Get Updates
Get notified of breaking news, exclusive insights, and must-see stories!

ಲಿಂಗಾಯತ vs ವೀರಶೈವ : ಎರಡೂ ಅಪ್ಪಟ ಜಂಗಮ ತತ್ವ

ವೀರಶೈವ ಮತ್ತು ಲಿಂಗಾಯತ ಬೇರೆಣಿಕೆಗಳು ಮತ್ತೆ ಇತ್ತೀಚೆಗೆ ಮುನ್ನೆಲೆಗೆ ಬರುತ್ತಿವೆ. ಸ್ಥೂಲ ಮೇಲ್ನೋಟದಲ್ಲಿ ಜೀವನಶೈಲಿ ಪೂಜಾವಿಧಾನ ಪ್ರತಿಪಾದನೆಗಳು ಒಂದೇ ಎನಿಸಿದರೂ ಆಚರಣೆಗಳಲ್ಲಿ ಕೆಲ ಸೂಕ್ಷ್ಮ ವ್ಯತ್ಯಾಸಗಳಿವೆ. ಈ ವ್ಯತ್ಯಾಸವು ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಎಂದು ಹೇಳಲು ಬಲವಾದ ಹಾಗೂ ಸೂಕ್ತವಾದ ಆಧಾರಗಳಲ್ಲ.

ಶರಣ ಚಳವಳಿಯ ಯಶಸ್ಸಿನ ನಂತರ ಅನೇಕ ನಾಥ ಪಂಥಗಳು, ಮಾಹೇಶ್ವರ (ಮಹೇಶ್ವರನನ್ನು ಪೂಜಿಸುವ), ಶೈವ (ಶಿವನನ್ನು ಪೂಜಿಸುವ) ಶರಣ ಚಳುವಳಿಯಲ್ಲಿ ವಿಲೀನವಾಗಿ ಹೋದವು. ಶರಣ ಚಳುವಳಿಯ ಒಂದು ವಿಶೇಷತೆಯೆಂದರೆ ಎಲ್ಲರಿಗೂ ತಮ್ಮ ಮೂಲ ಧರ್ಮವನ್ನು, ವ್ರತ ಅಥವಾ ದೇವರುಗಳನ್ನು ಆಚರಿಸುವ ಸ್ವಾತಂತ್ರವನ್ನು ಕೊಟ್ಟು ಸಮಾಜದಲ್ಲಿ ಸಮಾನತೆಯನ್ನು ಆಚರಿಸುವುದು.

ಬಸವಣ್ಣನ ಕಾಲಾನಂತರ ಅನೇಕ ಕವಲುಗಳಾಗಿ ಮುನ್ನಡೆದ ಲಿಂಗಾಯತ ಧರ್ಮವು ಕೆಳದಿ, ಹೊಯ್ಸಳ, ವಿಜಯನಗರ ಇನ್ನಿತರ ಕಡೆ ರಾಜಾಶ್ರಯವನ್ನು ಪಡೆದು ನಿಂತರೆ ಬಸವಣ್ಣನ ಕಲ್ಯಾಣ ಕ್ರಾಂತಿ ನಡೆದೆಡೆ ತನ್ನ ಮೂಲತತ್ವಕ್ಕನುಗುಣವಾಗಿ ಪ್ರಜಾಧರ್ಮವಾಗಿಯೇ ಉಳಿಯಿತು, ವೀರಶೈವ ಮತ್ತು ಲಿಂಗಾಯತ ಎರಡೂ ಪರ್ಯಾಯ ಪದಗಳಾಗಿ ಬಳಕೆಯಲ್ಲಿವೆ. ಮೊದಲ ಬಾರಿಗೆ ವೀರಶೈವ ಪದವು ಬಸವ ಪುರಾಣವನ್ನು ಕನ್ನಡಕ್ಕೆ ಅನುವಾದಿಸಿದ ಭೀಮಕವಿಯ "ಬಸವ ಪುರಾಣ" ದಲ್ಲಿ ಕಂಡು ಬರುತ್ತದೆ.

