ಮೈಸೂರು ರಾಜವಂಶಸ್ಥರಿಗೆ ಅಲಮೇಲಮ್ಮ ಶಾಪ ಇನ್ನೂ ವಿಮೋಚನೆಯಾಗಿಲ್ವಾ?

Posted By:
Subscribe to Oneindia Kannada
   ಅಲಮೇಲಮ್ಮನ 400 ವರ್ಷಗಳ ಶಾಪದಿಂದ ಮೈಸೂರಿನ ರಾಜವಂಶಸ್ಥರು ಮುಕ್ತರಾದ್ರಾ? | Oneindia Kannada

   ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಬುಧವಾರ (ಡಿ 7) ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಯದುವಂಶಕ್ಕೆ ಗಂಡು ಮಗುವಿನ ಆಗಮನದಿಂದ ಅಂಬಾ ವಿಲಾಸ ಅರಮನೆಯಲ್ಲಿ ಸಂಭ್ರಮವೋ.. ಸಂಭ್ರಮ..

   ಮೈಸೂರು ಅರಸರಿಗೆ ಅಲಮೇಲಮ್ಮನ ಶಾಪ ವಿಮೋಚನೆ ಆಗಿದೆಯಾ, ಇಲ್ಲಿದೆ ಉತ್ತರ

   ಹಾಗಾದರೆ, ಮೈಸೂರು ರಾಜ ಮನೆತನದ ಮೇಲಿದ್ದ ಅಲಮೇಲಮ್ಮನ ಶಾಪ ವಿಮೋಚನೆಯಾದಂತಾಗಿದೆಯೇ? ಮೈಸೂರು ಅರಸರ ಇತಿಹಾಸದ ಪುಟಗಳನ್ನೊಮ್ಮೆ ಅವಲೋಕಿಸಿದರೆ, ಅಲಮೇಲಮ್ಮನ ಶಾಪದಿಂದ ಇನ್ನೂ ರಾಜಮನೆತನ ವಿಮೋಚನೆಗೊಂಡಿಲ್ಲ.

   ಗಂಡು ಮಗುವಿಗೆ ಜನ್ಮವಿತ್ತ ಮೈಸೂರು ಯುವರಾಣಿ ತ್ರಿಷಿಕಾ ಕುಮಾರಿ

   ಮೈಸೂರು ರಾಜವಂಶಸ್ಥರ ಮೇಲಿರುವ ಶಾಪ ದತ್ತುಪುತ್ರರ ಮೇಲೆ ಎಂದೂ ತಟ್ಟಿಲ್ಲ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನದ ನಂತರ, ಯದುವೀರ್ ಅವರನ್ನು ದತ್ತು ತೆಗೆದುಕೊಂಡು, ಮೈಸೂರು ಸಂಸ್ಥಾನದ 27ನೇ ಮಹಾರಾಜರನ್ನಾಗಿ ಪಟ್ಟಾಭಿಷೇಕ ಮಾಡಲಾಗಿತ್ತು.

   ಅಲಮೇಲಮ್ಮನ ಶಾಪ ವಿಮುಕ್ತಿ, ಮೈಸೂರು ರಾಜ ಮನೆತನದಲ್ಲಿ ಸಂತಾನ ಭಾಗ್ಯ

   ಯದುವೀರ್ ದಂಪತಿಗಳಿಗೆ ಬುಧವಾರ ಹುಟ್ಟಿದ ಮಗುವಿಗೆ ಸಂತಾನಪ್ರಾಪ್ತಿಯಾದಾಗ ಮಾತ್ರ ಅಲಮೇಲಮ್ಮನ ಶಾಪ ವಿಮೋಚನೆಯಾದಂತಾಗುತ್ತದೆ ಎನ್ನುತ್ತದೆ ಮೈಸೂರು ರಾಜಮನೆತನದ ಇತಿಹಾಸದ ಪುಟಗಳು.

   ಮೈಸೂರು ದಸರಾದಲ್ಲಿ ಅಲಮೇಲಮ್ಮನಿಗೇಕೆ ಪೂಜೆ?

