'ಚಿಕ್ಕಮಗಳೂರು-ತಿರುಪತಿ' ನೂತನ ರೈಲು ಕಾರ್ಯಾಚರಣೆ ಆರಂಭ: ನಿಲುಗಡೆ ನಿಲ್ದಾಣ, ಮಾರ್ಗ & ವೇಳಾಪಟ್ಟಿ, ವಿವರ
New Train: ಕರ್ನಾಟಕದ ಮಲೆನಾಡು ಪ್ರದೇಶಗಳಿಂದ ವಿವಿಧಗಳಿ ಯಾರೆಲ್ಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುತ್ತಾರೋ ಅವರಿಗೆಲ್ಲ ಸಿಹಿ ಸುದ್ದಿ ಸಿಕ್ಕಿದೆ. ಈಗಾಗಲೇ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು 'ಚಿಕ್ಕಮಗಳೂರು-ತಿರುಪತಿ' ಸಾಪ್ತಾಹಿಕ ರೈಲು (Chikmagalur -Tirupati Train) ಘೋಷಣೆ ಮಾಡಿದ್ದರು. ಸದ್ಯ ಈ ಮಾರ್ಗದಲ್ಲಿ ಸೇವೆ ಆರಂಭಕ್ಕೆ ದಿನಾಂಕ ಫಿಕ್ಸ್ ಮಾಡಲಾಗಿದೆ.
ಜುಲೈ 11ರಂದು ಶುಕ್ರವಾರ ಬೆಳಗ್ಗೆ ಚಿಕ್ಕಮಗಳೂರಿನಲ್ಲಿ ಈ 'ಚಿಕ್ಕಮಗಳೂರು-ತಿರುಪತಿ' ಸಾಪ್ತಾಹಿಕ ರೈಲು ಸೇವೆ ಚಾಲನೆ ದೊರೆಯಲಿದೆ. ಸಚಿವ ವಿ.ಸೋಮಣ್ಣ ಅವರು ಹೊಸ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಮಲೆನಾಡು ಭಾಗದಿಂದ ಆಂಧ್ರ ಪ್ರದೇಶಕ್ಕೆ ಈ ರೈಲು ಸಂಪರ್ಕ ಕಲ್ಪಿಸಲಿದೆ. ಈ ರೈಲು ಹಾದು ಹೋಗುವ ಮಾರ್ಗದ ನಾನಾ ಜಿಲ್ಲೆಗಳಿಗೆ ಸಾರಿಗೆ ಸೇವೆ ಜೊತೆಗೆ ವಿವಿಧ ರೀತಿಯಲ್ಲಿ ಅನುಕೂಲವಾಗಲಿದೆ.

ಈ ಮಾರ್ಗದಲ್ಲಿ ರೈಲು ಬಿಡುಗಡೆ ಕುರಿತು ಬಿಜೆಪಿ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ವಿ.ಸೋಮಣ್ಣ ಅವರು ಅಧಿಕಾರಿಗಳ ಜತೆ ಸಭೆ ನಡೆಸಿ ರೈಲು ಸಂಚಾರಕ್ಕೆ ಅನುಮೋದನೆ ದೊರೆಯುವಂತೆ ಮಾಡಿದರು. ಚಿಕ್ಕಮಗಳೂರಿನಿಂದ ತೆರಳುವ ರೈಲು ಸುಮಾರು 18 ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ರೈಲಿನ ಸಮಯ ವೇಳಾಪಟ್ಟಿ
ಇನ್ನೂ ವೇಳಾಪಟ್ಟಿ ನೋಡುವುದಾದರೆ, ಚಿಕ್ಕಮಗಳೂರು-ತಿರುಪತಿ ಸಾಪ್ತಾಹಿಕ ರೈಲು (17424) ಬೆಳಗ್ಗೆ ಸಂಚಾರ ಆರಂಭಿಸಲಿದೆ. ಅಂದು ಸಂಜೆ 5.30ಕ್ಕೆ ಮಲೆನಾಡಿನಿಂದ ಹರಡುವ ರೈಲು ಶನಿವಾರ ಬೆಳಗ್ಗೆ (7.40) ತಿರುಪತಿ ನಿಲ್ದಾಣ ತಲುಪಲಿದೆ. ಮರಳಿ ತಿರುಪತಿ -ಚಿಕ್ಕಮಗಳೂರು ಸಾಪ್ತಾಹಿಕ ರೈಲು (17423) ಗುರುವಾರ ರಾತ್ರಿ 09 ಗಂಟೆಗೆ ಹೊರಟು ಶುಕ್ರವಾರ ಬೆಳಗ್ಗೆ 10.30ಕ್ಕೆ ಚಿಕ್ಕಮಗಳೂರು ನಿಲ್ದಾಣಕ್ಕೆ ಬರಲಿದೆ.
ನಿಲುಗಡೆ ನಿಲ್ದಾಣಗಳು
ಈ ರೈಲು ಬೀರೂರು, ಕಡೂರು, ತಿಪಟೂರು, ಅರಸೀಕರೆ, ತುಮಕೂರು, ಎಸ್‌ಎಂವಿಟಿ ಬೆಂಗಳೂರು, ಕೆ.ಆರ್.ಪುರಂ, ವೈಟ್‌ಫಿಲ್ಡ್, ಬಂಗಾರಪೇಟೆ, ಚಿತ್ತೂರು, ಕಟ್ಟಾಡಿ, ಕುಪ್ಪಂ, ಚಿನ್ನಬಾಣಾವರ, ದೇವನೂರು, ಬಿಸಲೇಹಳ್ಳಿ ಸೇರಿದಂತೆ ಒಟ್ಟು ಹದಿನೆಂಟು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಮಲೆನಾಡಿನ ಜನರಲ್ಲಿ ಸಂತಸ
ಚಿಕ್ಕಮಗಳೂರು-ತಿರುಪತಿ ರೈಲು ಸಂಚಾರದಿಂದಾಗಿ ಮಲೆನಾಡಿನ ಜನರು ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಇಲ್ಲಿನ ಜನರು ಫುಲ್ ಖುಷ್ ಆಗಿದ್ದಾರೆ. ಈ ಮಾರ್ಗದಲ್ಲಿ ಬರುವ ಜಿಲ್ಲೆಗಳ ವ್ಯಾಪ್ತಿಯ ಸಾವಿರಾರು ಜನರಿಗೆ ಈ ಹೊಸ ರೈಲು ಓಡಾಟ ಸಾಕಷ್ಟು ಅನುಕೂಲ ಒದಗಿಸಲಿದೆ.












Click it and Unblock the Notifications