ಕರ್ನಾಟಕದ ಬಿಜೆಪಿ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಬಿಎಸ್‌ವೈ ಕುಟುಂಬ- ಬಿಎಲ್‌ ಸಂತೋಷ್‌ಗೆ ಭಾರೀ ಹಿನ್ನಡೆ

ಬೆಂಗಳೂರು, ಡಿಸೆಂಬರ್‌ 26: ದಕ್ಷಿಣ ಭಾರತದಲ್ಲಿ ಕಮಲ ಅರಳಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು ಬಿ ಎಸ್‌ ಯಡಿಯೂರಪ್ಪ. ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾಗಿ ಹಾಗೂ ನಿಷ್ಠವಂತ ಕಾರ್ಯಕರ್ತರಾಗಿ ರಾಜ್ಯದಲ್ಲಿ ಬಿಜೆಪಿಯ ಮೇಲೆ ಸಂಪೂರ್ಣ ಹಿಡಿತವನ್ನ ಸಾಧಿಸಿದ್ದಾರೆ. ಬಿ ಎಲ್‌ ಸಂತೋಷ್‌ ಗೆ ಭಾರೀ ಹಿನ್ನಡೆಯಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಹೌದು, ಕರ್ನಾಟಕದಲ್ಲಿ ಬಿಜೆಪಿ ಮೇಲೆ ಸಂಪೂರ್ಣ ಹಿಡಿತವನ್ನ ಸಾಧಿಸುವುದು ಬಿ ಎಸ್‌ ಯಡಿಯೂರಪ್ಪ ಅವರು ಎಂದು ಹೇಳಲಾಗುತ್ತಿದೆ. ರಾಜ್ಯ ಬಿಜೆಪಿ ಘಟಕದಲ್ಲಿ ಗರಿಷ್ಠ ಸಂಖ್ಯೆಯ ಬೆಂಬಲಿಗರನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ರಾಜ್ಯದಲ್ಲಿ ಪಕ್ಷದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದಂತಿದೆ.

Loyalists in key posts; BS Yediyurappa, son wrest control of Karnataka BJP

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಶನಿವಾರ ನೇಮಿಸಿದ 10 ಉಪಾಧ್ಯಕ್ಷರಲ್ಲಿ ಆರು ಮಂದಿ - ಮುರುಗೇಶ್ ನಿರಾಣಿ, ರಾಜುಗೌಡ ನಾಯಕ್, ಹರತಾಳ್ ಹಾಲಪ್ಪ, ಬೈರತಿ ಬಸವರಾಜ್, ಎನ್ ಮಹೇಶ್ ಮತ್ತು ಎಂ ರಾಜೇಂದ್ರ ಮತ್ತು ನಾಲ್ವರು ಪ್ರಧಾನ ಕಾರ್ಯದರ್ಶಿಗಳಲ್ಲಿ ಮೂವರು - ಪಿ ರಾಜೀವ್, ಪ್ರೀತಮ್ ಗೌಡ ಮತ್ತು ನಂದೀಶ್ ರೆಡ್ಡಿ. ಯಡಿಯೂರಪ್ಪ ಪಾಳಯದಿಂದ ಬಂದವರಾಗಿದ್ದಾರೆ.

ಹೊಸದಾಗಿ ನೇಮಕಗೊಂಡಿರುವ ಬಹುತೇಕ ರಾಜ್ಯ ಬಿಜೆಪಿ ಕಾರ್ಯದರ್ಶಿಗಳು ಮತ್ತು ವಿವಿಧ ಮೋರ್ಚಾಗಳ ಅಧ್ಯಕ್ಷರು ಸಹ ಮಾಜಿ ಸಿಎಂ ಬಿ ಎಸ್‌ ಯಡಿಯೂರಪೊ ಅವರ ಕಟ್ಟಾ ಅನುಯಾಯಿಗಳಾಗಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಪಕ್ಷದ ನಾಯಕ ಮತ್ತು ಉಪ ನಾಯಕರ ನೇಮಕದಲ್ಲೂ ಲಿಂಗಾಯತರೇ ಹೆಚ್ಚಾಗಿದ್ದಾರೆ.

