ಕಾಂಗ್ರೆಸ್ ಫೇಕ್ ಫ್ಯಾಕ್ಟರಿ ಬಗ್ಗೆ ಮಾಧ್ಯಮಗಳು ಎಚ್ಚರಿಕೆ ವಹಿಸಿ ಎಂದ ಜೆಡಿಎಸ್; ಕಾರಣವೇನು?
ಬೆಂಗಳೂರು, ಏಪ್ರಿಲ್. 22: ಲೋಕಸಭಾ ಚುನಾವಣೆ ವೇಳೆ ಹಲವು ಸಮೀಕ್ಷೆಗಳು ಬರುತ್ತಲೇ ಇರುತ್ತವೆ. ಮಾಧ್ಯಮ ಸಂಸ್ಥೆಗಳು ದಿನ ಪ್ರಕಟಿಸುತ್ತವೆ. ಆದರೆ, ಕೆಲವು ಸಮೀಕ್ಷೆ, ಜನಾಭಿಪ್ರಾಯಗಳು ಒಂದು ಪಕ್ಷದ ಪರ ಅಥವಾ ವಿರೋಧವಾಗಿ ಬಂದರೆ ಅದನ್ನು ಆ ಪಕ್ಷ ಅಲ್ಲಗೆಳೆಯುತ್ತದೆ.
ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮೂರು ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇತ್ತೀಚೆಗೆ ಈ ಮೂರು ಸ್ಥಾನಗಳಲ್ಲಿ ಜೆಡಿಎಸ್‌ಗೆ ಹಿನ್ನೆಡೆಯಾಗುತ್ತದೆ ಎಂಬ ವರದಿಯೊಂದು ಪ್ರಕಟವಾಗಿದೆ. ವರದಿಯನ್ನು ಹಂಚಿಕೊಂಡಿಕೊಂಡಿರುವ ಜೆಡಿಎಸ್ ಇದೊಂದು ಕಾಂಗ್ರೆಸ್ ಫೇಕ್ ಫ್ಯಾಕ್ಟರಿಯ ಸೃಷ್ಟಿ ಈ ಸುಳ್ಳು ಸುದ್ದಿ ಎಂದು ಕಿಡಿಕಾರಿದೆ.

ಜೆಡಿಎಸ್ ಬಗ್ಗೆ ಫೇಕ್ ನ್ಯೂಸ್ ಹರಡುತ್ತಿದೆ ಕಾಂಗ್ರೆಸ್!
ಈಗಾಗಲೇ ಹಲವು ಸಮೀಕ್ಷೆಗಳು ಹೊರಬಂದಿವೆ. ಅದರಲ್ಲಿ ಕೆಲವು ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿದ್ದರೇ, ಮತ್ತೆ ಕೆಲವು ಬಿಜೆಪಿ ಪರವಾಗಿವೆ. ಕೆಲವು ಅಭಿಪ್ರಾಯಗಳಿಗೆ ಪಕ್ಷಗಳು ಸಮ್ಮಿಸುವುದಿಲ್ಲ. ಹೀಗೆಯೇ ಒಂದು ಅಭಿಪ್ರಾಯ ವರದಿಗೆ ಜೆಡಿಎಸ್ ಕೆಂಡಾಮಂಡಲವಾಗಿದೆ. ಅದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
"ಕಾಂಗ್ರೆಸ್ ಫೇಕ್ ಫ್ಯಾಕ್ಟರಿಯ ಸೃಷ್ಟಿ ಈ ಸುಳ್ಳು ಸುದ್ದಿ, ಸುಳ್ಳು ಸುದ್ದಿ ಸೃಷ್ಟಿ ಮಾಡುವುದರಲ್ಲಿ ಕಾಂಗ್ರೆಸ್ ಪಕ್ಷದ್ದು ಎತ್ತಿದ ಕೈ, ಸುಳ್ಳು, ಪೊಳ್ಳು ಕಾಂಗ್ರೆಸ್ ಪಕ್ಷದ ಎರಡು ಮುಖ, ಅನಾಚಾರದ ದಶಾವತಾರ, ಕಾಂಗ್ರೆಸ್ ಪಕ್ಷ ಅದರ ಅಪರಾವತಾರ, ಮಾಧ್ಯಮವನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಳ್ಳುತ್ತಿದೆ" ಎಂದು ಜೆಡಿಎಸ್ ಸಾಮಾಜಿಕ ಮಾಧ್ಯಮದಲ್ಲಿ ಕಿಡಿಕಾರಿದೆ.
