Modi campaign in Karnataka: ಮೋದಿ ಆಗಮನಕ್ಕೆ ಭರ್ಜರಿ ಸಿದ್ಧತೆ: ಜೋಳದ ರೊಟ್ಟಿ ಸವಿಯಲಿರುವ ನಮೋ
ಕರುನಾಡಲ್ಲಿ ಮೋದಿ ಹವಾ ಶುರುವಾಗಿದೆ. ಈ ದಿನ ರಾಜ್ಯಕ್ಕೆ ರೋಚಕ ರಂಗು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ. ಇಂದು ಮತ್ತು ನಾಳೆ ಪ್ರಚಾರದ ಮೂಲಕ ರಾಜ್ಯದಲ್ಲಿ ಮೋದಿ ಧೂಳೆಬ್ಬಿಸಲಿದ್ದಾರೆ. ಈವರೆಗೆ ಅಮಿತಾ ಶಾ, ದೇವೇಂದ್ರ ಫಡ್ನವಿಸ್, ಯೋಗಿ ಆದಿತ್ಯನಾಥ್ ದೊಡ್ಡವರ ದಂಡೆ ರಾಜ್ಯಕ್ಕೆ ಭೇಟಿ ನೀಡಿದೆ. ಸದ್ಯ ರಾಜ್ಯದಲ್ಲಿ ಮೋದಿ ಮೆನಿಯಾ ಶುರುವಾಗಿದೆ.
ಇಂದು ಮತ್ತು ನಾಳೆ ಎಂಟು ಜಿಲ್ಲೆಗಳಲ್ಲಿ ಮೋದಿ ಮತಬೇಟೆಯಾಡಲಿದ್ದಾರೆ. ಆರು ದಿನ 180 ಕ್ಷೇತ್ರಗಳ ಜನರನ್ನು ಮೋದಿ ಭೇಟಿ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ 8.20ಕ್ಕೆ ವಿಶೇಷ ವಿಮಾನದಲ್ಲಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ಬೆಳಿಗ್ಗೆ 10.50ಕ್ಕೆ ಬೀದರ್‌ನ ಹುಮ್ನಾಬಾದ್‌ಗೆ ಆಗಮಿಸಲಿದ್ದಾರೆ. ಈ ವೇಳೆ ರಸ್ತೆ ಮೂಲಕ ಪ್ರಯಾಣ ಮಾಡಿ 11.40ಕ್ಕೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 1ಗಂಟೆಗೆ ವಿಜಯಪುರದ ಸೈನಿಕ ಶಾಲೆಯ ಕ್ರೀಡಾಂಗಣದಲ್ಲಿ ಮೋದಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಮಧ್ಯಾಹ್ನ 2.45ಕ್ಕೆ ಕುಡುಚಿ ಸಮಾವೇಶದಲ್ಲಿ ಉಪಸ್ಥಿತರಿರಲಿದ್ದಾರೆ.
ಬಳಿಕ ಮಧ್ಯಾಹ್ನ 3.40ಕ್ಕೆ ಬೆಳಗಾವಿಗೆ ತೆರಳಿದ್ದಾರೆ. ಅಲ್ಲಿ ರೋಡ್ ಶೋ ಬಳಿಕ ಬೆಂಗಳೂರಿಗೆ ಆಗಮಿಸಲಿರುವ ನಮೋ ಸಂಜೆ 6-7ಗಂಟೆಗೆ ರೋಡ್ ಶೋ ಮೂಲಕ ಮತಬೇಟೆ ಮಾಡಲಿದ್ದಾರೆ. ಇಂದು ಬೆಂಗಳೂರಿನ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಕೂಡ ಪ್ರಧಾನಿ ಕರುನಾಡಿನಲ್ಲಿ ಪ್ರಚಾರ ಮುಂದುರೆಸಲಿದ್ದಾರೆ.