Loyalists in key posts; BS Yediyurappa, son wrest control of Karnataka BJP

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ, ವಿಧಾನ ಪರಿಷತ್ತಿನ ಉಪನಾಯಕ ಸುನೀಲ್ ವಲ್ಲ್ಯಾಪುರೆ, ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಮತ್ತು ಪರಿಷತ್ತಿನ ಎನ್.ರವಿಕುಮಾರ್ ಅವರೆಲ್ಲರೂ ಯಡಿಯೂರಪ್ಪ ಅವರ ಬಣದವರೇ ಆಗಿದ್ದಾರೆ ಎನ್ನಲಾಗಿದೆ.

ಈ ಆಯ್ಕೆಯ ಹಿಂದೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಮತ್ತು ವಿಜಯೇಂದ್ರಗೆ ಸಂಪೂರ್ಣವಾಗಿ ಮಣಿದಿದ್ಯಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೇ ಮೊದಲ ಬಾರಿಗೆ ರಾಜ್ಯ ಬಿಜೆಪಿಗೆ ಇಷ್ಟೊಂದು ಪ್ರಾತಿನಿಧ್ಯ ಸಿಗುತ್ತಿದೆ. ಯಡಿಯೂರಪ್ಪ ಅವರು ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೂ ಈಗಿನಂತೆ ಪಕ್ಷದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಬಿಜೆಪಿಯ ಹಿರಿಯ ಶಾಸಕರೊಬ್ಬರು ಹೇಳಿದರು.

ಜನಪ್ರಿಯತೆಯಲ್ಲಿ ಯಡಿಯೂರಪ್ಪನವರಿಗೆ ಸರಿಸಾಟಿಯಾಗುವ ಅಥವಾ ದೆಹಲಿ ಮಟ್ಟದಲ್ಲಿ ವರ್ಚಸ್ಸನ್ನು ಅನುಭವಿಸುವ ನಾಯಕತ್ವದ ಕೊರತೆಯೇ ಇದಕ್ಕೆ ಕಾರಣ ಎಂದು ಬಿಜೆಪಿ ಶಾಸಕರೊಬ್ಬರು ತಿಳಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಬದುಕಿದ್ದಾಗ ಯಡಿಯೂರಪ್ಪ ವಿರೋಧಿಗಳಿಗೆ ರಣಕಹಳೆ ಮೊಳಗಿಸಿದ್ದರು. ರಾಜ್ಯ ಬಿಜೆಪಿಯ ಎಲ್ಲಾ ಗುಂಪುಗಳಿಗೆ ಸಮಬಲ ಸಾಧಿಸಲು ಜಗದೀಶ್ ಶೆಟ್ಟರ್ ಕೂಡ ಆ ಪಾತ್ರವನ್ನು ಸ್ವಲ್ಪ ಮಟ್ಟಿಗೆ ನಿರ್ವಹಿಸಿದ್ದರು. ಆದರೆ ಈಗ ಯಾರ ಹಿಂದೆಯೂ ಇಲ್ಲ. ಯಡಿಯೂರಪ್ಪ ವಿರೋಧಿ ಪಾಳಯ ಒಂದುಗೂಡಬಹುದು ಎಂದು ಮತ್ತೊಬ್ಬ ಶಾಸಕ ಹೇಳಿದರು.

ಯಡಿಯೂರಪ್ಪ ವಿರೋಧಿ ಪಾಳಯದ ಸಲಹೆಯಂತೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲು ಕೂಡ ಯಡಿಯೂರಪ್ಪನವರ ಸಾಮರ್ಥ್ಯದ ಮೇಲೆ ಹೈಕಮಾಂಡ್‌ಗೆ ಹೊಸ ನಂಬಿಕೆ ಬರಲು ಕಾರಣವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+