ಮಂಡ್ಯ ಬಿಟ್ಟುಕೊಡದ ಜೆಡಿಎಸ್: ಕಾಂಗ್ರೆಸ್‌ನತ್ತ ಸುಮಲತಾ?: ಸುಳಿವು ಬಿಟ್ಟುಕೊಟ್ಟ ದೇವೇಗೌಡ

ಹುಬ್ಬಳ್ಳಿ, ಫೆಬ್ರವರಿ 09: ಲೋಕಸಭಾ ಚುನಾವಣೆ ಪ್ರಯುಕ್ತ ಬಿಜೆಪಿ - ಜೆಡಿಎಸ್ ಮೈತ್ರಿಕೂಟದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಕೆಲವು ಕ್ಷೇತ್ರಗಳನ್ನು ನೀಡುವಂತೆ ಬೇಡಿಕೆ ಇಟ್ಟಿರುವ ಜೆಡಿಎಸ್‌ಗೆ ಮಂಡ್ಯ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಅದನ್ನು ಬಿಟ್ಟು ಕೊಡದಿರಲು ತೀರ್ಮಾನಿಸಿದೆ.

ಜೆಡಿಎಸ್ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದೊಂದಿಗೆ ಮಾತ್ರವೇ ಹೊಂದಾಣಿಕೆ ಮಾಡಿಕೊಳ್ಲಲಾಗಿದೆ. ಈ ಬಾರಿ ಲೋಕಸಭಾ ಚುಣಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಜೊತೆಗೂಡಿ ನಾವು 28 ಲೋಕಸಭೆ ಕ್ಷೇತ್ರ ಗೆಲ್ಲುತ್ತೇವೆ. ಚುನಾವಣೆ ಸಂಬಂಧ ನಾವು ಮಂಡ್ಯ ಸೇರಿದಂತೆ ಆರು ಕ್ಷೇತ್ರಕ್ಕೆ ಬೇಡಿಕೆ ಇಟ್ಟಿದ್ದೇವೆ.

Lok Sabha Election 2024: JDS Asks 6 Constituency to BJP, Sumalatha May Join Congress: GT Devegowda

ಸುಮಲತಾ ಸ್ಪರ್ಧಿಸಿದರೆ ಸ್ವಾಗತ: ಆದರೆ?

ಬಿಜೆಪಿಯಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಷ್ ಅವರು ಕಣಕ್ಕಿಳಿದರೂ ಸ್ವಾಗತಿಸಲಿದ್ದೇವೆ ಎಂದು ಜೆಡಿಎಸ್ ಹಿರಿಯ ನಾಯಕ ಜಿ.ಟಿ. ದೇವೇಗೌಡ ಅವರು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಬಳಿ ನಾವು ಆರು ಕ್ಷೇತ್ರಗಳನ್ನ ಕೇಳಿದ್ದೇವೆ. ತುಮಕೂರು, ಹಾಸಾನ, ಮಂಡ್ಯ, ಮೈಸೂರು, ಕೋಲಾರ ಸೇರಿದಂತೆ ಆರು ಕ್ಷೇತ್ರ ನೀಡುವಂತೆ ಕೇಳಿದ್ದೇವೆ.

ಸಂಸದೇ ಸುಮಲತಾ ಅಂಬರೀಷ್ ಅವರು ಮಂಡ್ಯ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದರೆ ಸ್ವಾಗತಿಸುತ್ತೇವೆ. ಬೆಂಬಲಿಸುತ್ತೇವೆ. ಆದರೆ ಅವರು ಕಾಂಗ್ರೆಸ್ ಗೆ ಹೋಗಬಹುದು ಎಂದು ಜಿ.ಜಿ.ದೇವೇಗೌಡ ಅವರು ಮಂಡ್ಯ ಸಂಸದೆ ಕುರಿತು ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯ ಸಾಧಿಸಲು ಹಾತೊರೆಯುತ್ತಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ.

ಗೌಡರ ಕುಟುಂಬದಿಂದ ಇಬ್ಬರು ಸ್ಪರ್ಧೆ

ಇನ್ನೂ ನಾರಾಯಣಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಯಲ್ಲಿ ಕೂತಿದ್ದಾರೆ. ಹಾಗಾಗಿ ಸುಮಲತಾ ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆ ಇದೆ. ಅಕಸ್ಮಾತ್ ಸುಮಲತಾ ಅವರು ಬಿಜೆಪಿ ಅಭ್ಯರ್ಥಿ ಆದರೆ ಸ್ವಾಗತ ಎಂದು ಪುನರುಚ್ಚರಿಸಿದ ಅವರು, ಎಚ್‌ಡಿ ಕುಮಾರಸ್ವಾಮಿ, ಇಬ್ಬರು ಪ್ರಜ್ವಲ್ ಇಬ್ಬರು ಅಭ್ಯರ್ಥಿಗಳ ಆಗಬಹುದು. ಎಚ್‌ಡಿ ದೇವೇಗೌಡ ಕುಟುಂಬದಿಂದ ಇಬ್ಬರು ಸ್ಪರ್ಧೆ ಬಗ್ಗೆ ಅವರು ಮಾಹಿತಿ ನೀಡಿದರು.

