ಉದ್ಯಮಿಗಳ ನೆರವಿಗಾಗಿ ಮಹತ್ವದ ತೀರ್ಮಾನ ಕೈಗೊಂಡ ಕರ್ನಾಟಕ
ಬೆಂಗಳೂರು, ಮೇ 20 : ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಉದ್ಯಮ ಸ್ಥಾಪನೆ ಮಾಡುವುದನ್ನು ಮತ್ತಷ್ಟು ಸರಳೀಕರಣಗೊಳಿಸಲು ಮಹತ್ವದ ತೀರ್ಮಾನ ಕೈಗೊಂಡಿದೆ. ಇನ್ನು ಮುಂದೆ ಕೈಗಾರಿಕೆ ಸ್ಥಾಪನೆ ಮಾಡಲು ಬೇಕಾದ ಭೂಮಿಯನ್ನು ರೈತರಿಂದ ನೇರವಾಗಿ ಖರೀದಿ ಮಾಡಬಹುದು.
ಕೈಗಾರಿಕೆಗಳ ಬೆಳವಣಿಗೆಗೆ ಇದ್ದ ಅಡೆ-ತಡೆ ನಿವಾರಣೆ ಮಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ. 1961ರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಉದ್ಯಮಿಗಳು ಕೈಗಾರಿಕೆ ಸ್ಥಾಪನೆ ಮಾಡುವಾಗ ರೈತರಿಂದ ನೇರವಾಗಿ ಭೂಮಿ ಖರೀದಿಸಬಹುದು.
ಕೈಗಾರಿಕೆ ಸ್ಥಾಪಿಸಲು ಜಾಗ ಗುರುತಿಸಿ, ಭೂ ಸ್ವಾಧೀನ ಮಾಡಿಕೊಂಡು, ರೈತರಿಗೆ ಪರಿಹಾರ ಕೊಟ್ಟು, ನ್ಯಾಯಾಲಯ ವಾಜ್ಯಗಳನ್ನು ಬಗೆಹರಿಸಿ ಹೀಗೆ ಮೂರು ವರ್ಷ ನಡೆಯುವ ಪ್ರಕ್ರಿಯೆಗೆ ಇನ್ನು ತಡೆ ಬೀಳಲಿದೆ. 30 ದಿನದಲ್ಲಿ ಎಲ್ಲಾ ಪ್ರಕ್ರಿಯೆ ನಡೆಯಲಿದೆ.

ಇಷ್ಟು ಇದನ ಕೈಗಾರಿಕೆ ಸ್ಥಾಪನೆ ಮಾಡಲು ಗುರುತಿಸಿದ ಭೂಮಿಯನ್ನು ಮೊದಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ವಶಕ್ಕೆ ಪಡೆಯುತ್ತಿತ್ತು. ರೈತರ ಜೊತೆ ಮಾತುಕತೆ, ಪರಿಹಾರ ನೀಡಿದೆ, ನ್ಯಾಯಾಲಯದ ವ್ಯಾಜ್ಯ ಎಲ್ಲವನ್ನೂ ನೋಡಿಕೊಳ್ಳುತ್ತಿತ್ತು.
ಈ ಪ್ರಕ್ರಿಯೆ ತುಂಬಾ ವಿಳಂಬ ಆಗುತ್ತಿತ್ತು. ರೈತರು ಮೊದಲು ಒಂದು ದರ ಹೇಳಿ, ವಾಜ್ಯ ತೀರ್ಮಾನವಾಗುವ ಹೊತ್ತಿಗೆ ಈಗಿನ ಮಾರುಕಟ್ಟೆ ದರದಲ್ಲಿ ಪರಿಹಾರಬೇಕು ಎಂದು ಪಟ್ಟು ಹಿಡಿಯುತ್ತಿದ್ದರು. ಇದರಿಂದಾಗಿ ಉದ್ಯಮ ಸ್ಥಾಪನೆಯ ಪ್ರಕ್ರಿಯೆ ನಿಧಾನವಾಗುತ್ತಿತ್ತು.
ಕೆಐಎಡಿಬಿಯಲ್ಲಿಯೂ ವಶಕ್ಕೆ ಪಡೆದ ಭೂಮಿ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದ್ದವು. ಆದ್ದರಿಂದ, ಸರ್ಕಾರ ರೈತರಿಂದ ನೇರವಾಗಿ ಭೂಮಿ ಖರೀದಿ ಮಾಡಲು ಅವಕಾಶ ನೀಡಿದೆ.
#EaseOfDoingBusiness
— India Investment Grid (@IIG_GoI) May 20, 2020
Removing a hurdle in industrial growth, #Karnataka govt implemented the amended Land Reforms Act 1961, allowing the three-year-long process to now be completed in 30 days! #TransformingIndia #IndustryReforms @CMofKarnataka @KarnatakaVarthe @EODB_India pic.twitter.com/RzkWsTP1up












Click it and Unblock the Notifications