ರೋಹಿಣಿ ಸಿಂಧೂರಿ ಸೇರಿ 9 ಐಎಎಸ್ ಅಧಿಕಾರಿಗಳು ವರ್ಗ
ಬೆಂಗಳೂರು, ಸೆ.16: ಮಂಡ್ಯ ಜಿಲ್ಲಾ ಪಂಚಾಯತ್ ನ ಸಿಇಒ ಆಗಿ ಕಾರ್ಯನಿರ್ವಹಿಸಿ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಐ ಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ 9 ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಸಿದ್ದರಾಮಯ್ಯ ಸರ್ಕಾರ ಬುಧವಾರ ಹೊರಡಿಸಿರುವ ಆದೇಶದ
ರೋಹಿಣಿ ಸಿಂಧೂರಿ ಅವರನ್ನು ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿ ಸರ್ಕಾರ ನೇಮಕ ಮಾಡಿದೆ. ಉಳಿದಂತೆ ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದ ಟಿಎಂ ವಿಜಯ್ ಭಾಸ್ಕರ್ ಅವರನ್ನು ಬಿಡಬ್ಲ್ಯೂಎಸ್ ಎಸ್ ಬಿ ಅಧ್ಯಕ್ಷರಾಗಿ ನೇಮಿಸಲಾಗಿದೆ.

ವರ್ಗಾವಣೆಯಾದ ಅಧಿಕಾರಿಗಳು ಮತ್ತು ಹಾಲಿ ಸ್ಥಾನಗಳು ಹೀಗಿವೆ:
* ರೋಹಿಣಿ ಸಿಂಧೂರಿ, ಎಂಡಿ, ಆಹಾರ ನಿಗಮ
* ಟಿಎಂ ವಿಜಯ್ ಭಾಸ್ಕರ್, ಜಲಮಂಡಳಿ ಅಧ್ಯಕ್ಷ
* ಸುಭಾಷ್ ಚಂದ್ರ, ಪ್ರಧಾನ ಕಾರ್ಯದರ್ಶಿ, ಆರ್‍ಡಿಪಿಆರ್
* ರಣದೀಪ್ ಚೌಧರಿ, ಜಿಲ್ಲಾಧಿಕಾರಿ, ಹಾವೇರಿ
* ಎನ್.ಟಿ.ಅಬ್ರು, ಸದಸ್ಯೆ, ಕೆಎಟಿ
* ವಿನೋದ್ ಪ್ರಿಯ, ಜಿಲ್ಲಾಧಿಕಾರಿ, ಕೊಪ್ಪಳ
* ಟಿ.ವೆಂಕಟೇಶ್, ಸಿಇಒ, ಜಿ.ಪಂ ಮಂಡ್ಯ
* ಪಿ.ಸುನೀಲ್ ಕುಮಾರ್, ಕಲಬುರಗಿ ಪಾಲಿಕೆ ಆಯುಕ್ತ
* ಎಸ್.ವಿ.ಕಿಶೋರ್, ಉಪಕಾರ್ಯದರ್ಶಿ, ಯಾದಗಿರಿ ಜಿ.ಪಂ.
ಜುಲೈ 23ರಂದು 18 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ನಂತರ ಕಾಂಗ್ರೆಸ್ ಸರ್ಕಾರ ಕೆಎಎಸ್ ಅಧಿಕಾರಿಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿತ್ತು. ಆಗಸ್ಟ್ 7ರಂದು 11 ಜನ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿತ್ತು.
(ಒನ್ ಇಂಡಿಯಾ ಸುದ್ದಿ)












Click it and Unblock the Notifications