Manmul: ಹಾಲಿನ ದರ 1.7 ರೂ.ಕಡಿತ, ರೈತರಿಗೆ ಆತಂಕ

ಮಂಡ್ಯ, ಜುಲೈ 16: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (Manmul) ರೈತರಿಗೆ ಹಾಲಿನ ಕಡಿತ ದರದ ಶಾಕ್ ನೀಡಿದೆ. ಮನ್ಮುಲ್ ತಾನು ಖರೀದಿಸುವ ಹಾಲಿನ ದರದಲ್ಲಿ ಪ್ರತಿ ಲೀಟರ್​ಗೆ 1.75 ರೂ. ಮತ್ತೆ ಕಡಿತಗೊಳಿಸಿ ಆದೇಶಿಸಿದೆ. ಈ ನೀರ್ಧಾರಕ್ಕೆ ರೈತರು ಅಸಮಧಾನ ಹೊರ ಹಾಕಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಿಂದ ಆಡಳಿತ ಮಂಡಳಿ ಸಭೆ ನಡೆದಿತ್ತು. ಈ ವೇಳೆ ರೈತರಿಂದ ಖರೀದಿ ಮಾಡುವ ಹಾಲಿನಲ್ಲಿ ಪ್ರತಿ ಲೀಟರ್‌ ಹಾಲಿನ ದರಕ್ಕೆ 1.75 ರೂಪಾಯಿ ಕಡಿತ ಮಾಡಲು ತೀರ್ಮಾನಿಸಿದೆ. ಈ ಪರಿಷ್ಕೃತ ದರ ಭಾನುವಾರ ಜುಲೈ 16 ರಿಂದಲೇ ಜಾರಿಗೆ ಬರಲಿದೆ.

Mandya Manmul Deduction Milk Buy Rate Rs 1.75 Per Liter Shock For Farmer

ಮುಂಗಾರು ಮಳೆ ಉತ್ತಮವಾಗರುವುದರಿಂದ ದರ ಕಡಿತ ಮಾಡಲಾಗಿದೆ. ಹೀಗಾಗಿ ಮುಂದಿನ ಆದೇಶದವರೆಗೂ ಪರಿಷ್ಕೃತ ದರ ಮುಂದುವರಿಯಲಿದೆ ಎಂದು ಮನ್ಮುಲ್ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಈ ಹಿಂದೆ ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಆದರೆ ಇದೀಗ ಹಾಲಿನ ದರದಲ್ಲಿ ಕಡಿತ ಮಾಡಿದ ಪರಿಣಾಮ ರೈತರಿಗೆ/ಹಾಳುಉತ್ಪಾದಕರಿಗೆ ಪ್ರತಿ ಲೀಟರ್‌ಗೆ 32.25 ರೂಪಾಯಿ ಬದಲಿಗೆ 30.50 ರೂಪಾಯಿ ಸಿಗಲಿದೆ.

ಈ ಹಿಂದೆ 1 ರೂ. ಕಡಿತ ಮಾಡಿದ್ದ ಮನ್ಮುಲ್

ಹಿಂದಿನ ಜೂನ್ ತಿಂಗಳಲ್ಲಿ ಮನ್ಮೂಲ್ ಪ್ರತಿ ಲೀಟರ್‌ ಹಾಲಿನ ಖರೀದಿ ದರದಲ್ಲಿ​ 1 ರೂಪಾಯಿ ಇಳಿಕೆ ಮಾಡಿ ಆದೇಶಿಸಿತ್ತು. ಈ ನಿರ್ಧಾರವನ್ನು ಅಂದು ಮೇ.26ರಂದು ನಡೆದಿದ್ದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಿತ್ತು. ರಾಜ್ಯ ಸರ್ಕಾರ ಈ ಹಿಂದೆ ಬರಗಾಲ, ಮಳೆ ಕೊರತೆ, ಬೇಸಿಗೆ ಕರಣದಿಂದಾಗಿ ಹಾಲು ಒಕ್ಕೂಟಗಳಿಗೆ ಪ್ರತಿ ಲೀಟರ್ ಖರೀದಿ ದರಕ್ಕೆ 02 ರೂಪಾಯಿ ಪ್ರೋತ್ಸಾಹ ಧನ ನೀಡುವಂತೆ ಸೂಚಿಸಿತ್ತು.

Mandya Manmul Deduction Milk Buy Rate Rs 1.75 Per Liter Shock For Farmer

ಅದರಂತೆ ಮನ್ಮುಲ್ 2 ರೂಪಾಯಿ ಹೆಚ್ಚಳ ಮಾಡಿತ್ತು. ಕಾರಣ ಆಗ ಮೇವಿನ ಕೊರತೆ, ಹಸಿರು ಹುಲ್ಲು ದೊರಕದ ಸ್ಥಿತಿ ಇತ್ತು. ಅಲ್ಲದೇ ಧನಕರುಗಳ ಹಿಂಡಿ, ಬೂಸಾ ಆಹಾರ ಪದಾರ್ಥಗಳ ದರ ಹೆಚ್ಚಿದ್ದರಿಂದ ಹಾಲಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಇದೀಗ ಉತ್ತಮ ಮಳೆ ಆಗಿದ್ದಕ್ಕೆ ದರ ಇಳಿಕೆ ಮಾಡಲಾಗಿದೆ ಎಂದು ಮಂಡ್ಯ ಮನ್ಮುಲ್ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+