ಲೋಕಾಯುಕ್ತ ಕಚೇರಿ ಕೆಲಸದ ಅವಧಿ ವಿಸ್ತರಣೆ

ಬೆಂಗಳೂರು, ಆಗಸ್ಟ್ 24 : ಕರ್ನಾಟಕ ಲೋಕಾಯುಕ್ತ ಕಚೇರಿಯ ಕೆಲಸದ ಸಮಯವನ್ನು ವಿಸ್ತರಣೆ ಮಾಡಲಾಗಿದೆ. ಒಂದು ಗಂಟೆಗಳ ಕಾಲ ಸಮಯವನ್ನು ವಿಸ್ತರಿಸಿ ಲೋಕಾಯುಕ್ತ ರಿಜಿಸ್ಟ್ರಾರ್ ಆದೇಶ ಹೊರಡಿಸಿದ್ದಾರೆ.

ಹಿಂದಿನ ವೇಳಾಪಟ್ಟಿಯಂತೆ ಲೋಕಾಯುಕ್ತ ಕಚೇರಿ ಬೆಳಗ್ಗೆ 10.30ಕ್ಕೆ ಆರಂಭವಾಗಿ 5 ಗಂಟೆಗೆ ಮುಕ್ತಾಯ ವಾಗುತ್ತಿತ್ತು. ಪರಿಷ್ಕೃತ ಆದೇಶದಂತೆ ಬೆಳಗ್ಗೆ ಮತ್ತು ಸಂಜೆ ಅರ್ಧ ಗಂಟೆಗಳ ಕಾಲ ಒಟ್ಟು 1 ಗಂಟೆ ಸಮಯವನ್ನು ವಿಸ್ತರಣೆ ಮಾಡಲಾಗಿದೆ.[ಸರ್ಕಾರಕ್ಕೆ ಮುಖಭಂಗ, ಲೋಕಾಯುಕ್ತ ಕಡತ ಮತ್ತೆ ವಾಪಸ್]

Lokayukta office timings rescheduled

ನೂತನ ಆದೇಶದ ಪ್ರಕಾರ ಲೋಕಾಯುಕ್ತ ಕಚೇರಿ ಬೆಳಗ್ಗೆ 10 ಕ್ಕೆ ಬಾಗಿಲು ತೆರೆಯಲಿದ್ದು, ಸಂಜೆ 5.30ರ ತನಕ ಕಾರ್ಯ ನಿರ್ವಹಣೆ ಮಾಡಲಾಗಿದೆ. ಲೋಕಾಯುಕ್ತ ರಿಜಿಸ್ಟ್ರಾರ್ ಅವರು ಈ ಕುರಿತು ಬುಧವಾರ ಆದೇಶ ಹೊರಡಿಸಿದ್ದಾರೆ.[ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಭಾಸ್ಕರರಾವ್ 7ನೇ ಆರೋಪಿ]

ಲೋಕಾಯುಕ್ತರೇ ಇಲ್ಲ : ಲೋಕಾಯುಕ್ತ ಕಚೇರಿ 1 ಗಂಟೆ ಹೆಚ್ಚು ಕಾರ್ಯನಿರ್ವಹಿಸಿದರೂ ಅಲ್ಲಿ ಲೋಕಾಯುಕ್ತರಿಲ್ಲ. ಲೋಕಾಯುಕ್ತ ನೇಮಕದ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ಎರಡು ಬಾರಿ ಮುಖಭಂಗವಾಗಿದೆ. ಲೋಕಾಯುಕ್ತ ಹುದ್ದೆಗೆ ಸರ್ಕಾರ ಶಿಫಾರಸು ಮಾಡಿದ್ದ ನ್ಯಾ.ಎಸ್‌.ಆರ್.ನಾಯಕ್ ಅವರ ಹೆಸರನ್ನು ರಾಜ್ಯಪಾಲರು 2 ಬಾರಿ ತಿರಸ್ಕರಿಸಿದ್ದಾರೆ.

ನ್ಯಾ.ಭಾಸ್ಕರರಾವ್ ಅವರಿಂದ ತೆರವಾಗಿರುವ ಕರ್ನಾಟಕ ಲೋಕಾಯುಕ್ತ ಹುದ್ದೆಗೆ ಎಸ್.ಆರ್.ನಾಯಕ್ ಅವರನ್ನು ನೇಮಿಸಲು ಸರ್ಕಾರ ನಿರ್ಧರಿಸಿತ್ತು. ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಪ್ರಸ್ತಾವನೆಯನ್ನು ಅವರು ವಾಪಸ್ ಕಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+