ಜೋಳದ ರೊಟ್ಟಿ ಸವಿಯಲಿರುವ ಮೋದಿ
ಇನ್ನೂ ಮೋದಿಗಾಗಿ ಭರ್ಜರಿ ಭೋಜನ ಕೂಡ ವಿಜಯಪುರದಲ್ಲಿ ತಯಾರಿ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ರೊಟ್ಟಿ, ಎಣ್ಣುಗಾಯಿ ಪಲ್ಯ, ಫುಲಕಾ, ದಾಲ್, ಮೊಸಲು, ಹಿಂಡಿ, ಹೋಳಿಗೆ ಉನ್ನತ ಬಾಣಸಿಗರಿಂದ ಮೋದಿ ಅವರಿಗಾಗಿ ಸಿದ್ದಪಡಿಸಲಾಗಿದೆ. ಕೆಲವರು ಮಾತ್ರ ಮೋದಿ ಅವರೊಂದಿಗೆ ಭೋಜನ ಕೂಟದಲ್ಲಿ ಇರಲಿದ್ದಾರೆ.

ವಿಜಯಪುರದಲ್ಲಿ 80 ಸಾವಿರ ಜನರಿಗೆ ಆಸನ ವ್ಯವಸ್ಥೆಯ ಸೂಪರ್ ಸ್ಟ್ರಕ್ಚರ್‌ನ ಬೃಹತ್ ಪೆಂಡಾಲ್ ಹಾಕಲಾಗಿದೆ. ಪೆಂಡಾಲ್‌ನ ಬಲ ಹಾಗೂ ಎಡ ಭಾಗದಲ್ಲೂ 2 ಪರ್ಯಾಯ ಪೆಂಡಾಲ್ ನಿರ್ಮಿಸಲಾಗಿದೆ. 2 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ನಾನಾ ಕಡೆ ಎಲ್‌ಇಡಿ ಅಳವಡಿಕೆ ಚಿಂತನೆ ನಡೆಸಲಾಗಿದೆ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ತಿಳಿಸಿದರು.
ಭಾನುವಾರ ಬೆಳಿಗ್ಗೆ 11ಗಂಟೆಗೆ ಕೋಲಾರದಲ್ಲಿ ಸಮಾವೇಶ ಬಳಿಕ, ಮಧ್ಯಾಹ್ನ 2ಗಂಟೆಗೆ ರಾಮನಗರ ಜಿಲ್ಲೆ ಚೆನ್ನಪಟ್ಟಣದಲ್ಲಿ ಯೋಗೇಶ್ವರ ಪರ ಪ್ರಚಾರ ಮಾಡಲಿದ್ದಾರೆ. ಬಳಿಕ ಸಂಜೆ 5ಕ್ಕೆ ಮೈಸೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬಳಿಕ ದೆಹಲಿ ತೆರಳಲಿದ್ದಾರೆ.
ಇನ್ನು ಇಂದು ಮೋದಿ ರೋಡ್ ಶೋ ವೇಳೆ ಅಂಗಡಿ ಮುಗ್ಗಟ್ಟು ಬಂದ್ ಮಾಡಲಾಗಿದೆ. ರಸ್ತೆ ಮಾರ್ಗ ಕೂಡ ಬದಲಾಯಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.
ವಿಜಯಪುರದಲ್ಲಿ ಭಾರೀ ಬಿಗಿ ಭದ್ರತೆ
ಮೋದಿ ಆಗಮನದಿಂದ ವಿಜಯಪುರದಲ್ಲಿ ಭಾರೀ ಬಿಗಿ ಭದ್ರತೆ ಮಾಡಲಾಗಿದೆ. ಭದ್ರತೆಗಾಗಿ 5 ಜನ ಎಸ್ಪಿ, 16 ಎಎಸ್ಪಿ, 300 ಹೋಮ್‌ಗಾಡ್ಸ್, 28 ಡಿವೈಎಸ್ಪಿ, 28 ಸಿಪಿಐ, 69 ಪಿಎಸ್‌ಐ, 52 ಎಎಸ್‌ಐ, 524 ಹೆಡ್‌ಕಾನ್ಸ್‌ಟೇಬಲ್, 138 ಮಹಿಳಾ ಪೇದೆಗಳು, 3 ಡಿಎಆರ್, 12 ಐಆರ್‌ಬಿ ತುಕಡಿಗಳು, 4 ಅಗ್ನಿಶಾಮಕ ದಳಗಳು, 6 ಆಂಬ್ಯುಲೆನ್ಸ್ ಹಾಗೂ 600 ಪ್ಯಾರಾಮಿಲಿಟರಿ ಸಿಬ್ಬಂದಿ ನಿಯೋಜಿಸಲಾಗಿದೆ.












Click it and Unblock the Notifications