ಪ್ರೀತಿಗಾಗಿ ಬಾಲಕಿಯನ್ನು ಅಪಹರಿಸಿ, ಕಟ್ಟಿಹಾಕಿದ ಭೂಪ

ಉತ್ತರ ಕನ್ನಡ, ಆ.8 : ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಮುಂಡಗೋಡ ಸಮೀಪದ ಮಚ್ಚಿಗೇರಿ ಗ್ರಾಮದಲ್ಲಿ ನಡೆದಿದೆ. ಬಾಲಕಿಯನ್ನು ಕಾಡಿನಲ್ಲಿ ಕಟ್ಟಿಹಾಕಿದ್ದ ಯುವಕ, ಪ್ರೀತಿಸುವಂತೆ ಆಕೆಯನ್ನು ಪೀಡಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಬಾಲಕಿಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಚ್ಚಿಗೇರಿ ಗ್ರಾಮದ ನಾಗರಾಜ ಭೋವಿ (21) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಅಪಹರಣಕ್ಕೊಳಗಾದ ಬಾಲಕಿಯ ಪೋಷಕರು ನೀಡಿದ ದೂರಿನ ಅನ್ವಯ ಯುವಕನನ್ನು ಬಂಧಿಸಲಾಗಿದೆ.

Uttara Kannada

ಆಗಿದ್ದೇನು : ಮಚ್ಚಿಗೇರಿ ನಿವಾಸಿ ನಾಗರಾಜ್‌ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಗುರುವಾರ ಸಂಜೆ ಶಾಲೆಯಿಂದ ಮನೆಗೆ ವಾಪಾಸಾಗುತ್ತಿದ್ದ 15 ವರ್ಷದ ಬಾಲಕಿಯನ್ನು ಅಪಹರಿಸಿದ್ದಾನೆ. ನಂತರ ಕಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಮರವೊಂದಕ್ಕೆ ಕಟ್ಟಿ ಹಾಕಿದ್ದಾರೆ. [ಮಗಳ ಪ್ರಿಯಕರನ ರುಂಡ ಚೆಂಡಾಡಿ ಶರಣಾದ ಅಪ್ಪ]

ತನ್ನನ್ನು ಪ್ರೀತಿಸು ಎಂದು ಬಾಲಕಿಗೆ ನಾಗರಾಜ್ ಒತ್ತಾಯಿಸುತ್ತಿದ್ದ ಎಂದು ಬಾಲಕಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ. ಸ್ವಲ್ಪ ಕತ್ತಲಾಗುತ್ತಿದ್ದಂತೆ ಬಾಲಕಿಯನ್ನು ಬಿಟ್ಟು ಕಳಿಸಿದ ನಾಗರಾಜ್, ನಾಳೆ ಬೆಳಗ್ಗೆ ನಿರ್ಧಾರ ತಿಳಿಸುವಂತೆ ಆಕೆಗೆ ಹೇಳಿದ್ದ ಎಂದು ಬಾಲಕಿ ಪೊಲೀಸರಿಗೆ ಹೇಳಿದ್ದಾಳೆ.

ಮನೆಗೆ ಬಂದ ಬಾಲಕಿ ಮುಂಡಗೋಡ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾಳೆ. ಶುಕ್ರವಾರ ಬೆಳಗ್ಗೆ ದೂರಿನ ಅನ್ವಯ ನಾಗರಾಜ್ ನನ್ನು ಬಂಧಿಸಲಾಗಿದೆ. ನಾಗರಾಜ್ ಇಬ್ಬರು ಸ್ನೇಹಿತರು ತಲೆ ಮರಿಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ಆರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+