2014: ಹೊಸ ವರ್ಷದ ಹೊಸ್ತಿಲಲ್ಲಿ ನಾಲ್ಕು ಮಂದಿ ಸಾವು

ಉಳಿದಂತೆ ಕೆಲವೊಂದು ಸಣ್ಣಪುಟ್ಟ ಅಹಿತಕರ ಘಟನೆಗಳು ಹೊರತುಪಡಿಸಿ ಹೆಚ್ಚೇನೂ ಅನಾಹುತಗಳು ನಡೆದಿಲ್ಲ. Rather ಜನ ಇತ್ತಿತ್ಲಾಗೆ ಜಾಗೃತರಾಗುತ್ತಿದ್ದು ಸಂಯಮ ಮತ್ತು ತುಸು ಎಚ್ಚರಿಕೆಯಿಂದ ಜನವರಿ 1ನ್ನು ಅಪ್ಪಿಕೊಳ್ಳುತ್ತಿದ್ದಾರೆ. ಜತೆಗೆ ಪೊಲೀಸ್ ಭದ್ರತೆಯೂ ಬಿಗಿಯಾಗಿದ್ದು, ಕಿಡಿಗೇಡಿಗಳಿಗೆ ಹೆಚ್ಚು ಅವಕಾಶ ಇಲ್ಲದಂತಾಗಿದೆ. ಆದರೂ...
ಬೆಂಗಳೂರಿನಲ್ಲಿ ಟೌನ್ ಹಾಲ್ ಸಮೀಪ ಯುವಕರ ಗುಂಪೊಂದು ಸಾಹಸ ಮೆರೆಯಲು ಹೋಗಿ ಒಬ್ಬನನ್ನು ಕಳೆದುಕೊಂಡಿದೆ. ಜತೆಗೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಇದು ಸ್ವಯಂಕೃತಾಪರಾಧವೇ ಸರಿ. (ಪುತ್ರನ ಅಂತಿಮ ಯಾತ್ರೆಯಲ್ಲಿ ಜನಸಾಗರ, ಕಣ್ಣೀರಿಟ್ಟ ಅಜರ್)
ಏನಾಯ್ತೆಂದರೆ ನಾಲ್ಕು ಮಂದಿ ಯುವಕರು ಮಧ್ಯರಾತ್ರಿಯಲ್ಲಿ ಟೌನ್ ಹಾಲ್ ಎದುರು ಸುವಿಶಾಲ ರಸ್ತೆಗಳಲ್ಲಿ ವೀಲಿಂಗ್ ಮಾಡಲು ಹೋಗಿದ್ದಾರೆ. ಅದೂ ಮೊಪೆಡ್ ದ್ವಿಚಕ್ರ ವಾಹನಗಳಲ್ಲಿ. ವೀಲಿಂಗ್ ಮೋಜಿನಲ್ಲಿದ್ದಾಗ ಒಬ್ಬ ನಿಯಂತ್ರಣ ತಪ್ಪಿದ್ದಾನೆ.
ಇದರಿಂದ ಮೂರು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ. (ಅಜರುದ್ದೀನ್ ಗೆ ಪುತ್ರ ಶೋಕಂ ನಿರಂತರಂ) ಪರಿಣಾಮ ಒಬ್ಬ ಸೀದಾ ಯಮನ ಪಾದ ಸೇರಿದ್ದಾನೆ. 24 ವರ್ಷದ ಸಲೀಂ ಮೃತಪಟ್ಟ ಯುವಕ. ಈತ ವಾಲ್ಮೀಕಿನಗರದ ನಿವಾಸಿ. ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ಮತ್ತಿನಲ್ಲಿದ್ದ ಚಾಲಕ ಕಾರನ್ನು ಸೀದಾ ಚರಂಡಿಗಿಳಿಸಿದ: ಇನ್ನು, ಮಂಡ್ಯ ಜಿಲ್ಲೆ ಪಾಂಡವರಪುರ ತಾಲೂಕಿನಲ್ಲಿ ಕಾರು ಅಪಘಾತ ಸಂಭವಿಸಿದೆ. ಮತ್ತಿನಲ್ಲಿದ್ದ ಕಾರಿನ ಚಾಲಕ ಕಾರನ್ನು ಸೀದಾ ಚರಂಡಿಗೆ ಉರುಳಿಸಿದ್ದಾನೆ. ಚಾಲಕ, ಮೇಲುಕೋಟೆಯ ವಿಜಯ್ ಕುಮಾರ್ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಿವಮೊಗ್ಗದ ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶರಾವತಿ ಹಿನ್ನೀರಿನಲ್ಲಿ ದಂಪತಿ ಸೇರಿದಂತೆ ಒಂದೇ ಕುಟುಂಬದ ಮೂವರು ನೀರು ಪಾಲಾಗಿದ್ದಾರೆ. ಇದರ ಹೊರತಾಗಿ, ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡಿನಲ್ಲಿ ನಿನ್ನೆ ಸಂಜೆ ಬಿಎಂಟಿಸಿ ಬಸ್ಸೊಂದು ಸ್ಕೂಟರಿಗೆ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.












Click it and Unblock the Notifications