ಆ ಪಕ್ಷಕ್ಕೆ ಹೋದ್ರೆ ವಾಶಿಂಗ್ ಪೌಡರ್ ನಿರ್ಮಾ ಹಾಕಿ ತೊಳೆಯುತ್ತಾರೆ: ಸಂತೋಷ್ ಲಾಡ್ ಹೀಗೆ ಹೇಳಿದ್ದೇಕೆ?
ಚಿತ್ರದುರ್ಗ,ನವೆಂಬರ್ 03: ಬಿಜೆಪಿ ಪಕ್ಷಕ್ಕೆ ಹೋದವರಿಗೆ ಅವರು ವಾಷಿಂಗ್ ಪೌಡರ್ ನಿರ್ಮಾ ಹಾಕಿ ತೊಳೆದು ಅವರನ್ನ ಕಂಪ್ಲೀಟ್ ಶುದ್ಧಗೊಳಿಸುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಲೇವಡಿ ಮಾಡಿದ್ದಾರೆ.
ಈ ಕುರಿತು ಶುಕ್ರವಾರ ಚಿತ್ರದುರ್ಗ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿಯವರದ್ದು ಆಪರೇಷನ್ ಕಮಲ ಬಿಟ್ರೆ ಬೇರೇನೂ ಇಲ್ಲ, ಇದನ್ನು ಬಿಜೆಪಿಯವರು ಹವ್ಯಾಸ ಮಾಡಿಕೊಂಡಿದ್ದಾರೆ ಬಿಜೆಪಿ ಅವರನ್ನು ಬಿಟ್ಟು ಬೇರೆಯವರು ಅಧಿಕಾರಕ್ಕೆ ಬಂದ್ರೆ , ಅದನ್ನ ಹೆಂಗೆ ಬೀಳಿಸಬೇಕು ಅನ್ನೋದನ್ನ ಹವ್ಯಾಸ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇ.ಡಿ, ಲೋಕಾಯುಕ್ತ, ಸಿಬಿಐ ಉಪಯೋಗಿಸಿಕೊಂಡು ಸರ್ಕಾರ ಕೆಡವೋದು, ಯಾರ್ಯಾರ ಮೇಲೆ ಆರೋಪ ಮಾಡೋದು ಬಿಜೆಪಿಗೆ ಕರೆ ತರೋದು. ಯಾವುದೇ ಒಬ್ಬ ಕಾಂಟ್ರವರ್ಸಿ ಮಾಡೋ ವ್ಯಕ್ತಿ ಬೇರೆ ಪಕ್ಷದಲ್ಲಿ ಇದ್ರೇ, ಅವರನ್ನ ಬಿಜೆಪಿಗೆ ಹೋದ್ರೆ ವಾಷಿಂಗ್ ಪೌಡರ್ ನಿರ್ಮಾ ಹಾಕಿ ತೊಳೆದು ಅವನ್ನನ್ನು ಕಂಪ್ಲೀಟ್ ಶುದ್ಧ ಮಾಡ್ತಾರೆ. ಇದು ಕಳೆದ 9 ವರ್ಷದಿಂದ ಮಾಡಿದ್ದಾರೆ ಮುಂದೆಯೂ ಮುಂದುವರೆಸುತ್ತಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಇನ್ನು ಬಿಜೆಪಿ ಅಧ್ಯಯನ ತಂಡಗಳ ಪ್ರವಾಸ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ನೀಡಿದ ಸಚಿವರು, ಅಧ್ಯಯನ ಏನು ಇಲ್ಲ, ದುಡ್ಡು ಕೊಡಬೇಕು, ಒಂಬತ್ತು ವರ್ಷಗಳಿಂದ ಒಂದು ರೂಪಾಯಿ ನೀಡಿಲ್ಲ, ಬಿಟ್ಟಿ ಭಾಷಣ ಪ್ರಚಾರ ಮಾಡುತ್ತಿದ್ದಾರೆ ಅಷ್ಟೇ, ಕೇಂದ್ರ ಪ್ರಚಾರಕ್ಕೆ ಆರು ಸಾವಿರ ಕೋಟಿ ಹಣವನ್ನು ಕೇಂದ್ರ ಸರ್ಕಾರ ಖರ್ಚು ಮಾಡಿದೆ. ಮನ್ ಕೀ ಬಾತ್, ಟ್ವಿಟ್ಟರ್, ಫೇಸ್ ಬುಕ್, ವಿಮಾನದಲ್ಲಿ ಸಹ ಪ್ರಚಾರ ಮಾಡುತ್ತಿದ್ದಾರೆ, ಅದನ್ನು ಬಿಟ್ಟು ಮಾಧ್ಯಮಗಳಲ್ಲಿ ಕುಳಿತು ಚರ್ಚೆ ನಡೆಸಬೇಕು 9 ವರ್ಷ ಆಗಿದೆ ವಿಶ್ವ ಗುರು ಅವರು ಯಾಕೆ ಮಾಧ್ಯಮಗಳಲ್ಲಿ ಮಾತನಾಡಿಲ್ಲ, ಒಂದು ತಾಸು ಕುಳಿತು ಚರ್ಚೆ ಮಾಡಬಹುದು ಅಲ್ವಾ ಎಂದರು.
