Get Updates
Get notified of breaking news, exclusive insights, and must-see stories!

NEET Results 2025: ನೀಟ್ ಪರೀಕ್ಷೆ ಫಲಿತಾಂಶ ಬಿಡುಗಡೆ ಅಪ್ಡೇಟ್! ವೆಬ್‌ಸೈಟ್ ಲಿಂಕ್, ಫಲಿತಾಂಶ ಡೌನ್‌ಲೋಡ್ ವಿವರ

ಬೆಂಗಳೂರು, ಮೇ 05: ಕರ್ನಾಟಕ ಸೇರಿದಂತೆ ಭಾರತದ್ಯಂತ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET Exam 2025) ನಡೆಯುತ್ತಿವೆ. ಕರ್ನಾಟಕದಲ್ಲೂ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಪರೀಕ್ಷೆ ಬರೆದಿದ್ದರು. ಹುಬ್ಬಳ್ಳಿ ಭಾಗದಲ್ಲಿ ಅಲ್ಲಲ್ಲಿ ಪರೀಕ್ಷಾರ್ಥಿಗಳು ಮತ್ತವರ ಪೋಷಕರು ಸಾರಿಗೆ ತೊಂದರೆ ಅನುಭವಿಸಿದರು. ಕೂಡಲೇ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಹೆಚ್ಚುವರಿ ಬಸ್‌ಗಳನ್ನು ಬಿಡಲಾಯಿತು.

ಹುಬ್ಬಳ್ಳಿಯಿಂದ ಕೇಂದ್ರಕ್ಕೆ ಆಗಮಿಸಿದ್ದ ಪರೀಕ್ಷಾರ್ಥಿಗಳು ಸಾರಿಗೆ ಸಮಸ್ಯೆ ಎದುರಿಸದಂತೆ ಘಟಕವು 12 ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿತು. ನೀಟ್ ಪರೀಕ್ಷೆಗೆ ಹಾಜರಾದ ಪರೀಕ್ಷಾರ್ಥಿಗಳು, ಪೋಷಕರು ಹಾಗೂ ಇತರೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದ ಕಾರಣದಿಂದಾಗಿ ನಿತ್ಯದ ಬಸ್ಸುಗಳ ಜೊತೆಗೆ ಹೆಚ್ಚುವರಿ ಬಸ್ ಗಳ ಕಾರ್ಯಾಚರಣೆ ಮಾಡಲಾಯಿತು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.

NEET Exam Result 2025 When will Announce How to check in online official link Know more

ರವಿವಾರ ಮೇ 4 ರಂದು ನಡೆದ ನೀಟ್ ಪರೀಕ್ಷೆಗಾಗಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಿಗದಿಪಡಿಸಿದ್ದ ಪರೀಕ್ಷಾ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷಾರ್ಥಿಗಳು ಹಾಗೂ ಅವರ ಪೋಷಕರು ಆಗಮಿಸಿದ್ದರು. ಇದರೊಂದಿಗೆ ರವಿವಾರವಾದ್ದರಿಂದ ಬೆಂಗಳೂರು ಮತ್ತು ಇತರ ಕಡೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ನಿತ್ಯದ ಬಸ್ಸುಗಳೆಲ್ಲ ಭರ್ತಿಯಾಗಿದ್ದವು. ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ 3 ವೋಲ್ವೊ ಎಸಿ ಬಸ್ಸುಗಳು ಹಾಗೂ 9 ವೇಗದೂತ ಬಸ್ಸುಗಳು ಸೇರಿದಂತೆ ಒಟ್ಟು 12 ಹೆಚ್ಚುವರಿ ಬಸ್ಸುಗಳನ್ನು ಕಾರ್ಯಾಚರಣೆ ಮಾಡಿವೆ.

ವಿಭಾಗೀಯ ಕಚೇರಿಯ ಹಿರಿಯ ಅಧಿಕಾರಿಗಳು, ಡಿಪೋ ಮ್ಯಾನೇಜರ್ ಗಳು ಮತ್ತು ಮೇಲ್ವಿಚಾರಕ ಸಿಬ್ಬಂದಿಗಳು ತಡರಾತ್ರಿಯವರೆಗೆ ಬಸ್ ನಿಲ್ದಾಣದಲ್ಲಿ ಹಾಜರಿದ್ದು ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಬಸ್ಸುಗಳ ಹೊಂದಾಣಿಕೆ ಮಾಡಿ ಕಳುಹಿಸಲಾಯಿತು ಎಂದು ಅವರು ತಿಳಿಸಿದರು.