"ಮಾಧ್ಯಮದ ವರ್ಚಸ್ಸಿಗೆ ಹಾನಿ ಉಂಟು ಮಾಡುತ್ತಿದೆ. ಮಾಧ್ಯಮದ ವಿಶ್ವಾಸಾರ್ಹತೆಗೆ ಕಾಂಗ್ರೆಸ್ ಪಕ್ಷ ಮಾರಣಾಂತಿಕ ಪೆಟ್ಟು ನೀಡುತ್ತಿದೆ. ಕಾಂಗ್ರೆಸ್ ಫೇಕ್ ಫ್ಯಾಕ್ಟರಿ ಬಗ್ಗೆ ಮಾಧ್ಯಮಗಳು ಎಚ್ಚರಿಕೆ ವಹಿಸಬೇಕು ಎನ್ನುವುದು ನಮ್ಮ ವಿನಮ್ರ ಮನವಿ" ಎಂದು ಮಾಧ್ಯಮಗಳಿಗೆ ಮನವಿ ಮಾಡಿದೆ ಜೆಡಿಎಸ್.
•ಕಾಂಗ್ರೆಸ್ ಫೇಕ್ ಫ್ಯಾಕ್ಟರಿಯ ಸೃಷ್ಟಿ ಈ ಸುಳ್ಳು ಸುದ್ದಿ
— Janata Dal Secular (@JanataDal_S) April 22, 2024
•ಸುಳ್ಳು ಸುದ್ದಿ ಸೃಷ್ಟಿ ಮಾಡುವುದರಲ್ಲಿ ಕಾಂಗ್ರೆಸ್ ಪಕ್ಷದ್ದು ಎತ್ತಿದ ಕೈ
•ಸುಳ್ಳು, ಪೊಳ್ಳು ಕಾಂಗ್ರೆಸ್ ಪಕ್ಷದ ಎರಡು ಮುಖ
•ಅನಾಚಾರದ ದಶಾವತಾರ, ಕಾಂಗ್ರೆಸ್ ಪಕ್ಷ ಅದರ ಅಪರಾವತಾರ
•ಮಾಧ್ಯಮವನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಳ್ಳುತ್ತಿದೆ
•ಮಾಧ್ಯಮದ ವರ್ಚಸ್ಸಿಗೆ… pic.twitter.com/9wfgMoGK3v
ವರದಿಯಲಲ್ಲಿರೋದು ಏನು...?
'ಜೆಡಿಎಸ್‌ಗೆ 3 ಕ್ಷೇತ್ರದಲ್ಲಿಯೂ ಹಿನ್ನಡೆ? ಪಕ್ಷದ ಆಂತರಿಕ ವರದಿಯ ಎಚ್ಚರಿಕೆ; ವರ್ಕ್‌ಔಟ್ ಆಗದ ಮೈತ್ರಿ' ಎಂಬ ಶೀರ್ಷಿಕೆಯಲ್ಲಿರುವ ವರದಿಯಲ್ಲಿ, ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ತಮಗೆ ಸಿಕ್ಕಿರುವ ಮೂರು ಕ್ಷೇತ್ರಗಳನ್ನೂ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಜೆಡಿಎಸ್ ವರಿಷ್ಠರಿಗೆ ಆಘಾತವಾಗಿದೆ. ತಮಗೆ ಸಿಕ್ಕಿರುವ ಮೂರು ಕ್ಷೇತ್ರಗಳಲ್ಲಿಯೂ ಹಿನ್ನಡೆ ಉಂಟಾಗಲಿದೆ ಎಂದು ಸವಿಸ್ತಾರವಾದ ವರದಿಯಿದೆ.
ಇನ್ನು, ಜೆಡಿಎಸ್ ಎಂ.ಎಲ್.ಸಿ. ಟಿ.ಎ ಶರವಣ, ತಿಪ್ಪೇಸ್ವಾಮಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ, ಕರ್ನಾಟಕ ಕಾಂಗ್ರೆಸ್ ಪಕ್ಷವು ಮತದಾರರಿಗೆ ಗ್ಯಾರಂಟಿ ಕಾರ್ಡುಗಳನ್ನು ವಿತರಿಸುವ ಮೂಲಕ ಆಮಿಷ ಒಡ್ದುತ್ತಿರುವ ವಿಚಾರದ ಕುರಿತು ಚುನಾವಣಾ ಆಯೋಗಕ್ಕೆ ಜೆಡಿಎಸ್ ಪಕ್ಷದ ವತಿಯಿಂದ ದೂರು ಸಲ್ಲಿಸಿದ್ದಾರೆ.












Click it and Unblock the Notifications