ಪ್ರಯಾಣಿಕರ ಗಮನಕ್ಕೆ: ಇಂದು ಈ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಇರಲ್ಲ!
ಬೆಂಗಳೂರು, ಸೆಪ್ಟೆಂಬರ್ 21: ಬೆಂಗಳೂರು ಮೆಟ್ರೋ ರೈಲು ನಿಗಮವು ಮೆಟ್ರೋ ರೈಲು ಸುರಕ್ಷತೆಯ ಆಯುಕ್ತರು ಸೆಪ್ಟೆಂಬರ್ 21 ರಂದು ಬಹು ನಿರೀಕ್ಷಿತ ಕೃಷ್ಣರಾಜಪುರ-ಬೈಯಪ್ಪನಹಳ್ಳಿ ಮಾರ್ಗವನ್ನು ಪರಿಶೀಲಿಸಲಿರುವ ಹಿನ್ನೆಲೆಯಲ್ಲಿ ಇಡೀ ದಿನ ಕೃಷ್ಣರಾಜಪುರ ಮತ್ತು ಗರುಡಾಚಾರ್‌ಪಾಳ್ಯದವರೆಗಿನ ಮೆಟ್ರೋ ರೈಲ್ವೆ ಸಂಚಾರವನ್ನು ಬಿಎಂಆರ್‌ಸಿಎಲ್ ರದ್ದುಪಡಿಸಿದೆ.
In view of the Statutory Safety Inspection by Commissioner of Metro Railway Safety (Southern Circle)on 21.09.2023 , there will be changes to the Metro Train Operations. May kindly note and cooperate. Details are in the media release. pic.twitter.com/0K0a5pzkBS
— ನಮ್ಮ ಮೆಟ್ರೋ (@cpronammametro) September 19, 2023
ಈ ಕುರಿತು ಪ್ರಕಟಣೆ ನೀಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ, ಕೃಷ್ಣರಾಜಪುರ ಮತ್ತು ಗರುಡಾಚಾರ್‌ಪಾಳ್ಯದವರೆಗೆ ಇಡೀ ದಿನ ಮೆಟ್ರೋ ರೈಲು ಸಂಚಾರ ಸೇವೆ ಇರುವುದಿಲ್ಲ. ಬೈಯ್ಯಪ್ಪನಹಳ್ಳಿಯಿಂದ ಇಂದಿರಾನಗರ ಮೆಟ್ರೋ ನಿಲ್ದಾಣದವರೆಗೆ ಮಧ್ಯಾಹ್ನ 1.30ರಿಂದ 4.30ರವರೆಗೆ ರೈಲು ಸಂಚರಿಸುವುದಿಲ್ಲ ಎಂದು ತಿಳಿಸಿದೆ.

ಇನ್ನೂ ಎಂದಿನಂತೆ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಗರುಡಾಚಾರಪಾಳ್ಯ ನಡುವೆ ರೈಲು ಸೇವೆ ಎಂದಿನಂತೆ ಇರಲಿದೆ. ಇಂದಿರಾನಗರ ಮತ್ತು ಕೆಂಗೇರಿ ನಡುವೆ ಮಧ್ಯಾಹ್ನ 1.30ರಿಂದ 4.30ರವರೆಗೆ ರೈಲ್ವೆ ಸೇವೆ ಲಭ್ಯವಿದೆ. ಮಧ್ಯಾಹ್ನ 1.30ರವರೆಗೆ ಮತ್ತು ಸಂಜೆ 4.30ರ ಬಳಿಕ ಬೈಯ್ಯಪ್ಪನಹಳ್ಳಿ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣದ ನಡುವೆ ರಾತ್ರಿ 11ರವರೆ ಮೆಟ್ರೋ ಸೇವೆ ಎಂದಿನಂತೆ ನಡೆಯಲಿದೆ. ಮೆಟ್ರೋ ಪ್ರಯಾಣಿಕರು ರೈಲ್ವೆ ಸಂಚಾರದ ವ್ಯತ್ಯಯ ಗಮನಿಸಿ ಸಹಕರಿಸುವಂತೆ ಬಿಎಂಆರ್‌ಸಿಎಲ್ ಕೋರಿದೆ.
ಹೊಸ ವಿಸ್ತರಿತ ಮಾರ್ಗವಾದ ನಮ್ಮ ಮೆಟ್ರೋದ ಕೆ.ಆರ್.ಪುರ-ಬೈಯಪ್ಪನಹಳ್ಳಿ ನಡುವೆ ಅಳವಡಿಸಲಾಗಿರುವ ಮೆಟ್ರೋ ರೈಲು ಮಾರ್ಗದ ಸುರಕ್ಷತಾ ತಪಾಸಣೆ ಇಂದು (ಗುರುವಾರ) ನಡೆಯಲಿದೆ, ಇದು 2 ಕಿ.ಮೀ. ಮಾರ್ಗವಾಗಿದ್ದು, ಇದಕ್ಕೆ ಮೆಟ್ರೋ ಸುರಕ್ಷತಾ ಆಯುಕ್ತರು ತಪಾಸಣೆ ಬಳಿಕ ಗ್ರೀನ್ ಸಿಗ್ನಲ್ ನೀಡಿದರೆ, ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗೆ ತಡೆರಹಿತ ಸಂಚಾರ ನಡೆಸಬಹುದಾಗಿದೆ. ಇದರಿಂದ ಬೆಂಗಳೂರಿನ ಐಟಿ ಹಬ್ ಆಗಿರುವ ವೈಟ್‌ಫೀಲ್ಡ್‌ನ ಸಾವಿರಾರು ಟೆಕ್ಕಿಗಳಿಗೆ ನೆರವಾಗಲಿದೆ.












Click it and Unblock the Notifications