Lokayukta Raid: ರಾಜ್ಯದ 55 ಕಡೆ ಭ್ರಷ್ಟರ ಮನೆ ಬಾಗಿಲು ತಟ್ಟಿದ ಲೋಕಾಯುಕ್ತ ಅಧಿಕಾರಿಗಳು
ಬೆಂಗಳೂರು ಜುಲೈ 19: ಇಂದು ಮುಂಜಾನೆ ರಾಜ್ಯದ 55 ಕಡೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ಮನೆ ಬಾಗಿಲನ್ನು ತಟ್ಟಿದ್ದಾರೆ. 12 ಜನ ಅಧಿಕಾರಿಗಳಿಗೆ ಸೇರಿದ 55 ಕಡೆ ತಪಾಸಣೆ ಮಾಡಲಾಗುತ್ತಿದೆ.
ಶುಕ್ರವಾರ ಬೆಳ್ಳಂಬೆಳಿಗ್ಗೆ ರಾಜ್ಯದ 55 ಕಡೆ ಲೋಕಾಯುಕ್ತ ದಾಳಿ ನಡೆದಿದ್ದು ಅಧಿಕಾರಿಗಳು ಶಾಕ್ ಆಗಿದ್ದಾರೆ. ಬೆಂಗಳೂರು ನಗರದ 6, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 2, ಶಿವಮೊಗ್ಗ ಜಿಲ್ಲೆಯ 2, ಯಾದಗಿರಿ, ತುಮಕೂರಿನಲ್ಲಿ ತಲಾ ಓರ್ವ ಅಧಿಕಾರಿ ಮನೆ ಮೇಲೆ ಲೋಕಾಯುಕ್ತರು ತಲಾಶ್ ನಡೆಸಿದ್ದಾರೆ.

ಎಲ್ಲೆಲ್ಲಿ ಪರಿಶೀಲನೆ?
ಬೆಂಗಳೂರಿನ ಮಂಜುನಾಥ್ ಟಿಆರ್- ಫಸ್ಟ್ ಡಿವಿಜನ್ ಅಸಿಸ್ಟೆಂಟ್ (ಎಫ್‌ಡಿಎ) ಬೆಂಗಳೂರು ಉತ್ತರ ವಿಭಾಗ, ಬೆಂಗಳೂರು ನಗರ- ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್ ಸಿಎಲ್, ಬೆಂಗಳೂರು ನಗರ ಚೇತನ್ ಕುಮಾರ್ ಕಾರ್ಮಿಕ ಇಲಾಖಾಧಿಕಾರಿ ಮಂಡ್ಯ ವಿಭಾಗ, ಶಿವಮೊಗ್ಗ- ಪ್ರಕಾಶ್ ಡೆಪ್ಯುಟಿ ಡೈರೆಕ್ಟರ್ ಆರ್ಟಿಕಲ್ಸರ್ ಶಿವಮೊಗ್ಗ, ಶಿವಮೊಗ್ಗ ನಾಗೇಶ್ ಬಿ- ಅಧ್ಯಕ್ಷ ಅಂತರಗಂಗೆ ಗ್ರಾ.ಪಂ. ಭದ್ರವತಿ, ಬೆಂಗಳೂರು ನಗರ- ಅಥ್ತಾರ್ ಅಲಿ- ಡೆಪ್ಯುಟಿ ಕಂಟ್ರೋಲರ್ ಲೀಗಲ್ ಭೂ ವಿಜ್ಞಾನ, ಬೆಂಗಳೂರು-ರಮೇಶ್ ಕುಮಾರ್ ಜಾಯಿಂಟ್ ಕಮಿಷನರ್ ಕಮಿಷನರ್ ಕಮರ್ಷಿಯಲ್ ಟ್ಯಾಕ್ಸ್, ಬೆಂಗಳೂರು ನಗರ-ಬಿವಿ ರಾಜ ಎಫ್‌ಡಿಎ ಕೆಡಿಬಿ ಎಲ್‌ಎಎನ್‌ಡಿ acquisition, ಬೆಂಗಳೂರು ಗ್ರಾ- ಕೆ ನರಸಿಂಹ ಮೂರ್ತಿ ಪೌರಾಡಳಿತ ಆಯುಕ್ತ ಹೆಬ್ಬಗೋಡಿ, ಬೆಂಗಳೂರು ಗ್ರಾ- ಆರ್ ಸಿದ್ದಪ್ಪ ಸೀನಿಯರ್ ಪಶುವೈದ್ಯ-ದೊಡ್ಡ ಬೈಲವಂಗಲ ದೊಡ್ಡಬಳ್ಳಾಪುರ, ಯಾದಗಿರಿ-ಬಲವಂತ್ ಜಿಲ್ಲಾ ಪಂಚಾಯತ್ ಯಾದಗಿರಿ ಪ್ರಾಜೆಕ್ಟ್, ತುಮಕೂರು ಕೆಐಎಡಿಬಿ ಇಲಾಖೆ ಆಪರೇಟಿಂಗ್ ಆಪೀಸರ್ ಈ ಎಲ್ಲ ಅಧಿಕಾರಿಗಳಿಗೆ ಸಂಬಂಧಿಸಿದ 55 ಕಡೆ ತಪಾಸಣೆ ಮಾಡಲಾಗುತ್ತಿದೆ.

ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿ ರಂಗನಾಥಪುರದಲ್ಲಿ ತುಮಕೂರಿನ ಕೆಐಎಡಿಬಿ ಅಪರ ನಿರ್ದೇಶಕ ಸಿ.ಟಿ ಮುದ್ದುಕುಮಾರ್ ಅವರಿಗೆ ಸೇರಿದ ಫಾರಂಹೌಸ್ ಇದೆ. ತುಮಕೂರು ನಗರದ ಬನಶಂಕರಿ ನಗರದಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ಸಿಟಿ ಮುದ್ದುಕುಮಾರ್ ಅವರಿಗೆ ಸೇರಿದ ಮನೆ ಇದೆ.
ಜೊತೆಗೆ ತುಮಕೂರಿನ ಅಂತರಸನಹಳ್ಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಪ್ಲಾಸ್ಟಿಕ್ ಬಾಟಲ್ ತಯಾರಿಕಾ ಘಟಕವಿದೆ. ಈ ಎಲ್ಲ ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಸಿಟಿ ಮುದ್ದುಕುಮಾರ್ ಅವರಿಗೆ ಸೇರಿದ ಒಟ್ಟು ಏಳು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಸಿಟಿ ಮುದ್ದುಕುಮಾರ್ ಬೆಂಗಲೂರಿನ ನಾಗರಭಾವಿಯ ಎರಡನೇ ಹಂತದಲ್ಲಿ ವಾಸವಾಗಿದ್ದಾರೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಖನಿಜ ಭವನದಲ್ಲಿ ಕಚೇರಿ ಇದೆ.












Click it and Unblock the Notifications