   2006ರಲ್ಲಿ ಅಂದಿನ ಮೈಸೂರು ಮಹಾರಾಜ, ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ಕುಟುಂಬಕ್ಕಿರುವ ಶಾಪದ ಬಗ್ಗೆ ಹೇಳಿಕೆಯನ್ನು ನೀಡಿದ್ದರು. ಅಂದಿನಿಂದ ಅಲಮೇಲಮ್ಮನ ಶಾಪದ ಬಗ್ಗೆ ಹೆಚ್ಚಿನ ಚರ್ಚೆಗಳು ಆರಂಭವಾಯಿತು.

   ಏನಿದು ಅಲಮೇಲಮ್ಮನ ಶಾಪ, ಯದುವೀರ್ ದಂಪತಿಗಳಿಗೆ ಮಕ್ಕಳಾದರೂ ಶಾಪ ವಿಮೋಚನೆಯಾಕೆ ಆಗಿಲ್ಲ, ಮುಂದೆ ಓದಿ..

   ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಹೇಳಿದ್ದು

   ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಹೇಳಿದ್ದು

   ತಮ್ಮ ವಂಶಸ್ಥರಿಗೆ ಅಲಮೇಲಮ್ಮನ ಶಾಪವಿದೆ, ಅಲಮೇಲಮ್ಮನಿಗೆ ದೇವರ ಸ್ಥಾನ ಸಿಗದೇ ಇನ್ನೂ ಆಕೆ ಆತ್ಮವಾಗಿಯೇ ಉಳಿದಿದ್ದಾಳೆ. ಅಲಮೇಲಮ್ಮನ ಆತ್ಮದ ಜೊತೆ ನಾನು ಕೆಲವು ವರ್ಷಗಳಿಂದ ಸಂಪರ್ಕದಲ್ಲಿದ್ದೇನೆ ಮತ್ತು ನನಗೆ ಇಂದಿಗೂ ಆಕೆ ಅನೇಕ ಸೂಚನೆಗಳನ್ನು ನೀಡುತ್ತಾಳೆ, ಅವಳಿಗಾಗಿ ಅರಮನೆ ಆವರಣದಲ್ಲಿ ಗುಡಿಯನ್ನು ಕಟ್ಟಿದ್ದೇನೆಂದು ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಹೇಳಿದ್ದರು.

   ಅಲಮೇಲಮ್ಮನಿಗೆ ಒಡೆಯರ್ ಕುಟುಂಬದ ರಾಜಾಜ್ಞೆ

   ಅಲಮೇಲಮ್ಮನಿಗೆ ಒಡೆಯರ್ ಕುಟುಂಬದ ರಾಜಾಜ್ಞೆ

   ಅಲಮೇಲಮ್ಮ ತನ್ನಲ್ಲಿದ್ದ ಆಭರಣಗಳನ್ನು ಹಬ್ಬ ಹರಿದಿನಗಳ ಸಂದರ್ಭದಲ್ಲಿ ದೇವರ ಅಲಂಕಾರಕ್ಕೆ ನೀಡಿ ನಂತರ ವಾಪಸ್ ಪಡೆಯುತ್ತಿದ್ದಳು. ಇದನ್ನರಿತ ನಮ್ಮ ವಂಶಸ್ಥರು ಆ ಆಭರಣಗಳನ್ನು ತಮ್ಮದಾಗಿಸಿ ಕೊಳ್ಳಲು ಸಂಚು ರೂಪಿಸಿದ್ದರು. ಆಭರಣವನ್ನು ತಮ್ಮ ಸುಪರ್ದಿಗೆ ನೀಡಲು ಒಡೆಯರ್ ಕುಟುಂಬ ಅಲಮೇಲಮ್ಮನಿಗೆ ರಾಜಾಜ್ಞೆ ಹೊರಡಿಸುತ್ತಾರೆ. ಜೊತೆಗೆ, ಆಭರಣಗಳನ್ನು ವಶ ಪಡಿಸಿಕೊಳ್ಳಲು ರಾಜಭಟರನ್ನು ಕಳುಹಿಸುತ್ತಾರೆ.

