವರ ಬದುಕಿಗೆ ಭದ್ರತೆ ಒದಗಿಸುವ ಪ್ರಯತ್ನ; ಮತ್ತೊಂದೆಡೆ ತಮ್ಮ ಜೀವನೋಪಾಯಕ್ಕೆ ಪಿಂಚಣಿಯನ್ನೇ ಅವಲಂಬಿಸಿರುವ ಅಸಹಾಯಕರು ಹಣಕ್ಕಾಗಿ ಕಾಯುವ ಪರಿಸ್ಥಿತಿ!ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರೇ ಪಿಂಚಣಿ ಎಂಬುದು ಸರ್ಕಾರದ ದಯೆಯಲ್ಲ, ಅರ್ಹ ಫಲಾನುಭವಿಗಳ ಬದುಕಿನ ಆಸರೆ. ವೃದ್ಧರು, ವಿಧವೆಯರು ಮತ್ತು ದಿವ್ಯಾಂಗರಿಗೆ ಸಕಾಲದಲ್ಲಿ ಪಿಂಚಣಿ ತಲುಪಿಸುವುದು ಸರ್ಕಾರದ ಜವಾಬ್ದಾರಿ.ರಾಜ್ಯ ಸರ್ಕಾರ ತಕ್ಷಣವೇ ಬಾಕಿ ಪಿಂಚಣಿಯನ್ನು ಬಿಡುಗಡೆ ಮಾಡಿ, ಅರ್ಹ ಫಲಾನುಭವಿಗಳಿಗೆ ಸೂಕ್ತ ನೆರವು ತಲುಪಿಸಬೇಕು.#SocialSecurity #NSAP #CongressFailsKarnataka
— R. Ashoka (@RAshokaBJP) October 15, 2026


Click it and Unblock the Notifications
