ಮದ್ಯ ಪ್ರಿಯರೇ ಅಲಿಯಾಸ್ ಕುಡುಕರೇ ಗಮನಿಸಿ, ನಾಳೆ ಎಣ್ಣೆ ಸಿಗಲ್ಲ ಇವತ್ತೇ ಲಾಸ್ಟ್!
ಎಣ್ಣೆ ಹೊಡಿಯದೆ ಕೆಲವರಿಗೆ ನಿದ್ದೆ ಬರಲ್ಲ. ಇನ್ನೂ ಕೆಲವರಿಗೆ ಕೈಕಾಲು ಕೂಡ ಆಡೋದಿಲ್ಲ. ಎಣ್ಣೆ ಅಂದ್ರೆ ಲಿಕ್ಕರ್ ಆರೋಗ್ಯಕ್ಕೆ ಹಾನಿಕರ ಅಂತಾ ವೈದ್ಯರು ಹೇಳಿದರೆ, ಇಲ್ಲ ಎಣ್ಣೆ ತುಂಬಾ ಒಳ್ಳೆಯದು. ಕಷ್ಟ, ನೋವನ್ನು ಮರೆ ಮಾಚುವ ಔಷಧ ಅಂತಾ ಮದ್ಯ ಪ್ರಿಯರು ಎಂಜಾಯ್ ಮಾಡುತ್ತಾರೆ. ಹೀಗಿದ್ದಾಗ ನಾಳೆ ಕುಡುಕರ ಪಾಲಿನ ಸಾಂತ್ವನ ಕೇಂದ್ರ, ಬಂದ್ ಆಗಲಿವೆ. ಹಾಗೇ ಇವತ್ತೇ ಲಾಸ್ಟ್ ನಾಳೆ ನಿಮಗೆ ಎಣ್ಣೆ ಅಂಗಡಿ ತೆರೆಯೋದೆ ಇಲ್ಲ!
ಕರ್ನಾಟಕದಲ್ಲಿ ಎಣ್ಣೆ ರೇಟ್ ಜಾಸ್ತಿ ಅಂತ ಕೊರಗುತ್ತಿದ್ದ ಮದ್ಯ ಪ್ರಿಯರಿಗೆ ಶಾಕ್ ಸಿಕ್ಕಿದ್ದು, ಈಗ ಬಜೆಟ್‌ನಲ್ಲಿ ಮತ್ತೆ ಎಣ್ಣೆ ರೇಟ್ ರೈಸ್ ಮಾಡಲಾಗಿದೆ. 'ಮದ್ಯ' ಪ್ರಿಯರಿಗೆ ಈ ಆಘಾತವು ಇನ್ನೂ ಮರೆಯಾಗಿಲ್ಲ, ಹೀಗಿದ್ದಾಗಲೇ ಕರ್ನಾಟಕದ ರಾಜಧಾನಿಯಲ್ಲಿ ಇಂದೇ ಬಾರ್‌ಗಳು ಕ್ಲೋಸ್ ಆಗಲಿವೆ. ಹೀಗಾಗಿ ಕುಡುಕರಿಗೆ ಭಾರಿ ಆತಂಕ ಶುರುವಾಗಿದೆ. ನಾಳೆ ಎಣ್ಣೆ ಅಂಗಡಿ ಬಾಗಿಲು ಹಾಕಿಕೊಳ್ಳಲು ಕಾರಣ ಏನು ಗೊತ್ತೆ? ಹಾಗಾದರೆ ನಾಳೆ ಬಾರ್ ಕ್ಲೋಸ್ ಆಗಿದ್ದೇ, ಆದರೆ ಮತ್ತೆ ಯಾವಾಗ ರೀ ಓಪನ್ ಆಗೋದು ಗೊತ್ತಾ? ಬನ್ನಿ ತಿಳಿಯೋಣ.

ಕುಡುಕರಿಗೆ ದೊಡ್ಡ ಆಘಾತ!
ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆ 2024ರ ಫಲಿತಾಂಶ ಹಿನ್ನೆಲೆ, ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ಎಣ್ಣೆ ಅಂಗಡಿ, ಅಂದ್ರೆ ಮದ್ಯದ ಅಂಗಡಿಗಳನ್ನ ಬಂದ್ ಮಾಡಲಾಗಿತ್ತು. ಹಾಗೇ ಇದೀಗ ರಿಸಲ್ಟ್ ಹಿನ್ನೆಲೆಯಲ್ಲಿ ಕೂಡ ಬಾರ್‌ಗಳನ್ನ ಕ್ಲೋಸ್ ಮಾಡಲು ನಿರ್ಧರಿಸಲಾಗಿದೆ. ಹಾಗಾದರೆ ಯಾಕೆ ಎಣ್ಣೆ ಅಂಗಡಿ ಕ್ಲೋಸ್ ಮಾಡುತ್ತಿದ್ದಾರೆ? ಕಾನೂನು ಏನು ಹೇಳುತ್ತೆ? ಮುಂದೆ ಓದಿ.
