ಮಹದಾಯಿ ಕುರಿತು ಸಭೆ : ಶೆಟ್ಟರ್ ಆಹ್ವಾನಿಸಿದ ಮನೋಹರ್ ಪರಿಕ್ಕರ್
ಬೆಂಗಳೂರು, ಜೂನ್ 22 : ಮಹದಾಯಿ ವಿವಾದದ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಸಭೆ ನಡೆಸಲಿದ್ದಾರೆ. ಸಭೆಗೆ ಆಗಮಿಸುವಂತೆ ಜಗದೀಶ್ ಶೆಟ್ಟರ್ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರಿಗೆ ಕರೆ ಮಾಡಲಾಗಿದೆ.
ಹುಬ್ಭಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಈ ಕುರಿತು ಶುಕ್ರವಾರ ಹೇಳಿಕೆ ನೀಡಿದರು. 'ಮನೋಹರ್ ಪರಿಕ್ಕರ್ ಸಭೆ ಕರೆದಿದ್ದು, ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದಾರೆ' ಎಂದರು.
ಪ್ರಧಾನಿ ಮೋದಿ ಭೇಟಿಗೆ ಹೊರಟ ರಾಜ್ಯ ರೈತ ನಿಯೋಗ
ಅನಾರೋಗ್ಯದ ಕಾರಣದಿಂದಾಗಿ ಮನೋಹರ್ ಪರಿಕ್ಕರ್ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ವಾರ ಅವರು ಗೋವಾಕ್ಕೆ ಮರಳಿದ್ದಾರೆ. ಈಗ ಮಹದಾಯಿ ವಿವಾದದ ಕುರಿತು ಗಮನ ಹರಿಸಿದ್ದು, ಅಧಿಕಾರಿಗಳು ಮತ್ತು ಕರ್ನಾಟಕದ ನಾಯಕರ ಸಭೆ ಕರೆದಿದ್ದಾರೆ.
ಜನವರಿ 28ರಂದು ಮನೋಹರ್ ಪರಿಕ್ಕರ್ ಅಧಿಕಾರಿಗಳ ತಂಡದ ಜೊತೆ ಬೆಳಗಾವಿ ಜಿಲ್ಲೆಯ ಕಣಕುಂಬಿಗೆ ಭೇಟಿ ನೀಡಿದ್ದರು. ಕಳಸಾ-ಬಂಡೂರಿ ನಾಲೆಗಳ ಪರಿಶೀಲನೆ ನಡೆಸಿ ಗೋವಾಕ್ಕೆ ವಾಪಸ್ ಆಗಿದ್ದರು.
3 ತಿಂಗಳ ಚಿಕಿತ್ಸೆ ಬಳಿಕ ಗೋವಾಕ್ಕೆ ಮನೋಹರ್ ಪರಿಕ್ಕರ್ ವಾಪಸ್
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾ ಸಿಎಂಗೆ ಪತ್ರ ಬರೆದು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಮನವಿ ಮಾಡಿದ್ದರು. ಆದರೆ, ಆ ಸಭೆ ಇನ್ನು ನಡೆದಿಲ್ಲ.