ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ?: ಮಾಜಿ ಸಚಿವ ಹೇಳಿದ್ದೇನು?

N Mahesh, Lok Sabha Election 2024: ಬೆಂಗಳೂರು,ಡಿಸೆಂಬರ್‌ 26: 2024 ರ ಲೋಕಸಭಾ ಚುಣಾವಣೆಗೆ ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಈ ಬಾರೀ ಬಿಜೆಪಿಯಲ್ಲಿ 13 ಜನ ಹಾಲಿ ಸಂಸದರಿಗೆ ಟಿಕೆಟ್‌ ಸಿಗಲ್ಲ ಎಂಬ ವರದಿಯಾಗಿದ್ದು, ಕೆಲ ಸಂಸದರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಹೌದು, ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಸೇರಿದಂತೆ ಚಾಮರಾಜನಗರ ಲೋಕಸಭಾ ಕ್ಷೇತ್ರ ಸಂಸದ ಶ್ರೀನಿವಾಸಪ್ರಸಾದ್ ಸಹ ಚುನಾವಣಾ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದ್ದು, ಇದೀಗ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಚಾಮರಾಜನಗರ ಕ್ಷೇತ್ರದಿಂದ ಮಾಜಿ ಸಚಿವ ಮತ್ತು ನೂತನ ರಾಜ್ಯ ಉಪಾಧ್ಯಕ್ಷ ಕೊಳ್ಳೇಗಾಲ ಮಹೇಶ್ ಸ್ಪರ್ಧೆ ಮಾಡುತ್ತಾರಾ ಎಂಬ ಮಾತು ಕೇಳಿ ಬಂದಿದೆ.

N Mahesh Gives Clarification About Contest In Upcoming Lok Sabha Elections

ಇನ್ನೂ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧೆ ನಡೆಸುವ ಕುರಿತು ಮಾಧ್ಯಮಗಳ ಜೊತೆಗೆ ಎನ್‌ ಮಹೇಶ್‌ ಮಾತನಾಡಿ, ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ನಾನೇನೂ ಆಕಾಂಕ್ಷಿ ಅಲ್ಲ. ಕೇಂದ್ರದ ವರಿಷ್ಠರು ತೀರ್ಮಾನ ಮಾಡಿದರೆ ಅವರ ತೀರ್ಮಾನಕ್ಕೆ ಬದ್ಧನಾಗಿರುವೆ. ಚಾಮರಾಜನಗರ ಲೋಕಸಭಾ ಕ್ಷೇತ್ರ ಶ್ರೀನಿವಾಸಪ್ರಸಾದ್ ಅವರು ಪ್ರತಿನಿಧಿಸುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಬಿಜೆಪಿ ಖಚಿತವಾಗಿ ಗೆಲ್ಲಲಿದೆ ಎಂದು ಹೇಳಿದರು.

2047ರವೇಳಗೆ ಭಾರತ ಅತ್ಯಂತ ಅಭಿವೃದ್ಧಿ ಹೊಂದಿದ ದೇಶ ಎನಿಸಬೇಕೆಂಬ ಸಂಕಲ್ಪಕ್ಕೆ ಪ್ರಥಮ ಹೆಜ್ಜೆಯಾಗಿ 2024ರ ಚುನಾವಣೆ ಬರಲಿದೆ. ಈ ಚುನಾವಣೆಯಲ್ಲಿ ಮೋದಿಜಿ ಟೀಂ ಗೆಲ್ಲಿಸಿ ಮತ್ತೆ ಎನ್‍ಡಿಎ, ಬಿಜೆಪಿ ಸರಕಾರ ರಚನೆ ಆಗಬೇಕೆಂಬ ಸಂಕಲ್ಪ ನಮ್ಮದು ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಟೀಂ ಬಿಜೆಪಿ ರಚನೆ ಆಗಿದೆ. ನನ್ನನ್ನು ಚಾಮರಾಜನಗರ ಭಾಗದಿಂದ ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಿದ್ದಾರೆ. ರಾಜ್ಯಾಧ್ಯಕ್ಷರು, ರಾಜ್ಯ- ಕೇಂದ್ರದ ನಾಯಕರಿಗೆ ಜಿಲ್ಲೆಯ, ರಾಜ್ಯದ ಜನತೆಯ ಪರವಾಗಿ ಕೃತಜ್ಞತೆಗಳು ಎಂದು ಮಾಜಿ ಸಚಿವ ಕೊಳ್ಳೇಗಾಲ ಮಹೇಶ್ ಅವರು ತಿಳಿಸಿದರು. ಟೀಂ ಬಿಜೆಪಿ, ಸಾಮಾಜಿಕ, ಭೌಗೋಳಿಕ, ಬಹಳ ವ್ಯವಸ್ಥಿತವಾಗಿ ರಚನೆ ಆಗಿದೆ ಎಂದು ವಿಶ್ಲೇóಷಿಸಿದರು. ಯಾವ ಗೊಂದಲವೂ ಇಲ್ಲ; ಈ ಟೀಂ 2024ರ ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ತಂಡಕ್ಕೆ ಇನ್ಯಾರನ್ನು ನೇಮಿಸಬೇಕೆಂಬ ವಿಷಯ ಸೂಕ್ತ ಸಮಯದಲ್ಲಿ ತೀರ್ಮಾನ ಆಗಲಿದೆ. ಚುನಾವಣೆ ವೇಳೆಗೆ ಗಟ್ಟಿಯಾದ ಟೀಂ ಫೀಲ್ಡಿಗೆ ಇಳಿಯಲಿದೆ. ನರೇಂದ್ರ ಮೋದಿಯವರ ವಿಕಸಿತ ಭಾರತ ಕಲ್ಪನೆಗೆ, ಶಕ್ತಿ ತುಂಬಲಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+