ಕೊಡಗಿಗೆ ಇ-ಟಾಯ್ಲೆಟ್ಸ್ ಕಳಿಸಿಕೊಡಿ ಪ್ಲೀಸ್: ಸಿಟಿ ರವಿ ಮನವಿ
ಕೊಡಗು, ಆಗಸ್ಟ್ 20: ಕೊಡಗಿನ ನಿರಾಶ್ರಿತರಿಗಾಗಿ ಇ-ಟಾಯ್ಲೆಟ್‌ಗಳನ್ನು ಕಳಿಸಿಕೊಡುವಂತೆ ಬಿಜೆಪಿ ಶಾಸಕ ಸಿ.ಟಿ.ರವಿ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.
ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ, ಸ್ಥಳೀಯ ಶಾಸಕರು, ವಿಧಾನಪರಿಷತ್ ಸದಸ್ಯರು, ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿರುವ ಅವರು, ನಿರಾಶ್ರಿತರ ಶಿಬಿರಗಳಿಗೆ ಶೀಘ್ರವಾಗಿ ಇ-ಟಾಯ್ಲೆಟ್‌ನ ಅವಶ್ಯಕತೆ ಇದೆ ಎಂಬುದನ್ನು ಮನಗೊಂಡು ಮನವಿ ಮಾಡಿದ್ದಾರೆ.
Flood affected Kodagu has decent amount of relief materials.
— C.T.Ravi (@CTRavi_BJP) August 19, 2018
Urgent requirement is for E-Toilets. I humbly appeal to Citizens to provide them to the Shelters in the flood affected Areas. pic.twitter.com/SdFXIgffbU
ಬಟ್ಟೆ, ಆಹಾರ, ದಿನ ಬಳಕೆ ವಸ್ತುಗಳನ್ನು ಭಾರಿ ಪ್ರಮಾಣದಲ್ಲಿ ಜನ ಕಳುಹಿಸಿಕೊಟ್ಟಿದ್ದಾರೆ, ಆದರೆ ಈಗ ನಿರಾಶ್ರಿತರ ಶಿಬಿರಗಳಿಗೆ ತ್ವರಿತವಾಗಿ ಇ-ಟಾಯ್ಲೆಟ್‌ಗಳು ಬೇಕಿವೆ, ಬೆಂಗಳೂರಿನ ಗೆಳೆಯರು ಕೂಡಲೇ ಇವುಗಳನ್ನು ಕಳುಹಿಸಿಕೊಡುವ ಉದಾರತೆ ತೋರಬೇಕು ಎಂದು ಹೇಳಿದ್ದಾರೆ.

32 ನಿರಾಶ್ರಿತರ ಶಿಬಿರಗಳು ಕೊಡಗಿನಲ್ಲಿದ್ದು, ಪ್ರತಿ ಶಿಬಿರಕ್ಕೆ ಕನಿಷ್ಟ ಐದಾದರೂ ಇ-ಟಾಯ್ಲೆಟ್ ಅವಶ್ಯಕತೆ ಇದೆ ಎಂದು ರವಿ ಅವರ ಮನವಿ. ಜನರು ಬಹಿರ್ದಸೆಗೆ ಹೋಗಲು ತೊಂದರೆ ಪಡುವುದನ್ನು ಇದರಿಂದ ತಡೆಯಬಹುದು ಎಂಬುದು, ಅದರಿಂದ ಉಂಟಾಗಬಹುದ ಆರೋಗ್ಯ ಸಮಸ್ಯೆಗಳನ್ನೂ ಇದರಿಂದ ತಡೆಯಬಹುದು ಎಂಬುದು ಅವರ ಕಾಳಜಿ.











Click it and Unblock the Notifications