ಹೆಲಿಕಾಪ್ಟರ್ ಅವಘಡದಿಂದ ಸಿದ್ದು ಪಾರಾದದ್ದು ಹೇಗೆ?
ಬೆಂಗಳೂರು, ಜ. 10 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಬೆಂಕಿ ಕಾಣಿಸಿಕೊಂಡು ಕ್ಷಣಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಭದ್ರತಾ ಸಿಬ್ಬಂದಿ ಸಿಎಂ ಅವರನ್ನು ಹೆಲಿಕಾಪ್ಟರ್‌ನಿಂದ ಕೆಳಗಿಳಿಸಿ ಅನಾಹುತ ತಪ್ಪಿಸಿದರು.
ಶನಿವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಬೇಕಿತ್ತು. ಇದಕ್ಕಾಗಿ ಎಚ್‌ಎಎಲ್ ಏರ್‌ಪೋರ್ಟ್‌ಗೆ ತೆರಳಿ ಸಿದ್ದರಾಮಯ್ಯ ಅವರು ಹೆಲಿಕಾಪ್ಟರ್ ಏರಿದ್ದರು. ಆಗ ಹೆಲಿಕಾಪ್ಟರ್ ಸೈಲೆನ್ಸರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. [ಸಿದ್ದರಾಮಯ್ಯ ಹೆಲಿಕಾಪ್ಟರ್ ನಲ್ಲಿ ಬೆಂಕಿ]
ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿ ಮತ್ತು ಹೆಲಿಕಾಪ್ಟರ್‌ನ ಸಿಬ್ಬಂದಿ ತಕ್ಷಣ ಇದನ್ನು ಗಮನಿಸಿ ಸಿಎಂ ಸಿದ್ದರಾಮಯ್ಯ ಮತ್ತು ಹೆಲಿಕಾಪ್ಟರ್‌ನಲ್ಲಿದ್ದವರನ್ನು ಕೆಳಗಿಳಿಸಿದರು. ಇದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಯಿತು. ಕೆಲವು ಕ್ಷಣ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ವಿಶ್ರಾಂತಿ ಪಡೆದ ಸಿಎಂ ರಸ್ತೆ ಮಾರ್ಗದ ಮೂಲಕ ಮೈಸೂರಿಗೆ ತೆರಳಿದರು. ಸಿಎಂ ಹೆಲಿಕಾಪ್ಟರ್ ಚಿತ್ರಗಳು ಇಲ್ಲಿವೆ

ಭದ್ರತಾ ಸಿಬ್ಬಂದಿಯಿಂದಾಗಿ ತಪ್ಪಿದ ಅನಾಹುತ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಬೆಂಕಿ ಕಾಣಿಸಿಕೊಂಡು ಕ್ಷಣಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಭದ್ರತಾ ಸಿಬ್ಬಂದಿ ಸಿಎಂ ಅವರನ್ನು ಹೆಲಿಕಾಪ್ಟರ್‌ನಿಂದ ಕೆಳಗಿಳಿಸಿ ಅನಾಹುತ ತಪ್ಪಿಸಿದರು.

ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಘಟನೆ
ಶನಿವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಪ್ರಯಾಣಿಸಬೇಕಿತ್ತು. ಅದಕ್ಕಾಗಿ ಬೆಂಗಳೂರಿನ ಎಚ್‌ಎಎಲ್ ಏರ್‌ಪೋರ್ಟ್‌ಗೆ ತೆರಳಿ ಹೆಲಿಕಾಪ್ಟರ್ ಏರಿದ್ದರು.

ದೆಹಲಿ ಮೂಲದ ಕಂಪನಿ ಹೆಲಿಕಾಪ್ಟರ್
ಸಿಎಂ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‍ನಲ್ಲಿ ನವದೆಹಲಿಯ ಕಂಪನಿಗೆ ಸೇರಿದ್ದು, ಪ್ರಭಾತಂ ಏವಿಯೇಷನ್‍ನ ಇಸಿ 135 ಹೆಲಿಕಾಪ್ಟರ್‌ನಲ್ಲಿ ಸಿಎಂ ಮೈಸೂರಿಗೆ ಪ್ರಯಾಣಿಸಬೇಕಿತ್ತು.ಕ್ಯಾಪ್ಟನ್ ಉನ್ನಿಕೃಷ್ಣನ್ ಹಾಗೂ ಕ್ಯಾಪ್ಟನ್ ದೌಲ್ತಾ ಹೆಲಿಕಾಪ್ಟರ್ ಜೊತೆಗಿದ್ದರು.

ಸೈಲೆನ್ಸರ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ತಾಂತ್ರಿಕ ದೋಷದ ಕಾರಣದಿಂದಾಗಿ ಹೆಲಿಕಾಪ್ಟರ್ ಸೈಲೆನ್ಸರ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಅದನ್ನು ಭದ್ರತಾ ಸಿಬ್ಬಂದಿ ತಕ್ಷಣ ಗಮನಿಸಿ ಸಿಎಂ ಅವರನ್ನು ಕೆಳಗಿಳಿಸಿದರು.

ರಸ್ತೆ ಮಾರ್ಗದ ಮೂಲಕ ಪ್ರಯಾಣ
ಘಟನೆಯ ಬಳಿಕ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಕ್ಷಣಕಾಲ ವಿಶ್ರಾಂತಿ ಪಡೆದ ಸಿಎಂ ರಸ್ತೆ ಮಾರ್ಗವಾಗಿ ಮೈಸೂರಿಗೆ ಪ್ರಯಾಣ ಬೆಳೆಸಿದರು.

ಸಿಎಂ ಜೊತೆಗೆ ಸಚಿವರಿದ್ದರು
ಸಿಎಂ ಜೊತೆ ಗೃಹ ಸಚಿವ ಕೆಜೆ ಜಾರ್ಜ್, ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಸಹ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಬೇಕಿತ್ತು.

ತನಿಖೆ ನಡೆಸುತ್ತೇವೆ ಎಂದ ಗೃಹ ಸಚಿವರು
ಘಟನೆಯಿಂದ ಯಾವುದೇ ರೀತಿಯ ಅಪಾಯವಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಆದರೆ ಈ ರೀತಿಯಾಗಲು ಕಾರಣವೇನು? ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲವೆ? ಎಂಬ ಬಗ್ಗೆ ತಜ್ಞರರಿಂದ ತನಿಖೆ ನಡೆಸುವುದಾಗಿ ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.












Click it and Unblock the Notifications