DCM DK Shivakumar : ತುಂಗಭದ್ರಾ ಜಲಾಶಯಕ್ಕೆ ನೂತನ ಕ್ರಸ್ಟ್ ಗೇಟ್ ಗಳ ಅಳವಡಿಕೆಗೆ ಕ್ರಮ: ಡಿ. ಕೆ. ಶಿವಕುಮಾರ್
ಹೊಸಪೇಟೆ, ಸೆಪ್ಟೆಂಬರ್ 23: ತುಂಗಭದ್ರಾ ಜಲಾಶಯಕ್ಕೆ ನೂತನ ಕ್ರೆಸ್ಟ್ ಗೇಟ್ ಗಳನ್ನು ಒಂದು ವರ್ಷದೊಳಗೆ ಅಳವಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಹೇಳಿದರು.
ತುಂಗಭದ್ರಾ ಜಲಾಶಯ ಬಾಗಿನ ಸಮರ್ಪಣೆ ನಂತರ ಮುನಿರಾಬಾದ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶ, ತೆಲಂಗಾಣ ಮತ್ತು ತುಂಗಭದ್ರಾ ಬೋರ್ಡ್ ಬಳಿ ಚರ್ಚೆ ನಡೆಸಿ ನೂತನ ಗೇಟ್ ಅಳವಡಿಕೆ ಮಾಡಲಾಗುವುದು. ಇದರ ಮೂಲಕ ನಮ್ಮ ರೈತರ ರಕ್ಷಣೆ ಮಾಡಲಾಗುವುದು. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗುವುದು ಎಂದು ಹೇಳಿದರು.

ಆಗಸ್ಟ್ 10 ನೇ ತಾರೀಕಿನಂದು 19ನೇ ಗೇಟ್ ಕಿತ್ತು ಹೋದಾಗ ಜಿಲ್ಲಾ ಮಂತ್ರಿಗಳು, ಎಂಡಿಯವರು ಕರೆ ಮಾಡಿ ಡ್ಯಾಮ್ ಅಪಾಯದಲ್ಲಿದೆ ಎಂದು ಪರಿಸ್ಥಿತಿಯ ಬಗ್ಗೆ ತಿಳಿಸಿದರು. ನಾನು ಆತಂಕ ಪಡಬೇಡಿ ಎಂದು ಹೇಳಿ ಮಾರನೇ ದಿನವೇ ಸ್ಥಳಕ್ಕೆ ಭೇಟಿ ನೀಡಿದೆ. ಅಧಿಕಾರಿಗಳು ಹಾಗೂ ತಾಂತ್ರಿಕ ಪರಿಣಿತರ ಹತ್ತಿರ ಮಾತನಾಡಿ ಎಲ್ಲಾ ಗೇಟ್ ಗಳಿಂದ ನೀರನ್ನು ಹರಿಸಿ ಎಂದು ಹೇಳಿ ತಕ್ಷಣ ಗೇಟ್ ತಯಾರು ಮಾಡುವ ಸಂಸ್ಥೆಗಳ ಜೊತೆ ಚರ್ಚೆ ನಡೆಸಿ ಗೇಟ್ ತಯಾರಿಗೆ ಆದೇಶ ನೀಡಿದೆ ಎಂದರು.
ಡ್ಯಾಮಿನ ಗೇಟ್ ಕಿತ್ತು ಹೋದಂತಹ ಕಷ್ಟಕಾಲದಲ್ಲಿ ನಾವು ಎದೆಗುಂದದೆ ರೈತರ ಜಮೀನಿಗೆ ಮತ್ತೆ ನೀರನ್ನು ಕೊಡುವಂತಹ ಅವಕಾಶ ನನಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಸಿಕ್ಕಿರುವುದು ನಮ್ಮ ಭಾಗ್ಯ ಎಂದರು.
