ಕಡಿಮೆ ಖರ್ಚಿನಲ್ಲಿ ಮೋಡ ಬಿತ್ತನೆ : ರಾಜ್ಯ ಸರ್ಕಾರಕ್ಕೆ ಎಚ್‌ಎಎಲ್ ಪತ್ರ
ಬೆಂಗಳೂರು, ಮೇ 31 : ಕರ್ನಾಟಕ ಸರ್ಕಾರ ಮೋಡ ಬಿತ್ತನೆ ಮಾಡಲು 91 ಕೋಟಿ ಖರ್ಚು ಮಾಡುತ್ತಿದೆ. ಕಡಿಮೆ ಖರ್ಚಿನಲ್ಲಿಯೂ ಇದನ್ನು ಮಾಡಬಹುದು ಎಂದು ಐಐಟಿ ಕಾನ್ಪುರ ಮತ್ತು ಎಚ್‌ಎಎಲ್ ಸರ್ಕಾರಕ್ಕೆ ಪತ್ರ ಬರೆದಿವೆ.
ಕೆಲವು ದಿನಗಳ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದಲ್ಲಿ ಮೋಡ ಬಿತ್ತನೆ ಮಾಡಲು ಅನುಮೋದನೆ ನೀಡಲಾಗಿದೆ. Kyathi Climate Modification Consultantsಗೆ ಈ ಕುರಿತ ಟೆಂಡರ್ ನೀಡಲಾಗಿದೆ.
ಈಗ ಎಚ್‌ಎಎಲ್ ಮತ್ತು ಐಐಟಿ ಕಾನ್ಪುರ ಜಂಟಿಯಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿವೆ. ಎಚ್‌ಎಎಲ್ ಮತ್ತು ಐಐಟಿಯ ಜಂಟಿ ವೆಚ್ಚ ಎಷ್ಟಾಗಲಿದೆ? ಎಂಬುದು ಇನ್ನೂ ಅಂತಿಮವಾಗಿಲ್ಲ. ಆದರೆ, ಕಡಿಮೆ ಖರ್ಚಾಗಲಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

'ಎಚ್‌ಎಎಲ್ ನಾವು ಟೆಂಡರ್ ಕರೆದಾಗ ಪಾಲ್ಗೊಂಡಿರಲಿಲ್ಲ. ಐಐಟಿ ಕಾನ್ಪುರ ಮತ್ತು ಎಚ್‌ಎಎಲ್ ಇನ್ನು ತಂತ್ರಜ್ಞಾನವನ್ನು ನಮಗೆ ತೋರಿಸಿಲ್ಲ' ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮುಖ್ಯ ಇಂಜಿನಿಯರ್ ಎಚ್.ಎಸ್.ಪ್ರಕಾಶ್ ಕುಮಾರ್ ಹೇಳಿದ್ದಾರೆ.
ಎಚ್‌ಎಎಲ್ ಬಳಿ ಅತಿ ಎತ್ತರಲ್ಲಿ ಹಾರುವ ವಿಮಾನಗಳಿಗೆ ಆದ್ದರಿಂದ, ಅವರ ಜೊತೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಐಐಟಿ ಕಾನ್ಪುರದ ಅಧಿಕಾರಿಗಳು ಹೇಳಿದ್ದಾರೆ. ಆದರೆ, ರಾಜ್ಯ ಸರ್ಕಾರ ಇವರಿಗೆ ತಂತ್ರಜ್ಞಾನ ಪ್ರದರ್ಶನಕ್ಕೆ ಅವಕಾಶ ನೀಡುವುದೇ? ಕಾದು ನೋಡಬೇಕಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಂಟಿಯಾಗಿ ಮೋಡ ಬಿತ್ತನೆ ಕಾರ್ಯದ ಉಸ್ತುವಾರಿ ನೋಡಿಕೊಳ್ಳಲಿವೆ.ಜೂನ್ ಅಂತ್ಯದಲ್ಲಿ ರಾಜ್ಯದಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭವಾಗಿದೆ.











Click it and Unblock the Notifications