Lingayat v Veerashaiva : Cultural differences, Origin and much more

ಕೆಲ ಒಳ ಆಚರಣೆಗಳನ್ನು ಹೀಗೆ ವಿಂಗಡಿಸಬಹುದು.
ವೀರಶೈವ: ದ್ವೈತ
ಲಿಂಗಾಯತ : ಅದ್ವೈತ
ವೀರಶೈವ: 5 ಪೀಠಗಳು (ರಂಭಾಪುರಿ,ಕಾಶಿ,ಕೇದಾರ,ಉಜ್ಜಯನಿ, ಶ್ರೀಶೈಲ)
ಲಿಂಗಾಯತ: ಸ್ಥಳೀಯ ಮಠಗಳು(ಉದಾ: ಸಿದ್ದಗಂಗಾ,ಸಿರಿಗೆರೆ,ಸುತ್ತೂರು, ಬಾಲ್ಕಿ,ಗದಗ, ಕೊಪ್ಪಳ, ಅಥಣಿ, ಚಿತ್ರದುರ್ಗ ಇತ್ಯಾದಿ)
ಓದು
ವೀರಶೈವ: ಸಿದ್ಧಾಂತಶಿಖಾಮಣಿ, ವೇದಗಳು.
ಲಿಂಗಾಯತ: ವಚನಗಳು, ಶೂನ್ಯಸಂಪಾದನೆ.
ಮೂಲಪುರುಷ:
ವೀರಶೈವ: ಪಂಚ ಆಚಾರ್ಯರು. (ರೇಣುಕಾಚಾರ್ಯ, ಏಕೋರಾಮಾರಾಧ್ಯ,ಪಂಡಿತಾರಾಧ್ಯ,ಮರುಳಾರಾಧ್ಯ ವಿಶ್ವಾರಾಧ್ಯ - ಪೀಠಗಳಿಗೊಬ್ಬರು )
ಲಿಂಗಾಯತ: ಲೋಕಾಯತ ಹಿನ್ನೆಲೆ. (ಯಾರೂ ಇಲ್ಲ)
ಧಾರಣೆ:
ವೀರಶೈವ: ವಿಭೂತಿ, ಗಂಧ, ಅರಿಷಿಣ, ಕುಂಕುಮ.
ಲಿಂಗಾಯತ: ವಿಭೂತಿ
ಸಾಮ್ಯತೆಗಳು:
ಲಿಂಗಪೂಜೆ, ಲಿಂಗಧಾರಣೆ. ಲೋಕಾಯತ ಹಿನ್ನೆಲೆ, ನೀರಿನಿಂದ ಪೂಜೆ. ಉದಾ: ರುದ್ರಾಭಿಷೇಕ
(ಆರ್ಯರದು ಬೆಂಕಿಯ ಪೂಜೆ.ಉದಾ:ಹೋಮ)
ಮಡಿಮೈಲಿಗೆಗಳು:
imported as process of Brahminization.

ಹುಟ್ಟು ಸಾವಿನ ಸೂತಕಗಳು:
ಎರಡರಲ್ಲೂ ಇಲ್ಲ. ಎರಡರಲ್ಲೂ ಸತ್ತವರನ್ನು ಹೂಳಲಾಗುತ್ತದೆ. ವಿಭೂತಿ ಹೂಳುವುದರ ಸಮಯದಲ್ಲಿ ಬಳಕೆಯಾಗುವ ಬಹುಮುಖ್ಯ ಘಟಕಾಂಶ ವಿಭೂತಿ.

ಲಿಂಗಾಯತ ಎನ್ನುವುದು ಧರ್ಮವಾದರೆ ವೀರಶೈವ ಎನ್ನುವುದು ವ್ರತ! ಎರಡೂ ಅಪ್ಪಟ ಜಂಗಮ ತತ್ವಗಳು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+