ಎಣ್ಣೆ ಅಂಗಡಿ ಬಾಗಿಲು ತೆರೆಯಲ್ಲ!
ಚುನಾವಣೆ ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಯಲು & ಶಾಂತಿ ಸುವ್ಯವಸ್ಥೆಯ ಕಾಪಾಡುವ ಸಲುವಾಗಿ ಕರ್ನಾಟಕ ಅಬಕಾರಿ ನಿಯಮಗಳು 1967ರ ನಿಯಮ -10 (ಬಿ) ರನ್ವಯ ಹಾಗೂ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 135 (ಸಿ) ಅನ್ವಯದಂತೆ ಪ್ರದತ್ತವಾದ ಅಧಿಕಾರವನ್ನ ಚಲಾಯಿಸಿ ಮತ ಎಣಿಕೆ ಪ್ರಯುಕ್ತ, ದಿನಾಂಕ 20.02.2024ರ ಬೆಳಗ್ಗೆ 6.00 ಗಂಟೆಯಿಂದ, ಮಧ್ಯರಾತ್ರಿ 12 ಗಂಟೆ ತನಕ, ಬೆಂಗಳೂರು ನಗರ ಜಿಲ್ಲೆಯಾದ್ಯಂತ (ಪೊಲೀಸ್ ಕಮೀಷನರೇಟ್ ವ್ಯಾಪ್ತಿ ಹೊರತುಪಡಿಸಿ) ಎಲ್ಲಾ ವಿಧದ ಮದ್ಯ ವಹಿವಾಟು ನಿಷೇಧಿಸಿ, ಶುಷ್ಕ ದಿನ ಅರ್ಥಾತ್ ಡ್ರೈ ಡೇ (Dry Day) ಘೋಷಣೆ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿ ಕೆ.ಎ. ದಯಾನಂದ ಅವರು ಈ ಆದೇಶ ಹೊರಡಿಸಿದ್ದಾರೆ.
ಕಾನೂನು ಏನು ಹೇಳುತ್ತೆ ಗೊತ್ತಾ?
ಹಾಗೇ ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ 2024 ರ ರಿಸಲ್ಟ್ ಹಿನ್ನೆಲೆ, ದಿನಾಂಕ 20.02.2024ರ ಬೆಳಗ್ಗೆ 6.00 ಗಂಟೆಯಿಂದ ಮಧ್ಯರಾತ್ರಿ 12 ಗಂಟೆ ತನಕ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಶಾಂತಿ ಭಂಗ ಉಂಟು ಮಾಡುವುದು, ಕಾನೂನು & ಸುವ್ಯವಸ್ಥೆಗೆ ಧಕ್ಕೆ ತರುವುದು ಹಾಗೂ ಇತರೆ ಅಹಿತರ ಘಟನೆಗಳು ನಡೆಯುವಂತೆ ಮಾಡುವ ಸಂಭವನೀಯತೆ ಇದ್ದು, ಇದನ್ನು ತಡೆಗಟ್ಟುವುದು & ಮತ ಎಣಿಕೆ ಪಾವಿತ್ರತೆಯ ಕಾಪಾಡುವ ಹಿತದೃಷ್ಟಿಯಿಂದ ದಂಡ ಪ್ರಕ್ರಿಯ ಸಂಹಿತೆ, 1973 ಕಲಂ 144 ನಿಷೇಧಾಜ್ಞೆ ಜಾರಿಗೊಳಿಸಿದೆ ಜಿಲ್ಲಾಡಳಿತ.
5 ಜನರಗಿಂತ ಹೆಚ್ಚಿನ ಸಂಖ್ಯೆಯಲ್ಲಿ...
ಚುನಾವಣಾ ಅಭ್ಯರ್ಥಿ ಅಥವಾ ಅವರ ಬೆಂಬಲಿಗರು ಸೇರಿ 5 ಜನರಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತಿಲ್ಲ. ಶಸ್ತ್ರ, ಬಡಿಗೆ, ಭರ್ಜಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಟಿ, ದೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯ ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರವನ್ನು ಬಳಸುವಂತಿಲ್ಲ. ಈ ಪ್ರದೇಶದಲ್ಲಿ ಬರುವಂಥ ಜೆರಾಕ್ಸ್ ಅಂಗಡಿ, ಸೈಬರ್ ಕೆಫೆ, ಬುಕ್ ಸ್ಟಾಲ್ ನಿರ್ಭಂಧಿಸಿದೆ. ಕಲ್ಲು ಕ್ಷಾರಪದಾರ್ಥ, ಸ್ಪೋಟಕ ವಸ್ತು ಯಾವುದೇ ದಾಹಕ ವಸ್ತುವನ್ನ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ.
