#ಮಿಟೂ: ಹಿರಿಯ ನಟ ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ

ಬೆಂಗಳೂರು, ಅಕ್ಟೋಬರ್ 20: ಹಿರಿಯ ನಟ ಅರ್ಜುನ್ ಸರ್ಜಾ ಅವರ ಮೇಲೆ ಕನ್ನಡ ಖ್ಯಾತ ನಟಿ ಶೃತಿ ಹರಿಹರನ್‌ ಅವರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

'ವಿಸ್ಮಯ' ಚಲನಚಿತ್ರ ಶೂಟಿಂಗ್ ವೇಳೆ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಶೃತಿ ಹರಿಹರನ್ ಅವರು ಕನ್ನಡ ಮ್ಯಾಗಜೀನ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ನಂತರ ಅದೇ ಘಟನೆ ಬಗ್ಗೆ ವಿವರವಾಗಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿಯೂ ಬರೆದುಕೊಂಡಿದ್ದಾರೆ.

'ವಿಸ್ಮಯ' ಚಿತ್ರದ ಶೂಟಿಂಗ್‌ನ ತಾಲೀಮಿನ ಸಮಯದಲ್ಲಿ ಅರ್ಜುನ್ ಸರ್ಜಾ ಅವರು ಶೂಟಿಂಗ್‌ ತಂಡದ ಎದುರೇ ತಮ್ಮನ್ನು ಅಸಭ್ಯವಾಗಿ ತಬ್ಬಿಕೊಂಡು ಬೆನ್ನಮೇಲೆ ದುರುದ್ದೇಶದಿಂದ ಕೈ ಆಡಿಸಿದರು ಎಂದು ಶೃತಿ ಹರಿಹರನ್ ಅವರು ಆರೋಪಿಸಿದ್ದಾರೆ.

metoo: sexual harassment allegation against actor Arjun Sarja

ಆ ವೇಳೆಯೇ ಚಿತ್ರದ ನಿರ್ದೇಶಕರ ಬಳಿ ನಾನು ಈ ಘಟನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ ಮತ್ತು ನನ್ನನ್ನು ತಾಲೀಮಿಗೆ ಕರೆಯಬೇಡಿ ನೇರವಾಗಿ ಶೂಟಿಂಗ್‌ನಲ್ಲಿ ಮಾತ್ರವೇ ನಾನು ಭಾಗವಹಿಸುತ್ತೇನೆ ಎಂದು ಹೇಳಿದ್ದೆ. ನನಗೆ ಇಷ್ಟವಿಲ್ಲದಿದ್ದರೂ ವೃತ್ತಿಪರ ನಟಿಯಾಗಿ ನಾನು ಶೂಟಿಂಗ್‌ನಲ್ಲಿ ಭಾಗವಹಿಸಿದೆ ಎಂದು ಅವರು ಹೇಳಿದ್ದಾರೆ.

ಶೂಟಿಂಗ್‌ ಮುಗಿದ ನಂತರ ಅರ್ಜುನ್ ಸರ್ಜಾ ಅವರು ನನ್ನನ್ನು ಕರೆಯುತ್ತಿದ್ದರು ಆದರೆ ನಾನು ಅವರ ಮಾತಿಗೆ ಗಮನಕೊಡುತ್ತಿರಲಿಲ್ಲ, ಅವರು ನನಗೆ ಕೆಲಸ ಮಾಡಲಾರದ ಸ್ಥಿತಿಯನ್ನು ಅಲ್ಲಿ ನಿರ್ಮಿಸಿಬಿಟ್ಟರು ಎಂದು ಸಹ ಅವರು ಬರೆದುಕೊಂಡಿದ್ದಾರೆ.

ಅಷ್ಟೆ ಅಲ್ಲದೆ ತಾವು ಎಳವೆಯಿಂದ ವಿವಿಧ ಹಂತದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿರುವುದಾಗಿಯೂ ಅವರ ತಮ್ಮ ಸುದೀರ್ಘ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. #ಮಿಟೂ ಅಭಿಯಾನ ಉತ್ತಮವಾಗಿ ನಡೆಯುತ್ತಿದ್ದು, ಇದರಿಂದ ಚಿತ್ರರಂಗ ಸ್ವಚ್ಛವಾದರೆ ಉತ್ತಮ ಎಂದೂ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+