ಅಂತರರಾಜ್ಯ ಪ್ರಯಾಣಿಕರು ಕರ್ನಾಟಕಕ್ಕೆ ಬರಲು ಹೊಸ ಮಾರ್ಗಸೂಚಿ
ಬೆಂಗಳೂರು, ಮೇ 31 : ಕರ್ನಾಟಕ ಸರ್ಕಾರ ಲಾಕ್ ಡೌನ್ ಅನ್ನು ಜೂನ್ 30ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಅಂತರರಾಜ್ಯ ಪ್ರಯಾಣಿಕರು ಕರ್ನಾಟಕಕ್ಕೆ ಬರುವಾಗ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಸರ್ಕಾರ ಹೇಳಿದೆ. ಈ ಕುರಿತು ಆದೇಶ ಹೊರಡಿಸಿದೆ.
ಭಾನುವಾರ ಈ ಕುರಿತು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಅಂತರರಾಜ್ಯದಿಂದ ಆಗಮಿಸಲು ಯಾವುದೇ ಪಾಸುಗಳ ಅಗತ್ಯವಿಲ್ಲ. ಆದರೆ, ಸೇವಾಸಿಂಧು ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂದು ಸೂಚಿಸಲಾಗಿದೆ.
ಹೊರ ರಾಜ್ಯದಿಂದ ಆಗಮಿಸುವ ಎಲ್ಲಾ ಜನರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. 14 ದಿನಗಳ ಹೋಂ ಕ್ವಾರಂಟೈನ್ ಸೀಲ್ ಅನ್ನು ಅವರಿಗೆ ಹಾಕಲಾಗುತ್ತದೆ ಎಂದು ಸರ್ಕಾರ ಹೇಳಿದೆ. ರೈಲು, ವಿಮಾನದಲ್ಲಿ ಬಂದವರ ತಪಾಸಣೆ ನಡೆಸಲಾಗುತ್ತದೆ.
ಮಹಾರಾಷ್ಟ್ರದಿಂದ ಆಗಮಿಸುವ ಜನರು ಎರಡು ದಿನಕ್ಕೆ ಹಿಂದಿನ ಕೋವಿಡ್ - 19 ನೆಗೆಟೀವ್ ಪ್ರಮಾಣ ಪತ್ರವನ್ನು ತಂದರೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ನಿಂದ ವಿನಾಯಿತಿ ಸಿಗಲಿದೆ. ಆದರೆ, 14 ದಿನಗಳ ಹೋಂ ಕ್ವಾರಂಟೈನ್‌ಗೆ ಸೂಚಿಸಬಹುದಾಗಿದೆ.

ಸೇವಾ ಸಿಂಧುವಿನಲ್ಲಿ ನೋಂದಣಿ
ಅಂತರರಾಜ್ಯ ಪ್ರಯಾಣಿಕರು ಹೆಸರು, ವಿಳಾಸ ಮತ್ತು ಮೊಬೈಲ್ ನಂಬರ್ ನೀಡಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಬೇಕು. ರಾಜ್ಯಕ್ಕೆ ಪ್ರವೇಶಿಸಲು ಅನುಮತಿ ಪಡೆಯುವ ಅಗತ್ಯವಿಲ್ಲ.
ಕಚೇರಿ ಕೆಲಸದ ಮೇಲೆ ಬರುವವರು ಹೆಸರು, ವಿಳಾಸ, ಮೊಬೈಲ್ ನಂಬರ್ ರಾಜ್ಯದಲ್ಲಿ ಯಾರನ್ನು ಭೇಟಿಯಾಗಬೇಕು ಎಂಬ ಮಾಹಿತಿ ನೀಡಬೇಕು.

ಆರೋಗ್ಯ ಪರೀಕ್ಷೆ, ಕ್ವಾರಂಟೈನ್
* ರಾಜ್ಯಗಳ ಗಡಿ, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ನಡೆಯಲಿದೆ. ಪ್ರಯಾಣಿಕರ ಕೈಗೆ 14 ದಿನದ ಹೋಂ ಕ್ವಾರಂಟೈನ್ ಸೀಲ್ ಅನ್ನು ಹಾಕಲಾಗುತ್ತದೆ.

7 ದಿನದ ಕ್ವಾರಂಟೈನ್
ಕೊರೊನಾ ಹಾಟ್ ಸ್ಪಾಟ್ ರಾಜ್ಯಗಳಿಂದ ಬಂದರೆ 7 ದಿನದ ಸರ್ಕಾರಿ ಕ್ವಾರಂಟೈನ್ ಮತ್ತು 7 ದಿನದ ಹೋಂ ಕ್ವಾರಂಟೈನ್ ಇರುತ್ತದೆ. ರಾಜ್ಯಕ್ಕೆ ಆಗಮಿಸಿದ ತಕ್ಷಣ ಪರೀಕ್ಷೆ ಮಾಡಿದಾಗ ಕೋವಿಡ್ - 19 ಸೋಂಕಿನ ಲಕ್ಷಣ ಕಂಡು ಬಂದರೆ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ನೆಗೆಟೀವ್ ಬಂದರೆ ಯಾವುದೇ ಪ್ರಕ್ರಿಯೆ ಇಲ್ಲ.
|
ಮಹಾರಾಷ್ಟ್ರದಿಂದ ಬರುವವರಿಗೆ
ಮಹಾರಾಷ್ಟದಿಂದ ಕರ್ನಾಟಕಕ್ಕೆ ಬರುವವರು 7 ದಿನ ಸರ್ಕಾರಿ, 7 ದಿನ ಹೋಂ ಕ್ವಾರಂಟೈನ್‌ನಲ್ಲಿರಬೇಕು. ಕ್ವಾರಂಟೈನ್ ಸಮಯದಲ್ಲಿ ಪರೀಕ್ಷೆ ಕಡ್ಡಾಯ.
|
ಕರ್ನಾಟಕಕ್ಕೆ ಬರುವ ಮೊದಲು ತಿಳಿಯಿರಿ
ಕರ್ನಾಟಕಕ್ಕೆ ಬರುವ ಜನರು ಸರ್ಕಾರದ ಹೊಸ ಮಾರ್ಗಸೂಚಿಯನ್ನು ತಿಳಿಯಿರಿ












Click it and Unblock the Notifications