ಸೆಪ್ಟೆಂಬರ್ ಅಂತ್ಯಕ್ಕೆ ನಂದಿನಿ ಹಾಲಿನ ದರ 2ರೂ ಹೆಚ್ಚಳ ಸಾಧ್ಯತೆ

Recommended Video

      ಸೆಪ್ಟೆಂಬರ್ ಅಂತ್ಯದ ಒಳಗೆ ಹಾಲಿನ ದರ 2ರೂ ಏರಿಕೆ ಮಾಡುವ ಸಾಧ್ಯತೆ | Oneindia Kannada

      ಬೆಂಗಳೂರು, ಸೆಪ್ಟೆಂಬರ್ 4: ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನಲ್ಲೇ ಹಾಲಿನ ದರವೂ ಏರಿಕೆಯಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಹಾಲಿನ ದರ 2ರೂ ಏರಿಕೆ ಮಾಡಲು ಕೆಎಂಎಫ್ ನಿರ್ಧರಿಸಿದೆ.

      ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದ ಬೆನ್ನಲ್ಲೇ ಇದೀಗ ಹಾಲಿನ ದರ ಏರಿಕೆಗೆ ಕೆಎಂಎಫ್ ನಿರ್ಧರಿಸಿದೆ. ಕಳೆದ ತಿಂಗಳು ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಮಣಿದು ದರ ಏರಿಕೆಗೆ ಮುಂದಾಗಿದೆ.

      ಸಿಲಿಂಡರ್ ದರವೂ ಏರಿಕೆಯಾಗಿದೆ. ಕಳೆದ ಒಂದು ತಿಂಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿನಿತ್ಯ ಏರಿಕೆ ಕಾಣುತ್ತಿದೆ. ಹೀಗಾಗಿ ಸರ್ಕಾರ ಬಸ್‌ ದರವನ್ನೂ ಹೆಚ್ಚಿಸುವ ಕುರಿತು ಚಿಂತನೆ ನಡೆಸಿದೆ.

      Milk will be costlier Rs2 more by month end

      ಇದೀಗ ಪ್ರಸ್ತುತ ನಂದಿನಿ ಹಾಲಿನ ದರ ಪ್ರತಿ ಲೀಟರ್‌ ಗೆ 35ರೂ ಇದೆ, ಮೊಸರು ಅರ್ಧ ಲೀಟರ್‌ಗೆ 21ರೂ. ಇದೆ, ಎರಡು ರೂ ಹೆಚ್ಚಳ ಮಾಡಿದ್ದಲ್ಲಿ ಪ್ರತಿ ಲೀಟರ್‌ ಮೇಲೆ 2ರೂ. ಹೆಚ್ಚಳವಾಗಲಿದೆ. ಹಾಲು ದರ ಏರಿಕೆ ಹೆಚ್ಚಳಕ್ಕೆ ಒತ್ತಾಯಿಸಿ ರೈತರು ಪ್ರತಿಭಟನೆ ಕೈಗೊಂಡಿದ್ದರು.

      ಹಸುಗಳನ್ನು ಹೆಚ್ಚೆಚ್ಚು ಸಾಕಬೇಕು, ಹೆಚ್ಚು ಹಾಲು ಉತ್ಪಾದನೆ ಮಾಡಬೇಕು ಎಂದು ಹೇಳಿರುವ ಕಾರಣಕ್ಕೆ ರೈತರ ಹೆಚ್ಚು ಗೋವುಗಳನ್ನು ಸಾಕುತ್ತಿದ್ದಾರೆ. ಇದೀಗ ಕೆಎಂಎಫ್ ಹೆಚ್ಚಿನ ಪ್ರಮಾಣದ ಹಾಲು ಬರುತ್ತಿರುವುದರಿಂದ ನಿರ್ವಹಣೆಗೆ ಕಷ್ಟವಾಗುತ್ತಿದೆ.

      Milk will be costlier Rs2 more by month end

      ಜತೆಗೆ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಾಲು ಸರಬರಾಜಾಗುತ್ತಿರುವುದರಿಂದ ಬೆಲೆ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇದೀಗ ರೈತರ ಒತ್ತಾಯಕ್ಕೆ ಮಣಿದು ಹಾಲಿನ ಬೆಲೆ ಏರಿಕೆಗೆ ಮುಂದಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+