   ಕಾವೇರಿ ನದಿಗೆ ಹಾರಿ ಪ್ರಾಣಬಿಡುವ ಅಲಮೇಲಮ್ಮ

   ಕಾವೇರಿ ನದಿಗೆ ಹಾರಿ ಪ್ರಾಣಬಿಡುವ ಅಲಮೇಲಮ್ಮ

   ಆದರೆ ಆಭರಣಗಳನ್ನು ಮೈಸೂರು ಒಡೆಯರ್ ಕುಟುಂಬಕ್ಕೆ ನೀಡಲು ಒಪ್ಪದ ಅಲಮೇಲಮ್ಮ, ವಜ್ರದ ಮೂಗುತಿಯನ್ನು ಎಸೆದು "ತಲಕಾಡು ಮರಳಾಗಲಿ, ಮಾಲಿಂಗಿ ಮಡುವಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ' ಎಂದು ಶಾಪ ಹಾಕಿ ಕಾವೇರಿ ನದಿಗೆ ಹಾರಿ ಸಾವನ್ನಪ್ಪುತ್ತಾಳೆ" ಎಂದು ಒಡೆಯರು, ಅಲಮೇಲಮ್ಮನ ಶಾಪದ ಬಗ್ಗೆ ವಿವರಿಸಿದ್ದರು.

   ದತ್ತು ಪಡೆದುಕೊಂಡವರಿಗೆ ಸಂತಾನದ ತೊಂದರೆಯಿಲ್ಲ

   ದತ್ತು ಪಡೆದುಕೊಂಡವರಿಗೆ ಸಂತಾನದ ತೊಂದರೆಯಿಲ್ಲ

   ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್, ಮೈಸೂರು ರಾಜಮನೆತನದ 26ನೇ ಮಹಾರಾಜರು ಮತ್ತು ಇದುವರೆಗಿನ ಇತಿಹಾಸವನ್ನು ಅವಲೋಕಿಸಿದರೆ, ರಾಜವಂಶಸ್ಥರು ದತ್ತು ಪಡೆದುಕೊಂಡವರಿಗೆ ಸಂತಾನದ ತೊಂದರೆಯಾದ ಉದಾಹರಣೆಗಳಿಲ್ಲ. ಮೈಸೂರು ಸಾಮ್ರಾಜ್ಯದ ಒಂಬತ್ತನೇ ಅರಸರವರೆಗೂ ಮಕ್ಕಳಾಗಿವೆ.

   ಯದುವೀರ್ ದಂಪತಿಗಳಿಗೆ ಹುಟ್ಟಿದ ಮಗುವಿಗೆ ಸಂತಾನಪ್ರಾಪ್ತಿ

   ಯದುವೀರ್ ದಂಪತಿಗಳಿಗೆ ಹುಟ್ಟಿದ ಮಗುವಿಗೆ ಸಂತಾನಪ್ರಾಪ್ತಿ

   ಮೈಸೂರು ಸಂಸ್ಥಾನದ 27ನೇ ಮಹಾರಾಜ ಯದುವೀರ್ ದಂಪತಿಗಳಿಗೆ ಹುಟ್ಟಿದ ಮಗುವಿಗೆ ಸಂತಾನಪ್ರಾಪ್ತಿಯಾದರೆ, ಅಲಮೇಲಮ್ಮನ ಶಾಪ ವಿಮೋಚನೆಯಾದಂತೆ ಎನ್ನುವುದು ಇತಿಹಾಸದ ಪುಟವನ್ನು ತಿರುವಿದರೆ ಸ್ಪಷ್ಟವಾಗುತ್ತದೆ. ಇತಿಹಾಸತಜ್ಞ ಎ ವೀರಪ್ಪ ಅವರ ಪ್ರಕಾರ, ಅಲಮೇಲಮ್ಮನ ಶಾಪ 400ವರ್ಷಗಳ ಹಿಂದಿನದ್ದು. 1612ರಲ್ಲಿ ಅಂದಿನ ಅರಸ ರಾಜಾ ಒಡೆಯರ್ ಕಾಲದ ಶಾಪವಿದಂತೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Mysuru royals get a new heir: King Yaduveer Wadiyar and Trishika blessed with a baby boy. What about 400 years old Alamellama curse on Mysuru royal family, "Wadiyars of Mysore not have children for eternity".

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