ಕೈ ಮುಗಿಯುತ್ತೇನೆ ಮತ್ತೆ ಆ ಪ್ರಶ್ನೆ ಕೇಳ್ಬೇಡಿ
ಐದು ವರ್ಷಗಳ ಕಾಲ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಮುಂದಿನ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರಿಯಲಿದ್ದಾರೆ, ಈಗಾಗಲೇ ನಾನೇ ಐದು ವರ್ಷ ಸಿಎಂ ಆಗಿರುತ್ತೇನೆ ಎನ್ನುವ ಮೂಲಕ ಸಿಎಂ ಬದಲಾವಣೆ ವಿಚಾರಕ್ಕೆ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ. ನಾಲ್ಕೈದು ತಿಂಗಳಿಂದ ಇದು ಚರ್ಚೆ ಆಗ್ತಿದೆ. ಮಾಧ್ಯಮದವರಿಗೆ ನಾವು ಕೈ ಮುಗಿದು ಕೇಳ್ತೀನಿ ಮತ್ತೆ ಈ ಪ್ರಶ್ನೆ ಕೇಳಬೇಡಿ ಎಂದ ಅವರು, ಪ್ರತಿ ಬಾರಿ ಇದನ್ನೇ ಕೇಳಿದ್ರೆ ಉತ್ತರ ಕೊಡೋಕೆ ಆಗಲ್ಲ, ಹೈಕಮಾಂಡ್ ಇದೆ, ಶಾಸಕರು ನಿರ್ಧಾರ ಮಾಡ್ತಾರೆ. ಸಿಎಂ ಹೇಳಿರೋದನ್ನ ಸಿಎಂಗೆ ಕೇಳಿ ಎಂದು ಹೇಳಿದರು.
ಇಂತಹ ವಿಷಯಗಳು ಹೈಕಮಾಂಡ್ ವಲಯದಲ್ಲಿ ಚರ್ಚೆ ಆಗುತ್ತವೆ. ನಾವು ಏನಾದರೂ ಹೇಳಿದ್ರೆ ಬೇರೆಯವರಿಗೆ ಕೇಳ್ತೀರಾ, ಸಿಎಂ ಹೇಳಿದ್ದಾರೆ, ಅದೇ ಅಂತಿಮವಾಗಿದೆ. ಏನಾದ್ರೂ ಮಧ್ಯೆ ಬದಲಾವಣೆ ಇದರೆ ಹೈಕಮಾಂಡ್, ಶಾಸಕರು ತೀರ್ಮಾನ ಮಾಡ್ತಾರೆ. ಸಿಎಂ ಬದಲಾವಣೆ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದು, ನಾನೇ ಐದು ವರ್ಷ ಸಿಎಂ ಸಿದ್ದರಾಮಯ್ಯ ಅವರೇ ತೆರೆ ಎಳೆದಿದ್ದಾರೆ. ಗೊಂದಲ ಏನು ಇಲ್ಲ, ಸಿಎಂ ಫೈನಲ್ ಆಗಿ ಹೇಳಿದ್ದಾರೆ. ಪಕ್ಷದಲ್ಲಿ ಗೊಂದಲ ಇಲ್ಲ ಎಂದು ಹೇಳಿದರು.












Click it and Unblock the Notifications