Lok Sabha Election 2024: JDS Asks 6 Constituency to BJP, Sumalatha May Join Congress: GT Devegowda

ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ. ಬಿಜೆಪಿ ನಮ್ಮ ಮೈತ್ರಿ ವಿರೋಧ ಮಾಡಿಲ್ಲ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ದೌರ್ಜನ್ಯ ದಬ್ಬಾಳಿಕೆ ಹೆಚ್ಚಾಗುತ್ತಿದೆ. ಐದು ಗ್ಯಾರಂಟಿ ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಹಣ ಮಾತ್ರ ಸಲೀಸಾಗಿ ಹೋಗುತ್ತಿದೆ. ಲೋಕಸಭೆ ಅಷ್ಟೆ ಅಲ್ಲ ಮುಂದಿನ ವಿಧಾನಸಭೆ ಚುನಾವಣೆಗೂ ಹೊಂದಾಣಿಕೆ ಆಗಬೇಕು ಎಂದು ಹೇಳಿದರು.

ಬಿಜೆಪಿ ಸಿದ್ಧಾಂತವನ್ನು ಜೆಡಿಎಸ್ ಒಳಗಡೆ ಬಿಟ್ಕೋಳಲ್ಲ

ಎಚ್‌ಡಿ ಕುಮಾರಸ್ವಾಮಿ ಅವರಿಗೆ ಆವತ್ತು ಶ್ರೀರಾಮ ಭಕ್ತರೊಬ್ಬರು ಬಂದು ಕೇಸರಿ ಶಾಲು ಹಾಕಿದರು. ಕೇಸರಿ ಏನೂ ಬಿಜೆಪಿಯ ಸಿಂಬಲ್ ಅಲ್ಲಾ. ಕುಮಾರಸ್ವಾಮಿ ಬಿಜೆಪಿಯ ಸಿಂಬಲ್ ಇರುವ ಶಾಲು ಹಾಕಿಲ್ಲ. ಅದು ಆಂಜನೇಯನ ಧ್ವಜ, ನಮ್ಮ ಪಕ್ಷದ ತತ್ವ ಸಿದ್ದಾಂತ ಬೇರೆ. ಬಿಜೆಪಿ ತತ್ವ ಸಿದ್ದಾಂತ ಬೇರೆ. ಪ್ರಧಾನಿಯ ನಾಯಕತ್ವದ ಕಾರಣಕ್ಕೆ ನಾವು ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಬಿಜೆಪಿಯ ಯಾವ ತತ್ವ ಸಿದ್ಧಾಂತವನ್ನು ನಾವು ಜೆಡಿಎಸ್ ಪಕ್ಷದ ಒಳಗಡೆ ಬಿಟ್ಕೋಳಲ್ಲ.

ಕೇಂದ್ರ ಸರ್ಕಾರ ಅನುದಾನ ಕೊಟ್ಟಿದೆ. ಇದೇ ಸಿದ್ದರಾಮಯ್ಯ ಶಾಸಕರಿಗೆ ಏನ ಕೊಟ್ಟಿದಾರೆ. 224 ಶಾಸಕರಿಗೆ ಕೇವಲ 50 ಲಕ್ಷ ಕೊಟ್ಟಿದಾರೆ. ನಾವು ಯಾರ ಸರ್ಕಾರವನ್ನು ಅಂತ್ಯಗೊಳಿಸಿಲ್ಲ. ಕುಮಾರಸ್ವಾಮಿಯವರ ಸರ್ಕಾರ ಯಾರ ತಗೆದರೋ, ಈಗಲೂ ಹಾಗೇ ಆಗಬಹುದು. ಸರ್ಕಾರ ಬೀಳಲಿದೆ ಎಂದು ಹೇಳಲು ಆಗುವುದಿಲ್ಲ.

ಈ ಸರ್ಕಾರ ಐದು ವರ್ಷ ಉಳಿಯಲಿದೆ. ಮುನ್ನಡೆಯಲಿದೆ ಎಂದು ಸಹ ಹೇಳಲು ಆಗುವುದಿಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರ ಪತನ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+