ರೇಟ್ ಹೆಚ್ಚಳದ ತಲೆಬಿಸಿ ಶುರು
ಮದ್ಯ ಪ್ರಿಯರಲ್ಲಿ ಸಾಕಷ್ಟು ವೆರೈಟಿ ಇದ್ದು ಕೆಲವರು ವಿಸ್ಕಿ ಇಷ್ಟಪಡ್ತಾರೆ. ಆದ್ರೆ ಇನ್ನ ಕೆಲವರು ರಮ್ ಮೊರೆ ಹೋಗ್ತಾರೆ. ಮತ್ತೆ ಕೆಲವರಿಗೆ ಬ್ರಾಂಡಿ ಅಂದ್ರೆ ತುಂಬಾ ಇಷ್ಟ. ಆದರೆ ಬಹುತೇಕರು ಬಿಯರ್ ಪ್ರಿಯರು. ಹೀಗೆ ಎಲ್ಲ ಬ್ರ್ಯಾಂಡ್ ಟೇಸ್ಟ್ ಮಾಡುವವರು ಕೂಡ ಇರ್ತಾರೆ. ಇವರೆಲ್ಲರ ಜೇಬಿಗೆ ಇನ್ನುಮುಂದೆ ಹೊರೆಯಾಗೋದು ಗ್ಯಾರಂಟಿ. ಯಾಕಂದ್ರೆ ಈಗ ವಿಸ್ಕಿ, ರಂ, ಬ್ರಾಂಡಿ, ಜಿನ್ ಸೇರಿ ಎಲ್ಲಾ ಬಗೆಯ ಮದ್ಯದ ರೇಟ್ ಏರಿಕೆ ಆಗೋದು ಬಹುತೇಕ ಪಕ್ಕಾ ಆಗಿದ್ದು. ಆದರೆ ಬಜೆಟ್ ಆದೇಶ ಜಾರಿಗೆ ಬಂದ ನಂತರ ಎಷ್ಟು ರೇಟ್ ಜಾಸ್ತಿ ಆಯ್ತು ಅನ್ನೋದು ಗೊತ್ತಾಗಲಿದೆ. ಈ ರೀತಿ ರೇಟ್ ರೈಸ್ ಆಗಿರುವ ಬೆನ್ನಲ್ಲೇ ಎಣ್ಣೆ ಅಂಗಡಿ ಕೂಡ ಬಂದ್ ಆಗಿದೆ.
ಕುಡುಕರಿಂದ ಭರ್ಜರಿ ಡಿಮ್ಯಾಂಡ್
ಇತ್ತೀಚೆಗೆ ಕುಡುಕರು ಮೀಟಿಂಗ್ ಮಾಡಿ, ನಮ್ಮ ಬೇಡಿಕೆ ಈಡೇರಿಸಿ ಅಂತಾ ಸರ್ಕಾರ ಬಳಿ ಮನವಿ ಇಟ್ಟಿದ್ದರು. ಆದರೆ ಕುಡುಕರ ಅಂದ್ರೆ ಮದ್ಯಪ್ರಿಯ ಸಂಘಟನೆ ಬೇಡಿಕೆ ಈಡೇರಿಲ್ಲ. ಈ ನಡುವೆ ಮತ್ತೊಮ್ಮೆ ಮದ್ಯದ ಬೆಲೆ ಏರಿಕೆಗೆ ಸರ್ಕಾರ ಮುಂದಾಗಿದ್ದು. ಹೀಗಾಗಿ ಇದೀಗ, ಮತ್ತಷ್ಟು ಬೇಸರ ಹೊರಹಾಕುತ್ತಿದ್ದಾರೆ ಮದ್ಯಪಾನ ಪ್ರಿಯರು. ಇದು ಸಾಲದು ಎನ್ನುವಂತೆ ಮದ್ಯದ ಬೆಲೆ, ಕೈಗೆ ಸಿಗದಷ್ಟು ಎತ್ತರಕ್ಕೆ ಹೋಗಿದೆ. ಕಳೆದ ಕೆಲವು ವರ್ಷಗಳಲ್ಲಿ ಮದ್ಯದ ಬೆಲೆ ಕೂಡ ವಿಪರೀತ ಏರಿಕೆ ಆಗುತ್ತಿದೆ ಎಂಬ ಆರೋಪ ಮಾಡುತ್ತಿದ್ದಾರೆ ಕುಡುಕರು.












Click it and Unblock the Notifications