ಚನ್ನಪಟ್ಟಣ : 101 ಅಡಿ ಎತ್ತರದ ವಿಶ್ವಕರ್ಮ ಮೂರ್ತಿ ಪ್ರತಿಷ್ಠಾಪನೆ

ಬೆಂಗಳೂರು, ಫೆ. 19 : ಚನ್ನಪಟ್ಟಣದ ಬಳಿ 101 ಅಡಿ ಎತ್ತರದ ವಿಶ್ವಕರ್ಮನ ಪಂಚಮುಖ ಏಕಶಿಲಾ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಫೆ.22ರಂದು ಮೂರ್ತಿ ಕೆತ್ತನೆಗೆ ಚಾಲನೆ ನೀಡಲಾಗುತ್ತದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಕೆ.ಪಿ.ನಂಜುಂಡಿ ಅವರು, ವಿಶ್ವಕರ್ಮ ಸಮಾಜದ ಗುರುವಾದ ವಿಶ್ವಕರ್ಮನ 101 ಅಡಿ ಎತ್ತರದ ಪಂಚಮುಖ ಏಕಶಿಲಾ ಪ್ರತಿಮೆಯನ್ನು ನಿರ್ಮಿಸಲು ಉದ್ದೇಶಿಸಿದ್ದು, ಪ್ರತಿಮೆ ಕೆತ್ತನೆ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಅವರು ಫೆ.22ರಂದು ಚಾಲನೆ ನೀಡಲಿದ್ದಾರೆ ಎಂದರು.

K. P. Nanjundi

ದೇವನಹಳ್ಳಿ ತಾಲೂಕಿನ ಚಿಕ್ಕಗೊಲ್ಲಹಳ್ಳಿ ಬಳಿಯ ಕೊಯಿರಾ ಬಂಡೆಯಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ. ಅಂದು ವಿಶ್ವಕರ್ಮ ಜಾತಿಯ ಜನಗಣತಿಯ ಆಂದೋಲನಕ್ಕೂ ಚಾಲನೆ ದೊರೆಯಲಿದೆ ಎಂದು ಕೆ.ಪಿ.ನಂಜುಂಡಿ ತಿಳಿಸಿದರು. [ಚನ್ನಪಟ್ಟಣದ ಗೊಂಬೆಗೆ ಗಣರಾಜ್ಯೋತ್ಸವ ಬಹುಮಾನ]

150 ಶಿಲ್ಪಿಗಳು : 101 ಅಡಿ ಎತ್ತರದ ಪ್ರತಿಮೆ ಕೆತ್ತನೆ ಕಾರ್ಯದಲ್ಲಿ 150 ಶಿಲ್ಪಿಗಳು ಪಾಲ್ಗೊಳ್ಳಲಿದ್ದಾರೆ. 12 ಅಡಿ ದಪ್ಪ, 71 ಅಡಿ ಉದ್ದ, 24 ಅಡಿ ಅಗಲ, 30 ಅಡಿ ಪೀಠವನ್ನು ಈ ಪ್ರತಿಮೆ ಒಳಗೊಂಡಿದೆ. ತಮಿಳುನಾಡು ಮೂಲದ ಶಿಲ್ಪಿ ದಕ್ಷಿಣಾಮೂರ್ತಿ ಅವರ ನೇತೃತ್ವದಲ್ಲಿ ಕೆತ್ತನೆ ಕಾರ್ಯ ನಡೆಯಲಿದೆ ಎಂದರು.

ಪ್ರತಿಮೆ ನಿರ್ಮಾಣಕ್ಕಾಗಿ ಸುಮಾರು 30 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಮೂರು ವರ್ಷಗಳಲ್ಲಿ ಈ ಪ್ರತಿಷ್ಠಾಪನಾ ಕಾರ್ಯ ಪೂರ್ಣಗೊಳ್ಳಲಿದೆ. ಪ್ರತಿಮೆಯನ್ನು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಚನ್ನಪಟ್ಟಣದ ಬಳಿಯ 4 ಎಕರೆ ಪ್ರದೇಶದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+