ಅಕ್ಕಪಕ್ಕದಲ್ಲೇ ಕಾಣಿಸಿಕೊಂಡ ಬಿಎಸ್‌ವೈ ಮತ್ತು ಈಶ್ವರಪ್ಪ

Written By:
Subscribe to Oneindia Kannada

ಬೆಂಗಳೂರು, ಜುಲೈ, 04: ಭಿನ್ನಮತದ ಗೂಡಾಗಿರುವ ಬಿಜೆಪಿಯ ಶಾಸಕಾಂಗ ಸಭೆ ಸೋಮವಾರ ಮಲ್ಲೇಶ್ವರಂ ಕಚೇರಿಯಲ್ಲಿ ನಡೆಯಿತು. ಮುನಿಸಿಕೊಂಡಿದ್ದ ಕೆ ಎಸ್ ಈಶ್ವರಪ್ಪ ಸಭೆಯಲ್ಲಿ ಲವಲವಿಕೆಯಿಂದಲೇ ಭಾಗವಹಿಸಿದ್ದು ವಿಶೇಷ.

ಒಂದೇ ವೇದಿಕೆಯನ್ನು ಹಂಚಿಕೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ಭಿನ್ನಮತದ ಕಹಳೆ ಮೊಳಗಿಸಿದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ಇಬ್ಬರು ನಗು ಮೊಗದಿಂದಲೇ ಪರಸ್ಪರ ಅಕ್ಕ ಪಕ್ಕವೇ ಕುಳಿತು ಸಭೆಯಲ್ಲಿ ಪಾಲ್ಗೊಂಡರು.[ಕಾಂಗ್ರೆಸ್, ಬಿಜೆಪಿಗೆ ಬಿಸಿ ತುಪ್ಪವಾದ ಭಿನ್ನಮತ!]

bjp

ಡ್ರಗ್ಸ್ ಮಾಫಿಯಾ, ಅಕ್ರಮ ಮರಳು ಗಣಿಗಾರಿಕೆ, ಕಾನೂನು ಸುವ್ಯವಸ್ಥೆ ಅಭದ್ರತೆ ಮುಂತಾದ ವಿಚಾರಗಳ ಬಗ್ಗೆ ಸದನದಲ್ಲಿ ಹೋರಾಟ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಯಿತು. ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಸಭೆ ನಡೆಯಿತು.[ಈಶ್ವರಪ್ಪನ ಮೂಲೆಗೆ ತಳ್ಳಿ ಒಗ್ಗೂಡಿದ ಬಿಜೆಪಿ ನಾಯಕರು]

ಸಭೆಯ ನಂತರ ಮಾತನಾಡಿದ ಬಿಜೆಪಿ ನಾಯಕ ಸುರೇಶ್ ಕುಮಾರ್ "ಪಕ್ಷದಲ್ಲಿ ಭಿನ್ನಮತದ ಲವಲೇಶವೂ ಇಲ್ಲ ಎಂದು ಹೇಳಿದರು. ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ನೇಮಕ ಸರಿಯಾಗಿಲ್ಲ. ಚರ್ಚೆ ಮಾಡಿ ನೇಮಕ ಮಾಡಲಾಗಿಲ್ಲ ಎಂದು ಕೆ ಎಸ್ ಈಶ್ವರಪ್ಪ ಬಣ ಭಿನ್ನಮತದ ಧ್ವನಿ ಎತ್ತಿತ್ತು.

bjp

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: Karnataka BJP leaders conducted a meeting in Malleshwaram office on 4 July, 2016 regarding Assembly Monsoon session. BJP decided to fight BDA corruption, sand mafia and other things, BJP leader Suresh Kumar informed after meeting.
Please Wait while comments are loading...