ಕಷ್ಟಕಾಲದಲ್ಲಿ ಕನ್ನಯ್ಯ ನಾಯ್ಡು ಅವರು ನಮ್ಮ ಜೊತೆ ನಿಂತು, 20 ಟಿಎಂಸಿಯಷ್ಟು ನೀರು ಉಳಿಸಿದರು. 9 ಲಕ್ಷ ಎಕರೆಗೆ ಬೆಳೆ ಹಾಗೂ ನಮ್ಮ ರೈತರನ್ನು ಉಳಿಸಿದ ಹಿರಿಯ ಜೀವ" ಎಂದು ಹೇಳಿದರು.
ನಾರಾಯಣ ಇಂಜಿನಿಯರಿಂಗ್, ಜಿಂದಾಲ್ ಹಾಗೂ ಹಿಂದೂಸ್ತಾನ್ ಇಂಜಿನಿಯರಿಂಗ್ ಅವರು ಕನ್ನಯ್ಯ ನಾಯ್ಡು ಅವರ ನೇತೃತ್ವದಲ್ಲಿ ಬಹು ದೊಡ್ಡ ಕೆಲಸ ಮಾಡಿದ್ದಾರೆ. ಇಲಾಖೆಯ ಅಧಿಕಾರಿಗಳು ಸೇರಿದಂತೆ ಎಲ್ಲರ ಸಹಕಾರದಿಂದ ಇಡೀ ಭಾರತವೇ ತಿರುಗಿ ನೋಡುವಂತಹ ಕೆಲಸವನ್ನು ನಾವು ಮಾಡಿದ್ದೇವೆ. ಗೇಟ್ ಕಿತ್ತು ಹೋದಾಗ ಆಂಧ್ರ, ತೆಲಂಗಾಣದ ರೈತರು ಆತಂಕದಲ್ಲಿದ್ದರು. ಎಲ್ಲರ ಭಯವನ್ನು ನಾವು ಗೇಟ್ ಮರು ಜೋಡಿಸುವುದರ ಮೂಲಕ ದೂರ ಮಾಡಿದ್ದೇವೆ ಎಂದರು.
ನಾವು ಉದ್ಘಾಟನೆ ವೇಳೆ ಗಿಡಕ್ಕೆ ನೀರು ಹಾಕಿದೆವು. ಇದು ರಾಜ್ಯದ ಜನರ ಹಾಗೂ ರೈತರ ಬದುಕನ್ನು ಹಸನು ಮಾಡಲು ಹಾಕಿದ ನೀರು. ನಮ್ಮ ಕರ್ನಾಟಕದ ಪಾಲಿನ ನೀರನ್ನು ಉಳಿಸಿಕೊಳ್ಳಲು ನಾವು ಹೋರಾಡುತ್ತೇವೆ. ನವಲಿಯಲ್ಲಿ ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ನಾವು ಮುಂದಾಗುತ್ತೇವೆ. ಈ ಅಣೆಕಟ್ಟು ನಿರ್ಮಾಣಕ್ಕೆ ಈಗಾಗಲೇ ಡಿಪಿಆರ್ ತಯಾರಿಸಿದ್ದೇವೆ. ಸುಮಾರು ಹದಿನೈದು ಸಾವಿರ ಎಕರೆ ಭೂಮಿ ಇದಕ್ಕೆ ಬೇಕಾಗಿದೆ. ಈ ಕುರಿತು ನೆರೆಯ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಚರ್ಚೆ ನಡೆಸುತ್ತೇನೆಎಂದು ಹೇಳಿದರು.
ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿಕೊಂಡ ಕಾರಣಕ್ಕೆ ಸುಮಾರು 33 ಟಿಎಂಸಿಯಷ್ಟು ನಮ್ಮ ಪಾಲಿನ ನೀರು ಸಿಗುತ್ತಿಲ್ಲ. ಇದಕ್ಕೆಲ್ಲ ಪರಿಹಾರ ನವಲಿ ಅಣೆಕಟ್ಟು. ನಿರ್ಮಾಣಕ್ಕೆ ನೆರೆಯ ರಾಜ್ಯಗಳ ಸಹಕಾರವನ್ನು ಕೇಳಲಾಗುವುದು. ಗಂಗಾ ಸ್ನಾನ, ತುಂಗಾ ಪಾನ ಎನ್ನುವ ಮಾತಿದೆ. ಅಂದರೆ ತುಂಗಾ ನೀರು ಕುಡಿಯಲು ಅಷ್ಟು ಪವಿತ್ರವಾದುದು. ಶೃಂಗೇರಿಯ ಶಾರದಾಂಬೆಯ ಪಾದ ಮುಟ್ಟಿ ಹರಿಯು ತುಂಗಾ ನದಿ ನಮ್ಮನ್ನು ಕಾಪಾಡಿದ್ದಾಳೆ. ಹಂಪಿಯ ವಿರೂಪಾಕ್ಷನ ಆಶೀರ್ವಾದದಿಂದ ಪ್ರಕೃತಿ ಮಾತೆಯ ಆಶೀರ್ವಾದದಿಂದ ಮತ್ತೆ ಅಣೆಕಟ್ಟು ತುಂಬಿದೆ ಎಂದರು.
ತುಂಗಭದ್ರಾ ಅಣೆಕಟ್ಟು ಕಾಂಗ್ರೆಸ್ ಪಕ್ಷದ ಕೊಡುಗೆ. ಈ ಇತಿಹಾಸವನ್ನು ಯಾರಿಂದಲೂ ತಿರುಚಲು ಸಾಧ್ಯವಿಲ್ಲ. ಆಧುನಿಕ ಭಾರತದ ದೇವಾಲಯಗಳು ಆಣೆಕಟ್ಟುಗಳು ಎಂದು ನೆಹರು ಅವರು ಹೇಳಿದ್ದರು. ರೈತರನ್ನು ಕಾಪಾಡುವುದೇ ಅಣೆಕಟ್ಟುಗಳು. ನಾನು ಈ ಹಿಂದೆ ತುಂಗಾ ಆರತಿ ಆರಂಭ ಮಾಡಿದ್ದೆ. ಈಗ ಕಾವೇರಿ ಆರತಿಗೆ ತೀರ್ಮಾನ ಮಾಡಿದ್ದೇವೆ. ಅದಕ್ಕೆ ಒಂದು ತಂಡವನ್ನು ರಚನೆ ಮಾಡಲಾಗಿದೆ. ಈಗಾಗಲೇ ಹರಿದ್ವಾರಾ, ಕಾಶಿ ಸೇರಿದಂತೆ ಇತರೇ ಕಡೆ ಅಧ್ಯಯನ ಮಾಡುತ್ತಿದೆ ಎಂದು ಹೇಳಿದರು.
-
"ಕಾಂಗ್ರೆಸ್ನಿಂದ ದಲಿತ ದ್ರೋಹ: 14,200 ಕೋಟಿ ರೂ ಎಸ್ಸಿಎಸ್ಪಿ/ಟಿಎಸ್ಪಿ ಹಣ ಗ್ಯಾರಂಟಿ ಪಾಲು'' -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕಡೆ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಎಂದ ಡಿ.ಕೆ.ಶಿವಕುಮಾರ್ -
ಬೆಂಗಳೂರಿಗರಿಗೆ ಬಂಪರ್ ಗಿಫ್ಟ್: ನೀರಿನ ಬಿಲ್ ಮೇಲಿನ ಬಡ್ಡಿ ಶೇ.100ರಷ್ಟು ಮನ್ನಾ; ಡಿಕೆಶಿ ಮಹತ್ವದ ಘೋಷಣೆ -
ಬೆಂಗಳೂರಲ್ಲಿ 'ಹೊಸ ಪಾದಚಾರಿ ನೀತಿ': ನೋಂದಣಿ ಆಗದವರ ವ್ಯಾಪಾರಕ್ಕಿಲ್ಲ ಅವಕಾಶ: ಡಿಕೆ ಶಿವಕುಮಾರ್ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ












Click it and Unblock the Notifications