ಮೇ 04ಕ್ಕೆ ನೀಟ್ ಪರೀಕ್ಷೆ: ಫಲಿತಾಂಶ ಯಾವಾಗ?

ಪದವಿ ವೈದ್ಯಕೀಯ ವಿವಿಧ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯುವ ಅಭ್ಯರ್ಥಿಗಳಿಗೆ ಈ ನೀಟ್ ಪರೀಕ್ಷೆ ಮೇ 04ರಂದು ಭಾನುವಾರ ನಡೆದಿದೆ. ಕರ್ನಾಟಕದಲ್ಲಿ 381 ಪರೀಕ್ಷಾ ಕೇಂದ್ರಗಳಲ್ಲಿ 1.49 ಲಕ್ಷ ಪರೀಕ್ಷಾರ್ಥಿಗಳು ನೀಟ್ ಪರೀಕ್ಷೆಯನ್ನು ಎದುರಿಸಿದ್ದಾರೆ. ಸದ್ಯ ಅವರೆಲ್ಲ ಮುಂದಿನ ಕೆಲವೇ ದಿನಗಳಲ್ಲಿ ಪ್ರಕಟಗೊಳ್ಳಲಿರುವ ನೀಟ್ ಪರೀಕ್ಷೆಯ ಫಲಿತಾಂಕ್ಕಾಗಿ ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ, ಪರೀಕ್ಷೆ ಬರೆದ 30 ದಿನಗಳ ಆಸು ಪಾಸಿನಲ್ಲಿ ಬಹುಶಃ ಮುಂದಿನ ಜೂನ್ 14ರ ಹೊತ್ತಿಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.

NEET UG Exam Result 2025: ದಿನಾಂಕ ಪರಿಶೀಲನೆ

NEET ಪರೀಕ್ಷೆ ಬರೆದ ಅಭ್ಯರ್ಥಿಗಳು ಅಧಿಕೃತ ಜಾಲತಾಣವಾದ neet.nta.nic.in ನಲ್ಲಿ ಫಲಿತಾಂಶ ಪರಿಶೀಲಿಸಬಹುದು. ಅದರ ಪ್ರವೇಶಕ್ಕಾಗಿ ನೀವು ನಿಮ್ಮ ಪರೀಕ್ಷೆ ಅರ್ಜಿ ಸಂಖ್ಯೆ, ಪಾಸ್‌ವರ್ಡ್ ಬಳಬೇಕು. ನಂತರ ಫಲಿತಾಂಶ ಡೌನ್‌ಲೋಡ್ ಮಾಡಿಕೊಳ್ಳಬೇಕು.

* ಪರಿಶೀಲನೆ ವಿಧಾನ ನೋಡುವುದಾದರೆ ಮೊದಲು ನೀವು neet.nta.nic.in ಗೇ ಭೇಟಿ ನೀಡಬೇಕು.

* ನಂತರ ಅಲ್ಲಿ ಕಾಣವು NEET 2025 ಸ್ಕೋರ್‌ಕಾರ್ಡ್ ಪಿಡಿಎಫ್ ಲಿಂಕ್ ಅನ್ನು ಆಯ್ಕೆ ಮಾಡಿಕೊಳ್ಳಿ.

* ಲಾಗಿನ್‌ಗೆ ಅಗತ್ಯವಿರುವ ರುಜುವಾತುಗಳಾಗಿ ಅರ್ಜಿ ಸಂಖ್ಯೆ, ಪಾಸ್‌ವರ್ಡ್ ಬಳಸಿ

* NEET ಸ್ಕೋರ್‌ಕಾರ್ಡ್ 2025 ಪಿಡಿಎಫ್ ಡೌನ್‌ಲೋಡ್‌ಗೆ ಕೇಳುತ್ತದೆ.

* NEET UG ಸ್ಕೋರ್‌ಕಾರ್ಡ್ 2025 ಪಿಡಿಎಫ್ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ. ಭವಿಷ್ಯದ ಉಪಯೋಗಕ್ಕಾಗಿ ತೆಗೆದಿಟ್ಟುಕೊಳ್ಳಿ.

* ನಿಮಗೆ ಹೆಚ್ಚಿನ ಮಾಹಿತಿ ಅದೇ ಅಧಿಕೃತ ವೆಬ್‌ಸೈಟ್- neet.nta.nic.in ನಲ್ಲಿಯೇ ಸಿಗಲಿದೆ...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+